May 19, 2024

Bhavana Tv

Its Your Channel

ದೇಶದ ಜನತೆಗೆ  ಕಾಂಗ್ರೆಸ್ ಪಕ್ಷವೊಂದೇ ಆಶಾಕಿರಣ -ಮಾಜಿ ಸಚಿವ ಆರ್. ವಿ. ದೇಶಪಾಂಡೆ.

ಹೊನ್ನಾವರ : ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರ ನಾಡಿನ ಜನತೆಗೆ ಜನಪರವಾದ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣವಾಗಿದೆ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅಭಿಪ್ರಾಯ ಪಟ್ಟರು.

ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಏರ್ಪಡಿಸಿದ “ಡಿಜಿಟಲ್ ಸದಸ್ಯತ್ವ ಅಭಿಯಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯ ನೋಂದಣಿಕಾರರು ಹಾಗೂ ಸಾಮಾನ್ಯ ನೋಂದಣಿಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದಂತಹ ಸಂಪದ್ಭರಿತ, ಮಹಾನ್ ದೇಶವನ್ನು ಕೇವಲ ಸುಳ್ಳು ಭರವಸೆಗಳಿಂದ ನಡೆಸಲು ಸಾಧ್ಯವಿಲ್ಲ. ಸುಳ್ಳು ಭರವಸೆಗಳನ್ನು ಕೇವಲ ತಾತ್ಕಾಲಿಕವಾಗಿ ನೀಡಬಹುದೇ ಹೊರತು ಭವಿಷ್ಯದ ಭಾರತಕ್ಕಲ್ಲ ಎಂದರು.  ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರದ ಆಡಳಿತದಿಂದ ಜನ ತತ್ತರಿಸಿ ಹೋಗಿದ್ದಾರೆ. ವಿದ್ಯಾವಂತ ಯುವಜನಾಂಗ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಬಡ ಮತ್ತು ಮದ್ಯಮ ವರ್ಗದ ಜನತೆ ಬೆಲೆ ಏರಿಕೆಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್, ಅಡುಗೆ ಅನಿಲಗಳ ಬೆಲೆ ಹಿಂದೆAದೂ ಕಾಣದಷ್ಟು ಏರಿಕೆಯಾಗಿದೆ. ಹಾಗಾಗಿ ಜನಮಾನಸದ ನಡುವೆ ಕಾಂಗ್ರೇಸ್ ಪಕ್ಷವೇ ದೇಶದ ಶಕ್ತಿಯಾಗಿದ್ದು, ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಡಿಜಿಟಲ್ ನೋಂದಣಿ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ “ಡಿಜಿಟಲ್ ಸದಸ್ಯತ್ವ” ಅಭಿಯಾನವನ್ನು ಯಶಸ್ವಿಗೊಳಿಸಿ, ಕಾಂಗ್ರೆಸ್ ಪಕ್ಷವನ್ನು ಶಕ್ತಿಶಾಲಿ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.  

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ಕಾಂಗ್ರೆಸ್ ಇತಿಹಾಸದಲ್ಲಿಯೇ ಪ್ರಥಮ ಬಾರಿ “ಡಿಜಿಟಲ್ ಸದಸ್ಯತ್ವ ನೋಂದಣಿ”  ಜಾರಿಯಲ್ಲಿ ತಂದಿದ್ದು, ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹಾರಲಾಲ್ ನೆಹರುರವರ ಜನ್ಮದಿನ ನವೆಂಬರ ೧೪ ರಂದು    ದೇಶಾದ್ಯಂತ ಡಿಜಿಟಲ್ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲಾಗಿದೆ ಎಂದರು.  

ಸಮಾಜದ ಎಲ್ಲ ವರ್ಗದ ಜನತೆ ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿAದ ತುಂಬಾ ಉತ್ಸಾಹದಿಂದ ಈ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಸದಸ್ಯತ್ವ ನೋಂದಣಿ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮಾತನಾಡಿ ಕುಮಟಾ ವಿಧಾನಸಭಾ ಕ್ಷೇತ್ರದ ಎಲ್ಲ ೨೧೫    ಮತಗಟ್ಟೆಗಳಲ್ಲೂ ಕೂಡ ಈಗಾಗಲೇ ಮುಖ್ಯ ನೋಂದಣಿಕಾರರು ಮತ್ತು ಸಾಮಾನ್ಯ ನೋಂದಣಿಕಾರರ ನೇಮಕವಾಗಿದ್ದು, ಸದಸ್ಯತ್ವ ನೋಂದಣಿ ಕಾರ್ಯ ಅತ್ಯಂತ ಪ್ರಗತಿಯಲ್ಲಿದೆ ಎಂದರು.  ಮುಂದಿನ ಒಂದು ತಿಂಗಳೊಳಗಾಗಿ ಎಲ್ಲ ಮತಗಟ್ಟೆಗಳಲ್ಲೂ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯವನ್ನು ಸಂಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.  

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಗತಿಯ ಕುರಿತಂತೆ ಎಲ್ಲರಿಗೂ ಮಾಹಿತಿ ನೀಡಿದರು.  

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ದೂರದರ್ಶನದಲ್ಲಿ ದೃಶ್ಯ ಬಿತ್ತರಿಸಿ ಡಿಜಿಟಲ್ ಸದಸ್ಯತ್ವದ ಮೂರು ಹಂತದ ಮಾರ್ಗಗಳನ್ನು ಸೇರಿದ ಮುಖ್ಯ ನೋಂದಣಿಕಾರರು ಮತ್ತು ಸಾಮಾನ್ಯ ನೋಂದಣಿಕಾರರಿಗೆ ತರಬೇತಿ ನೀಡುವ ಕಾರ್ಯವನ್ನು ಮಾಡಿದರು.  

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್. ಎನ್. ನಾಯ್ಕ, ಕೆ.ಪಿ.ಸಿ.ಸಿ. ಯಿಂದ  ಜಿಲ್ಲಾ ಕಾಂಗ್ರೆಸಿಗೆ ನಿಯುಕ್ತಿಗೊಂಡ ಉಸ್ತುವಾರಿಗಳಾದ ವಿ.ಎಸ್. ಆರಾಧ್ಯ,  ಸುಷ್ಮಾ ರಾಜಗೋಪಾಲ ರೆಡ್ಡಿ, ಶ್ರೀನಿವಾಸ ಹಲ್ಲಳ್ಳಿ, ಜಿಲ್ಲಾ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ, ಜಿಲ್ಲಾ ಸೇವಾದಳದ ಅಧ್ಯಕ್ಯ ಆರ್À.ಎಚ್. ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ರವಿಶೆಟ್ಟಿ, ಕವಲಕ್ಕಿ, ಎಂ.ಎನ್. ಸುಬ್ರಹ್ಮಣ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಗಾಂವಕರ, ಸೇವಾದಳದ ರಾಜ್ಯ ಸಂಘಟಕ ಸಾಯಿ ಗಾಂವಕರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಶೇಖ್, ಪಕ್ಷದ ಹಿರಿಯ ಮುಖಂಡರಾದ ಶ್ರೀಪಾದ ಹೆಗಡೆ, ಕಡವೆ, ದಾಮೋದರ ನಾಯ್ಕ, ಪುಷ್ಪಾ ನಾಯ್ಕ, ಕೃಷ್ಣ ಹರಿಜನ,ಆಗ್ನೇಲ್ ಡಾಯಸ್, ಜಿಕ್ರೀಯಾ ಶೇಖ್, ಕೆಚ್.ಗೌಡ, ಸಂದೇಶ ಶೆಟ್ಟಿ, ಲಂಬೋಧರ ನಾಯ್ಕ ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.  
error: