May 19, 2024

Bhavana Tv

Its Your Channel

ಹೊನ್ನಾವರ ಅರ್ಬನ್ ಬ್ಯಾಂಕಿನಿOದ ಪ್ರತಿಭಾ ಪುರಸ್ಕಾರ

ಹೊನ್ನಾವರ ಅರ್ಬನ್ ಬ್ಯಾಂಕಿನ ೨೦೨೧-೨೦೨೨ ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು
ದಿನಾಂಕ ೨೭-೦೨-೨೦೨೨ ರಂದು ಬ್ಯಾಂಕಿನ ಮೇಲ್ಮಹಡಿಯಲ್ಲಿನ ಎಂ. ಎ. ಕಿಣಿ ಮತ್ತು ಎಲ್. ಕೆ. ಶ್ಯಾನಭಾಗ ಶ್ರೋಫ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀಮತಿ ಅರ್ಚನಾ ಯು. ಪ್ರಿನ್ಸಿಪಾಲ್, ಸಿದ್ಧಾರ್ಥ ಪಿ. ಯು ಕಾಲೇಜು, ಭಟ್ಕಳ ಇವರು ಆಗಮಿಸಿದ್ದರು.

ಅತಿಥಿಗಳು ಬ್ಯಾಂಕಿನ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಗುರಿ
ಇಟ್ಟುಕೊಳ್ಳಿ. ಹೊರಗಡೆ ಹೋಗಿ ಕಲಿತರೂ ನಿಮ್ಮ ಊರಿಗೆ ಸೇವೆಯನ್ನು ನೀಡಿ. ಓದುವ ಹವ್ಯಾಸ
ಬೆಳೆಸಿಕೊಳ್ಳಿ. ಕಲಿಯಿರಿ ಮತ್ತು ಮನನ ಮಾಡಿಕೊಳ್ಳಿ ಅದು ಶಾಶ್ವತವಾಗಿರುತ್ತದೆ ಎಂದರು. ಈ ವಯಸ್ಸು ಕಲಿಯುವಿಕೆಗೆ ಇರುವುದು. ಹಿರಿಯರೊಂದಿಗೆ ಬೆರೆಯಿರಿ. ಎಲ್ಲರಿಗೂ ಇರುವ ಸಮಯ ಒಂದೇ. ಆದರೆ ಅದನ್ನು ಹೇಗೆ ನಾವು ಸದುಪಯೋಗ ಮಾಡಿಕೊಳ್ಳುತ್ತೇವೆ ಎಂಬುದು ಮಹತ್ವದ್ದು ಎಂದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡ ಹೊನ್ನಾವರ ಅರ್ಬನ್ ಬ್ಯಾಂಕನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದ
ನಾಲ್ವರನ್ನು, ತಾಲೂಕಿನಲ್ಲಿ ಮೊದಲ ೩ ಸ್ಥಾನ ಪಡೆದ ನಾಲ್ಕು ವಿದ್ಯಾರ್ಥಿಗಳ ಸಹಿತ ಪಿ.ಯು, ಪದವಿ ಹಾಗೂ
ಸ್ನಾತಕೋತ್ತರ ವರ್ಗಗಳಲ್ಲಿ ಪ್ರಥಮ ಬಂದವರನ್ನು, ಕ್ರೀಡೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರನ್ನು, ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಮಕ್ಕಳಿಗೆ ನಗದು ನೀಡಿ
ಪ್ರೋತ್ಸಾಹಿಸಲಾಯಿತು. ಹೀಗೆ ಒಟ್ಟೂ ೨೪ ಪ್ರತಿಭಾವಂತರಿಗೆ/ಪ್ರತಿಭಾನ್ವಿತರಿಗೆ ಬ್ಯಾಂಕಿನ ವತಿಯಿಂದ ಒಟ್ಟೂ
೭೫,೫೦೦/- ರೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಹೊನ್ನಾವರ ರೈಲ್ವೆ ಸ್ಟೇಷನ್‌ಗೆ ಪ್ರಯಾಣಿಕರ ಅನುಕೂಲಕ್ಕೆ ವೀಲ್ ಚೇರ್ ಒಂದನ್ನು ಬ್ಯಾಂಕಿನಿoದ ನೀಡಲಾಯಿತು.

ಬ್ಯಾಂಕಿನ ಅಧ್ಯಕ್ಷ ರಾಘವ ವಿಷ್ಣು ಬಾಳೇರಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ
ಮಾತುಗಳನ್ನಾಡಿದರು.ಎಲ್. ಎಮ್ ಹೆಗಡೆ, ಮುಖ್ಯಾಧ್ಯಾಪಕರು ಚೆನ್ನಕೇಶವ ಪ್ರೌಢಶಾಲೆ, ಕರ್ಕಿ ಇವರು
ಅಭಿನಂದನಾ ಭಾಷಣ ಮಾಡಿದರು.
ಕಾರ್ಯಕ್ರಮದ ಮೊದಲು ವಿನಯ ಕಿರಣ ಪ್ರಭು ಮತ್ತು ಸಂಗಡಿಗರ ಸಂಗೀತ ಕಾರ್ಯಕ್ರಮವು
ಹಾಗೂ ಮಂಜರಿ ಮೋಹನ ಭಟ್ಟ ಮತ್ತು ಕುಮಾರಿ ಪೂಜಾ ಸುಭೋದ ಅರವಾರೆ ಇವರ ಪ್ರಾರ್ಥನೆ
ಎಲ್ಲ ಸಭಿಕರನ್ನು ಮನೋಲ್ಲಾಸಗೊಳಿಸಿತು.

ಬ್ಯಾಂಕಿನ ಉಪಾಧ್ಯಕ್ಷರಾದ ವಸಂತ ವೆಂಕಟೇಶ ಪ್ರಭುರವರು ಅತಿಥಿಗಳನ್ನು ಪರಿಚಯಿಸಿದರು. ಧನಂಜಯ ಪೈ ಹಾಗೂ ಮಂಜರಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೀವ ಶ್ಯಾನಭಾಗ ಆಭಾರ ಮನ್ನಿಸಿದರು.

error: