May 16, 2024

Bhavana Tv

Its Your Channel

ಪದ್ಮಾಂಜಲಿ ಚಲನಚಿತ್ರ ಮಂದಿರದಲ್ಲಿ ದಿ ಕಾಶ್ಮೀರ ಪೈಲ್ಸ್ ಚಲನ ಚಿತ್ರ , ಉದ್ಯಮಿ ಜಿ. ಜಿ. ಶಂಕರ ಮುಂದಾಳತ್ವದಲ್ಲಿ ಉಚಿತ ಪ್ರದರ್ಶನ

ಹೊನ್ನಾವರ:- ಸೇಪ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಉದ್ಯಮಿ ಜಿ. ಜಿ. ಶಂಕರ ಮುಂದಾಳತ್ವದಲ್ಲಿ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಹೊನ್ನಾವರ ಪಟ್ಟಣದ ಪದ್ಮಾಂಜಲಿ ಚಲನಚಿತ್ರ ಮಂದಿರಲ್ಲಿ ದಿ ಕಾಶ್ಮೀರ ಪೈಲ್ಸ್ ಚಲನ ಚಿತ್ರ ಉದ್ಘಾಟನೆಯನ್ನು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತೀಯ ಸಂಚಾಲಕರಾದ ಜಗದೀಶ್ ಕಾರಂತ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪರ್ಚನೆಯ ಬಳಿಕ ಮಾತನಾಡಿ ಇಸ್ಲಾಮೀಕರಣಕ್ಕಾಗಿ ನಡೆದ ಹಿಂಸಾತ್ಮಕ ಘಟನೆ ಎರಡು ಗಂಟೆಯ ಒಳಗೆ ತೋರಿಸುವುದು ಸಾಧ್ಯವಿಲ್ಲ. ಹಾಗಾಗಿ ತುಣುಕುಗಳನ್ನಷ್ಟೇ ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾ ನೋಡಿದ ಬಳಿಕನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮಾನಸಿಕತೆಯನ್ನು ಸಂಕಲ್ಪವನ್ನು ಇಲ್ಲಿಂದ ತೆಗೆದುಕೊಂಡು ಹೋದರೆ ಮಾತ್ರ ಈವತ್ತಿನ ಈ ಕಾಶ್ಮೀರ ಫೈಲ್ಸ್ ಚಿತ್ರವನ್ನು ನೋಡಿದಕ್ಕೆ ಸಾರ್ಥಕವಾಗಲಿದೆ ಎಂದರು.

ಚಲನಚಿತ್ರ ವೀಕ್ಷಣೆಯ ನಂತರ ಶಾಸಕ ಸುನೀಲ್ ನಾಯ್ಕ ಮಾತನಾಡಿ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯರು ನೋಡಲೇ ಬೇಕು. ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿರುವ ಹಿಂಸೆಯ ನೈಜ ಚಿತ್ರಣ ನೋಡಲಾಗುತ್ತಿಲ್ಲ. ಜಿ. ಜಿ. ಶಂಕರ ಉಚಿತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಭಟ್ಕಳದಲ್ಲು ಅವಕಾಶ ಮಾಡಿಕೊಡಲಾಗುವುದು. ಭಟ್ಕಳ, ಹೊನ್ನಾವರ, ಕುಮಟಾ ಜನರು ಚಿತ್ರವೀಕ್ಷಣೆ ಮಾಡಿ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಚಿತ್ರ ನೋಡಿದರೆ ರಕ್ತ ಕುದಿಯುತ್ತದೆ. ಕಾಶ್ಮೀರಿ ಪಂಡಿತರ ನರಮೇಧ ಹಾಗೂ ವಲಸೆ ದೃಶ್ಯಗಳು ಮನಕಲಕುವಂತದ್ದು, ಈ ಚಿತ್ರವನ್ನು ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ ಜಿ ಜಿ ಶಂಕರ್ ರವರು ಅಭಿನಂದನಾರ್ಹರು ಎಂದರು.

ಜಿ.ಜಿ.ಶಂಕರ್ ಮಾತನಾಡಿ ಈ ಚಿತ್ರ ವೀಕ್ಷಣೆ ಬಳಿಕ ಮನಕಲುಕಲಿದೆ. ಜಿಲ್ಲೆಯವರು ಈ ಚಿತ್ರ ವೀಕ್ಷಣೆಗೆ ಉಚಿತ ಪ್ರದರ್ಶನ ಏಪರ್ಡಿಸಿದ್ದು, ತಪ್ಪದೇ ಎಲ್ಲಾ ಹಿಂದುಗಳು ನೋಡಲೇಬೇಕಾದ ಚಿತ್ರ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ, ಆರ್.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಹನುಮಂತ ಶ್ಯಾನಭಾಗ, ಮಾಜಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರೀ, ಸುಬ್ರಹ್ಮಣ್ಯ ಶಾಸ್ತ್ರಿ,ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಂಘಟನೆಯ ಪ್ರಮುಖರು ಸಾರ್ವಜನಿಕರು ಚಿತ್ರ ವೀಕ್ಷಣೆ ಮಾಡಿದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: