May 16, 2024

Bhavana Tv

Its Your Channel

ಹೊನ್ನಾವರ ಲಯನ್ ವಿದ್ಯಾಭವನದಲ್ಲಿ ಲಿಯೋ ಕ್ಲಬ್ ಸಂಘಟಿಸಿದ ನೂತನ ಲಿಯೋ ಸದಸ್ಯರ ಪ್ರಮಾಣ ವಚನ ಬೋಧನಾ ಸಮಾರಂಭ

ಹೊನ್ನಾವರ : ಯಾರಲ್ಲಿ ತಂದೆ ತಾಯಂದಿರನ್ನು ಹಾಗೂ ಗುರು ಹಿರಿಯರನ್ನು ಗೌರವಿಸುವ ಗುಣವಿರುತ್ತದೆಯೋ, ಅಂತವರಲ್ಲಿ ಸೇವಾ ಮನೊಭಾವನೆಯಂತಹ ಗುಣಗಳನ್ನು ಕಾಣಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಮ.ಜೆ.ಎಫ್ ಲಯನ್ ಎಸ್.ಜೆ.ಕೈರನ್ನ ಕರೆ ನೀಡಿದರು.

ಅವರು ಇತ್ತೀಚೆಗೆ ಹೊನ್ನಾವರ ಲಯನ್ ವಿದ್ಯಾಭವನದಲ್ಲಿ ಲಿಯೋ ಕ್ಲಬ್ ಸಂಘಟಿಸಿದ ನೂತನ ಲಿಯೋ ಸದಸ್ಯರ ಪ್ರಮಾಣ ವಚನ ಬೋಧನಾ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಮೊದಲು ನಾವು ನಮ್ಮ ತಂದೆ ತಾಯಂದಿರನ್ನು ಹಾಗೂ ಗುರುಹಿರಿಯರನ್ನು ಗೌರವಿಸುವುದನ್ನು ತಿಳಿಯಬೇಕು.ಆಗಮಾತ್ರ ನಮ್ಮಸುತ್ತಮುತ್ತಲಿನ ನೊಂದವರ ಧ್ವನಿಯಾಗಲು ಸಾಧ್ಯ. ಪ್ರಚಾರಕ್ಕಾಗಿ ಸೇವೆ ಮಾಡದೇ,ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು, ನೊಂದವರ ಬಾಳಿಗೆ ಬೆಳಕಾಗುವಂತಹ ಕೆಲಸಗಳ ಮೂಲಕ ಸಮಾಜ ಗುರುತಿಸಲ್ಪಡುವ ವ್ಯಕ್ತಿಯಾಗಿ ಬಾಳಿ ಎಂದರು.

ಲಯನ್ ಕಾರ್ಯದರ್ಶಿ ಉದಯ ನಾಯ್ಕ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ವೇದಿಕೆಯಲ್ಲಿ ಲಿಯೋ ಕ್ಲಬ್ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಹೆಗಡೆ ಉಪಸ್ಥಿತರಿದ್ದರು. ಕವಿತಾ ಶೇಟ್ ಮತ್ತು ಚೈತ್ರಾ ಬೆಳಕೊಂಡ ಪ್ರಾರ್ಥಿಸಿದರು.ಲಿಯೋ ಕ್ಲಬ್ ಅಧ್ಯಕ್ಷರಾದ ಸ್ವಾತಿ ಶೇಟ್ ಸ್ವಾಗತಿಸಿದರು. ಲಿಯೋ ಸಲಹೆಗಾರರಾದ ಎಮ್.ಜೆ.ಎಫ್ ಲಯನ್ ರಾಜೇಶ ಸಾಳೇಹಿತ್ತಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೇಶ ನಾಯ್ಕ ಮತ್ತು ಧನ್ಯಾ ಭಟ್ ನಿರೂಪಿಸಿದರು.ಖಜಾಂಚಿ ಚಿತ್ರಾ ಭಟ್ ವಂದಿಸಿದರು.
ರದಿ ; ವೆಂಕಟೇಶ ಮೇಸ್ತ ಹೊನ್ನಾವರ.

error: