May 18, 2024

Bhavana Tv

Its Your Channel

ಕಾಸರಕೋಡ ಟೊಂಕದ ಬಳಿ ಆಮೆಯ ಕಳೆಬರ ಪತ್ತೆ, ಆಮೆ ಸಾವಿನ ಬಗ್ಗೆ ಶಂಕೆ, ಮರಣೋತ್ತರ ಪರೀಕ್ಷೆಗಾಗಿ ಅರಣ್ಯ ಇಲಾಖೆಯ ವಶ

ಹೊನ್ನಾವರ: ಎರಡು ದಿನಗಳ ಹಿಂದೆ ಮೊಟ್ಟೆ ಇಡಲು ಬಂದಿದ್ದ ಆಮೆಯ ಕಳೆಬರ ಪತ್ತೆಯಾಗಿದೆ. ಆಮೆ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಮೆಯ ದೇಹವನ್ನ ಹೊನ್ನಾವರ ಅರಣ್ಯ ಇಲಾಖೆಯ ಅಧಿಕಾರಿಗಳು ಕಳುಹಿಸಿದ್ದಾರೆ.

ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯ ದಿ ಹೊನ್ನಾವರ ಪೋರ್ಟ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸುಪರ್ಧಿಯಲ್ಲಿರುವ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಕಡಲತೀರದಲ್ಲಿ ಕಡಲಾಮೆಗಳು ಸಂತಾನಾಭಿವ್ರಧ್ಧಿಗಾಗಿ ಮೊಟ್ಟೆ ಇಡಲು ಬರುವ ರಿಡ್ಲೆ ಜಾತಿಯ ಕಡಲಾಮೆಗಳನ್ನು ಹೊಡೆದು ಸಾಯಿಸುವ ಅಮಾನವೀಯ ಕೃತ್ಯ ಎಸಗಿದ್ದಾರೆ ಎಂದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರ ಮುಖಂಡರು ಆಗ್ರಹ ವ್ಯಕ್ತ ಪಡಿಸಿದ್ದಾರೆ.

ಕಡಲಾಮೆಗಳನ್ನು ಹಿಂದುಗಳು ಅದರಲ್ಲೂ ವಿಶೇಷವಾಗಿ ಇಲ್ಲಿನ ಮೀನುಗಾರರು ಕಡಲಾಮೆಗಳನ್ನು ದೈವಿಸ್ವರೂಪ ಎಂದು ಪೂಜನೀಯ ಭಾವನೆಯಿಂದ ಆರಾಧಿಸುತ್ತಾರೆ.ಕಡಲಾಮೆಗಳ ಕುರಿತು ಕುರ್ಮಾವತಾರದ ಇತಿಹಾಸವನ್ನು ಉಲ್ಲೇಖಿಸುತ್ತಾರೆ.ಗೋವಿಗೆ ಸಮಾನವಾದ ನಂಬಿಕೆಯಿAದ ಕಾಣುತ್ತಾರೆ.ಇಲ್ಲಿ ನಿಷೇದಾಜ್ಞೆ ನಡುವೆಯೇ ವಾಣಿಜ್ಯ ಬಂದರು ಕಂಪನಿಯವರು ಕಡಲಾಮೆಗಳನ್ನು ಸಾಯಿಸಿಸುತ್ತಿರುವ ಬಗ್ಗೆ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು ಪೋರ್ಟ ಪ್ರೈವೇಟ್ ಕಂಪೆನಿಯ ಮತ್ತು ಅದರ ಕಾವಲು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು.ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ಗೊವಿಂದ ತಾಂಡೇಲರು ಸ್ಥಳೀಯ ಅರಣ್ಯವಲಯಾಧಿಕಾರಿಯವರನ್ನು ಆಗ್ರಹ ಪಡಿಸಿದ್ದಾರೆ. ವಾಣಿಜ್ಯ ಬಂದರು ನಿರ್ಮಾಣ ಕಂಪನಿ ಹಾಗೂ ಅದರ ಕಾವಲು ಸಿಬ್ಬಂದಿಗಳಿAದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕುಕೃತ್ಯವನ್ನು ಖಂಡಿಸುವುದಾಗಿ ಅವರು ತಿಳಿಸಿದರು.

error: