May 6, 2024

Bhavana Tv

Its Your Channel

ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಶಾಸಕ ದಿನಕರ ಶೆಟ್ಟಿ ವಿರುದ್ಧ ಗಂಭೀರ ಆರೋಪ

ಹೊನ್ನಾವರ: ಒಬ್ಬ ಶಾಸಕನಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಬೇಕಾದ ಕೆಲಸ ಯಾವುದು ಎನ್ನುವ ಅರಿವೂ ಕೂಡ ಇಲ್ಲವೆ?. ಮೇಲ್ಸೇತುವೆ ಕಾಮಗಾರಿಯನ್ನು ಕೇಂದ್ರ ಸಚಿವರು ಹಾಗೂ ಸಂಸದರು ಮಾಡುವ ಕೆಲಸ ಎನ್ನುವುದನ್ನು ಈಗಲಾದರೂ ಅರಿತುಕೊಳ್ಳಲಿ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಶಾಸಕ ದಿನಕರ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದರು.

ಅವರು ತಾಲೂಕಿನ ಖಾಸಗಿ ಹೋಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹೊನ್ನಾವರ ಪಟ್ಟಣದಲ್ಲಿ ಮೇಲ್ಸೇತುವೆ ವಿಚಾರವಾಗಿ ಶಾಸಕ ದಿನಕರ ಶೆಟ್ಟಿ ಅವರು ಹಿಂದಿನ ಕಾಂಗ್ರೆಸ್ ಸರ್ಕಾರದ ಕರ್ಮಕಾಂಡ ಎಂದು ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ. 2013 ರಲ್ಲಿ ನಾನು ಶಾಸಕಳಾಗಿದ್ದಾಗ 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು ಅನ್ನುವುದು ಬಿಟ್ಟರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿಲ್ಲ. ಶುಕ್ರವಾರ ತಾಲೂಕಿಗೆ ಆಗಮಿಸಿದ ಅನುಭವಿ ಸಂಸದ ಅನಂತಕುಮಾರ ಹೆಗಡೆ ಅವರು ರಾಜ್ಯ ಸರ್ಕಾರ ಜಾಗ ನೀಡಿದರೆ ಮೇಲ್ಸೇತುವೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅವರದೇ ಸರ್ಕಾರವಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜಾಗ ನೀಡಿದರೆ ಮೇಲ್ಸೇತುವೆ ಮಾಡುತ್ತೇವೆಂದು ಸಂಸದರು ಹೇಳಿದ್ದಾರೆ. ಸಂಸದರು ಪರೋಕ್ಷವಾಗಿ ಶಾಸಕ ದಿನಕರ ಶೆಟ್ಟಿ ಅವರು ಮೇಲ್ಸೇತುವೆಗೆ ಜಾಗ ತನ್ನಿ ಎಂಬAತಾಗಿದೆ. ಹೊನ್ನಾವರ ಜನತೆಗೂ ಕೂಡಾ ಮೇಲ್ಸೇತುವೆ ತೀರಾ ಅಗತ್ಯವಿದೆ. ಅಪಘಾತಗಳು ನಿರಂತರ ನಡೆಯುತ್ತಿವೆ. ಹೀಗಾಗಿ ಈಗಿನ ಶಾಸಕ ದಿನಕರ ಶೆಟ್ಟಿ ಅವರು ಸಂಸದರ ಮಾತಿಗೆ ಬೆಲೆ ಕೊಡುವುದಾದರೆ ಈ ತಕ್ಷಣದಲ್ಲಿ ಮೇಲ್ಸೇತುವೆಗೆ ರಾಜ್ಯ ಸರ್ಕಾರದಿಂದ ಜಾಗ ನೀಡುವ ಕೆಲಸ ಮಾಡಲಿ ಎಂದು ಅವರು ಸವಾಲು ಹಾಕಿದರು.

ನನ್ನ ಅವಧಿಯಲ್ಲಿ ಹೊನ್ನಾವರ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ತಂದಾಗ ಅವೈಜ್ಞಾನಿಕ ಕಾಮಗಾರಿ, ಕಳಪೆ ಕಾಮಗಾರಿ ಹೇಳಿ ಆಕ್ಷೇಪ ಮಾಡಿದ್ದರು. ಕೆಲಸ ನಿರ್ವಹಣೆಗೂ ಆಗ ತೊಂದರೆ ನೀಡಿದ್ದರು. ಪೈಪ್ ಅಳವಡಿಸುವಾಗ ಗುಣಮಟ್ಟದ ಪ್ರಶ್ನೆ ಮಾಡಿದ್ದರು. ಆದರೆ ಈಗ ಇವರೂ ಕೂಡ ಅದೇ ಕೆಲಸ ಪ್ರಾರಂಭಿಸಿದ್ದಾರೆ. ಈಗ ಇವರೇನು ಚಿನ್ನ ಅಥವಾ ಬೆಳ್ಳಿ ಪೈಪ್ ಅಳವಡಿಸುತ್ತಿದ್ದಾರೆಯೇ ? ಎಂದು ವ್ಯಂಗ್ಯವಾಡಿದರು.

ಈಗಿನ ಶಾಸಕರಿಗೆ ಸುಖಾ-ಸುಮ್ಮನೆ ಆರೋಪ ಮಾಡುವುದೇ ಒಂದು ಖಯಾಲಿಯಾಗಿದೆ.
ಬಹುಕೋಟಿ ವೆಚ್ಚದ ನವಗ್ರಾಮ ಕುಡಿಯುವ ನೀರಿನ ಯೋಜನೆಗೆ ಪದೇಪದೆ ನಾನೇ ತಂದಿದ್ದು ಎಂದು ಹೇಳಿಕೊಳ್ಳುವ ಶಾಸಕರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಮಾಧ್ಯಮದವರಿಗೆ ಸೂಕ್ತ ದಾಖಲೆ ನೀಡುವ ಮೂಲಕ ಹಾಲಿ ಶಾಸಕರಿಗೆ ತಿರುಗೇಟು ನೀಡಿದರು. ಫಾರೆಸ್ಟ್ ಕ್ಲಿಯರೆನ್ಸ್ ಸೇರಿದಂತೆ ಇತರ ಸಣ್ಣಪುಟ್ಟ ವಿಷಯವನ್ನೂ ದೊಡ್ಡದು ಮಾಡಿ ತಾನೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡು ಫೋಟೊಗೂ ಫೋಸ್ ಕೊಡುತ್ತಾರೆ. ಯೋಜನೆಗಳೆಲ್ಲ ಯಾರ ಅವಧಿಯಲ್ಲಿ ಆಗಿದ್ದು, ಯಾರು ತಂದಿದ್ದು ಎಂಬುದನ್ನು ಜನರು ಚೆನ್ನಾಗಿ ಅರಿತಿದ್ದಾರೆ. ಈ ಯೋಜನೆ ಬಗ್ಗೆ ಯಾರೇ ಮನವಿ ನೀಡಿದರೂ ಕಡತದಲ್ಲಿ ಸೇರಿರುತ್ತದೆ. ಇವರು ಕುಡಿಯುವ ನೀರಿನ ಯೋಜನೆ ಬಗ್ಗೆ ಮನವಿ ಸಲ್ಲಿಸಿದ ದಾಖಲೆಗಳಿದ್ದರೆ ಬಿಡುಗಡೆಮಾಡಲಿ ಎಂದು ಸವಾಲು ಹಾಕಿದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ತಂದಿರುವ ಅದೆಷ್ಟೋ ಕಾಮಗಾರಿಗಳಿಗೆ ಪುನಃ ಗುದ್ದಲಿ ಪೂಜೆ, ಶಂಕು ಸ್ಥಾಪನೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಅವಧಿಯಲ್ಲಿ ತಂದ ಅನುದಾನಕ್ಕೆ ಗುದ್ದಲಿ ಪೂಜೆಯೂ ಇಲ್ಲ. ಶಂಕು ಸ್ಥಾಪನೆಯೂ ಇಲ್ಲ. ಹಾಗಾದರೆ ಇವರು ತಂದ ಅನುದಾನ ಎಲ್ಲಿ ಹೋಗುತ್ತಿದೆ?. ಎಲ್ಲವೂ ಗುಳಂ ಆಗುತ್ತಿದೆಯೇ? ಎಂದು ಆರೋಪಿಸಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುವ ಶಕ್ತಿ ನನಗಿಲ್ಲ ಎಂದು ಒಬ್ಬ ಶಾಸಕರು ಹೇಳುವ ಮೂಲಕ ತಾವು ಕೈಲಾಗದವರು ಎಂಬAತೆ ತೋರಿಸಿಕೊಂಡAತಾಗಿದೆ. 32 ಸಾವಿರ ಮತದ ಅಂತರದ ಗೆಲವುದು ಕಂಡು ವೋಟು ಕೊಟ್ಟ ಜನರಿಗಾಗಿ ಎಷ್ಟೇ ಕಷ್ಟವಾದರೂ ಆಸ್ಪತ್ರೆ ತರುತ್ತೇನೆ ಎನ್ನುವುದನ್ನು ಬಿಟ್ಟು ನನಗೆ ಆ ಶಕ್ತಿ ಇಲ್ಲ ಎನ್ನುವುದನ್ನು ಬಿಟ್ಟು ಕೊನೆ ಪಕ್ಷ ಟ್ರಾಮಾ ಸೆಂಟರ್‌ನ್ನಾದರೂ ತಂದು ಜನರ ಜೀವ ರಕ್ಷಿಸುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಅಪಘಾತಗಳು ನಡೆಯುತ್ತಲೇ ಇದೆ. ಶಾಸಕರು ಸಂಬAಧಪಟ್ಟವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗದೆ ಮೃದು ಧೋರಣೆ ತೋರಿಸುತ್ತಿದ್ದಾರೆ ಎಂದರು.

2017 ರ ಪರೇಶ ಮೇಸ್ತ ಸಾವು ಪ್ರಕರಣ ಈವರೆಗೂ ತನಿಖೆಯಾಗಿಲ್ಲ. ಬಡ ಮೀನುಗಾರನಿಗೆ ಇನ್ನೂ ತನಕ ನ್ಯಾಯ ಒದಗಿಸಿಕೊಡುವಲ್ಲಿ ಬಿಜೆಪಿ ವಿಫಲವಾಗಿದೆ. ಪರೇಶ್ ಸಾವಿನ ಘಟನೆ ನಡೆದಾಗ ನಮ್ಮ ಸಂಸದ ಅನಂತಕುಮಾರ ಹೆಗಡೆ ಹಾಗೂ ನೆರೆಯ ಸಂಸದರಾದ ಶೋಭಾ ಕರಾಂದ್ಲಾಜೆ, ಘಟಾನುಘಟಿ ಬಿಜೆಪಿ ಮುಖಂಡರು ಸಿಬಿಐ ತನಿಖೆಗೆ ಒತ್ತಾಯಿಸಿ, 24 ಗಂಟೆಯಲ್ಲಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಐದು ವರ್ಷ ಸಮೀಪಿಸುತ್ತಿದ್ದರೂ ಪರೇಶ ಮೇಸ್ತನನ್ನೇ ಮರೆತುಬಿಟ್ಟಿದ್ದಾರೆ. ಮೊನ್ನೆ ಸಂಸದರು ತಾಲೂಕಿಗೆ ಬಂದಾಗ ಆ ವಿಷಯವನ್ನೂ ಪ್ರಸ್ತಾಪಿಸಿಲ್ಲ. ಪರೇಶ ಕುಟುಂಬಕ್ಕೂ ಭೇಟಿ ನೀಡಿಲ್ಲ. ಕೇವಲ ಚುನಾವಣೆಗಾಗಿ ಮಾತ್ರ ಪರೇಶ ಘಟನೆ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದರು ಎಂದರು.

ಹಾಲಿ ಶಾಸಕರು ಹೊನ್ನಾವರಕ್ಕೆ ತೀರಾ ಅಗತ್ಯ ಇರುವ ನೂತನವಾದ ಬಸ್ಸು ತಂಗುದಾಣ ನಿರ್ಮಾಣ ಮಾಡಿಸುತ್ತಿದ್ದಾರೆ ಈ ಕೆಲಸಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಕೂಡ ಬೇರೆಯವರು ತಂದಿರುವ ಕೆಲಸವನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿ ಕೊಳ್ಳಲಿ ಎಂದು ಶಾರದಾ ಶೆಟ್ಟಿ ಹೇಳಿದರು.
ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ಗಿಫ್ಟ್ ಸಂಸ್ಕೃತಿ ಚಾಲ್ತಿಯಲ್ಲಿದೆ. ದೊಡ್ಡ ದೊಡ್ಡ ಗಿಫ್ಟ್ ಪಡೆದು ಕೊಳ್ಳುವ ಬಗ್ಗೆ ಸುದ್ದಿಯಾಗುತ್ತಿದೆ. ಹಾಲಿ ಶಾಸಕರು ಅಭಿವೃದ್ಧಿ ಮಾಡುವುದು ಬಿಟ್ಟು ಬೊಗಳೆ ಬಿಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ. ಮಾಜಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ, ಮುಖಂಡರಾದ ಲಂಬೋದರ ನಾಯ್ಕ, ದಾಮೋದರ ನಾಯ್ಕ, ಗಣೇಶ ನಾಯ್ಕ, ಜಕ್ರಿಯಾ ಸಾಬ್, ಕೇಶವ ಮೇಸ್ತ, ಕೆ. ಎಚ್. ಗೌಡ, ಸಂದೇಶ ಶೆಟ್ಟಿ ಇನ್ನಿತರ ಮುಖಂಡರು, ಪಕ್ಷದ ಕಾರ್ಯಕರ್ತರು ಇದ್ದರು

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: