May 19, 2024

Bhavana Tv

Its Your Channel

ವಿಜೃಂಭಣೆಯಿOದ ನಡೆದ ಉಪ್ಪೋಣಿ ಶ್ರೀ ಚಾಮುಂಡೇಶ್ವರಿ ಮತ್ತು ಪರಿವಾರ ದೇವರ ತೃತೀಯ ವರ್ಷದ ವರ್ಧಂತಿ ಉತ್ಸವ ಹಾಗೂ ನವಚಂಡಿ ಹವನ

ಹೊನ್ನಾವರ: ತನ್ನಅಪಾರ ಮಹಿಮೆಯಿಂದ ಪ್ರಸಿದ್ದಿ ಪಡೆಯುತ್ತಿರುವ ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಶ್ರೀ ಚಾಮುಂಡೇಶ್ವರಿ ಮತ್ತು ಪರಿವಾರ ದೇವರ ದೇವಸ್ಥಾನದಲ್ಲಿ ಮೂರನೆ ವರ್ಷದ ವರ್ಧಂತಿ ಹಾಗೂ ನವಚಂಡಿ ಹವನ ಅತ್ಯಂತ ವಿಜೃಂಭಣೆಯಿAದ ನಡೆಯಿತು.

ನವಚಂಡಿಹವನದ ಪೂರ್ಣಾಹುತಿ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಆಶೀವರ್ಚನ ನೀಡಿದ ಶ್ರೀ ರಾಮಕ್ಷೇತ್ರದ ಶ್ರೀ ಶ್ರೀ ಶೀ ಬ್ರಹ್ಮಾನಂದ  ಸ್ವಾಮೀಜಿಯವರು ಭಗವಂತ ಸದಾ ಪರಿಶುದ್ಧ ಭಕ್ತಿಗೆ ಓಲಿಯುತ್ತಾನೆ. ನಮ್ಮ ಸಂಕಷ್ಟಗಳು ನಿವಾರಣೆ ಯಾಗಬೇಕಾದರೆ ದೇವತಾ ಆರಾಧನೆಯೊಂದಿಗೆ ಉತ್ತಮ ಸತ್ಕರ್ಮ ಸಂಪಾದಿಸಬೇಕು.  ಚಾಮುಂಡೇಶ್ವರಿ ತಾಯಿಯ ಸೇವಕನಾಗಿ ರವಿ ನಾರಾಯಣ ನಾಯ್ಕ ಉತ್ತಮ ಕಾರ್ಯ ಮಾಡುತ್ತಿದ್ದಾರೆಎಂದರು. 

ಸಿಗಂಧೂರು ಕ್ಷೇತ್ರದ ಧರ್ಮದರ್ಶಿ ಶ್ರೀರಾಮ ರಾಮಪ್ಪನವರು ಮಾತನಾಡಿ ಶುದ್ಧವಾದ ಮನಸ್ಸಿದ್ದಲ್ಲಿ ಭಗವಂತನಿದ್ದಾನೆ. ಭಗವಂತ ಕೇಳುವುದು ಕೇವಲ ಶ್ರದ್ದಾ ಭಕ್ತಿ ಮಾತ್ರ. ಅದಕ್ಕೆ ಉದಾರಹಣೆಯೆ ಸಿಗಂದೂರು ಚೌಡೇಶ್ವರಿ….. ಮೂರುತಲೆ ಮಾರಿನ ದೇವರಾದರು ಕಳೆದ 30 ವರ್ಷಗಳ ಹಿಂದೆ ತಾನು ಹೋದಾಗ ಅಲ್ಲಿ ಏನು ಇರಲಿಲ್ಲ. ಗುಡ್ಡಗಾಡು ನದಿ ದಾಟಿ ಬರಬೇಕಾದ ಸ್ಥಳವಾಗಿತ್ತು. ಆದರೆ ಇಲ್ಲೆ ದೇವಸ್ಥಾನ ಮಾಡಬೇಕೆಂಬ ಹಟವಿತ್ತು, ಅದಕ್ಕೆ ದೇವರು ಕೈಗೂಡಿಸಿ ಕೊಡುತ್ತಾನೆ. ಇದಕ್ಕೆ ತಾನೆ ಸಾಕ್ಷಿ ಎಂದರು.

ನೀಲಗೋಡ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಮಾದೇವ ಸ್ವಾಮಿಯವರು ಮಾತನಾಡಿ ಗುರು ಮಹಿಮೆಯನ್ನು ವಿವರಿಸಿದಲ್ಲದೇ ಶ್ರೀರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಹೊಗೆವಡ್ಡಿ ಕ್ಷೇತ್ರದ ಆಂಜನೆಯ ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ, ಗೇರಸಪ್ಪಾ ನಗರಬಸ್ತಿಕೇರಿ ಮುಖ್ಯ ಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ಟ ಹಾಗೂ ಆಯ್ ಜಿ ನಾಯ್ಕ ಮಾತನಾಡಿದರು.

ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ರವಿ ನಾಯ್ಕ ದಂಪತಿಗಳು ಶ್ರೀಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಪಾದುಪೂಜೆ ನೇರವೇರಿಸಿದರು. ಹಾಗೂ ಆಗಮಿಸಿದ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಜಿ. ಎಚ್ ನಾಯ್ಕ ಸ್ವಾಗತಿಸಿದರು, ವೆಂಕಟೇಶ ಮೆಸ್ತರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭವಾನಿಶಂಕರ ನಾಯ್ಕ ವಂದಿಸಿದರು. ನಾಗೇಂದ್ರ ನಾಯ್ಕ ಚಿತ್ತಾರ ಮುಂತಾದವರು ಉಪಸ್ಥಿತರಿದ್ದರು. ವಿನೋದ ಮಹಾಲೆ ಮಂಕಿ ಪ್ರಾರ್ಥನೆಗೀತೆ ಹಾಡಿದರು. ಶಿಕ್ಷಕ ಮೋಹನ ನಾಯ್ಕ ಹಾಗೂ ರಾಜು ನಾಯ್ಕ ಹೆಗ್ಗಾರ ಕಾರ್ಯಕ್ರಮ ನಿರ್ವಹಿಸಿದರು ವರ್ಧಂತಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪಲ್ಲಕ್ಕಿಉತ್ಸವ. ಶ್ರೀ ಸರ್ವೇಶ್ವರಿ ಭಜನಾ ಮಂಡಳಿಯಿAದ ಭಕ್ತಿ ಸುಧೆ ಕಾರ್ಯಕ್ರಮಗಳು ನಡೆದವು.
ವರದಿ; ವೆಂಕಟೇಶ ಮೆಸ್ತ ಹೊನ್ನಾವರ

error: