May 5, 2024

Bhavana Tv

Its Your Channel

ಉಪ್ಪೋಣಿ ಶಾರದಾಂಬ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಹೊನ್ನಾವರ ತಾಲೂಕಿನ ಉಪ್ಪೋಣಿ ಶಾರದಾಂಬ ಪಿಯು ಕಾಲೇಜಿನ ಕಂಪ್ಯೂಟರ್ ಲ್ಯಾಬ್‌ನ್ನು ಸಂಸ್ಥೆಯ ಅಧ್ಯಕ್ಷ ಮಾಜಿ ಜಿ.ಪಂ. ಅಧ್ಯಕ್ಷರಾದ ಆರ್.ಎಸ್. ರಾಯ್ಕರ್ ಉದ್ಘಾಟಿಸಿದರು.

ಸಭಾಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಲು ಈ ಸಂಸ್ಥೆಯು ಬಹುಮುಖ್ಯ ಕೊಡುಗೆ ನೀಡಿದೆ. ಇಂದು ಕಂಪ್ಯೂಟರ್ ಜ್ಞಾನ ತೀರಾ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಸಂಸ್ಥೆ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದೆAದು ಸೇವೆ ಆರಂಭಗೊಳಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು. ಶೈಕ್ಷಣಿಕ ಸಂಸ್ಥೆಯು ಜನಮನ್ನಣಿ ಪಡೆಯಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕಡಿಮೆ ಅವಧಿಯಲ್ಲಿ ಇಂತಹ ಜನಪ್ರೀಯತೆ ಪಡೆಯಲು ನುರಿತ ಉಪನ್ಯಾಸಕರು ಹಾಗೂ ಉತ್ತಮ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಸಾಧನೆಯು ಸಂಸ್ಥೆ ಮಾಡಲಿ ಅದಕ್ಕೆ ಆಡಳಿತ ಮಂಡಳಿಯ ಸಹಕಾರ ಸದಾ ಕಾಲ ಇರಲಿದೆ ಎಂದು ಶುಭಹಾರೈಸಿದರು.
ಉಪಾಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಶೈಕ್ಷಣಿಕವಾಗಿ ಸಾಧನೆ ಮಾಡಲು ಈ ಸೌಲಭ್ಯ ಇನ್ನಷ್ಟು ಪರಿಣಾಮಕಾರಿಯಾಗಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಸಮಾಜ ಸೇವಕ ಕರೀಂ ತಲಕಣಿ, ಉರ್ದು ಅಭಿವೃದ್ದಿ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಸಾಬ್, ಉಪಾಧ್ಯಕ್ಷ ಜೆಪ್ರಿ ಅಹಮ್ಮದ್ ದಾವುದ್, ಕಾರ್ಯದರ್ಶಿ ಇಪ್ತಿಕಾರ್ ತಲಕಣಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹೆಗಡೆ, ಸಂಸ್ಥೆಯ ದಾನಿ ಬಾವಫಕೀ ಮಸ್ತಾನ್, ಯಾಸಿನ್ ಯಾಜಿ, ಅಜಾದ್ ಹೊನ್ನಾವರ, ಅಲ್ಲಾವುದ್ದೀನ್, ಅಹಮ್ಮದ್ ಮೊಕ್ತೆಸರ್, ಶಾರದಾಂಬ ಪ್ರೌಡಶಾಲೆಯ ಮುಖ್ಯೋಪಧ್ಯಾಯರಾದ ಜೆ.ಎಂ.ಮುಕ್ರಿ, ಸ್ಥಳಿಯರಾದ ಮುಜಾಮಿಲ್ ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಸುರೇಶ ವೈದ್ಯ ಸ್ವಾಗತಿಸಿ ಉಪನ್ಯಾಸಕಿ ಮಮತಾ ನಾಯ್ಕ ವಂದಿಸಿದರು. ಪ್ರತಿಕ್ಷಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

error: