May 4, 2024

Bhavana Tv

Its Your Channel

ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪ್ರಯುಕ್ತ ತೀರ್ಥಸ್ನಾನ

ಹೊನ್ನಾವರ: ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿರುವ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಳ್ಕೂರಿನ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆಯ ಪ್ರಯುಕ್ತ ನಡೆದ ತೀರ್ಥಸ್ನಾನದಲ್ಲಿ ಮಂಗಳವಾರ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

            ಭಕ್ತರ ಸಂಕಷ್ಟಗಳನ್ನು  ಪರಿಹರಿಸುವ ಜಗನ್ಮಾತೆಯ ಅಪ್ಪಣೆಯಂತೆ ಪ್ರತಿ ಅಮವಾಸ್ಯೆಯ ದಿನದಂದು ಸಾವಿರಾರು  ಭಕ್ತರು ತೀರ್ಥ ಸ್ನಾನ ಮಾಡುತ್ತಾರೆ. ಆರೋಗ್ಯ ಸಮಸ್ಯೆಗಳಿಗೆ  ಹಾಗೂ ಇನ್ನೀತರ ಸಮಸ್ಯೆಗಳಿಗೆ ಸಂಭAದಿಸಿದAತೆ  ಮಂಗಳವಾರ   ಶುಕ್ರವಾರ ಹಾಗೂ  ರವಿವಾರ ವಿಶೇಷ ದರ್ಶನದಲ್ಲಿ ದೇವಿ ಸೂಚಿಸಿದ  ಸೂಚನೆಯಂತೇ ಭಕ್ತರುತೀರ್ಥ ಸ್ನಾನ ಮಾಡುತ್ತಾರೆ.
 ಪ್ರಧಾನ ಅರ್ಚಕ ಮಾದೇವ ಸ್ವಾಮೀಯವರ ಮಾಗದರ್ಶನದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಅಮವಾಸ್ಯೆಯ ತೀರ್ಥ ಸ್ನಾನದಂದು ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಲೋಕ ಕಲ್ಯಾಣಾರ್ಥ ಚಂಡಿಹವನ ನಡೆಯಿತು. ಭಕ್ತರಿಂದ ಬಾಳೆಕೋನೆ ಸೇವೆ, ತುಪ್ಪದ ದೀಪದ ಸೇವೆ, ಹೂವಿನ ಅಲಂಕಾರ ಸೇವೆ ಹಾಗೂ ಅನ್ನದಾನದ ಸೇವೆಗಳು ನಡೆದವು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: