April 29, 2024

Bhavana Tv

Its Your Channel

ಸ್ವಂತ ನಿವೇಶನ ಇದ್ದರೂ ಬಾಡಿಗೆ ಕಟ್ಟಡದಲ್ಲಿ ಹೊನ್ನಾವರ ಹೆಸ್ಕಾಂ ವಿಭಾಗ ಕಚೇರಿ

ಹೊನ್ನಾವರ ; ೫ ವರ್ಷದ ಹಿಂದೆ ಹೊನ್ನಾವರ ಹೆಸ್ಕಾಂ ವಿಭಾಗವನ್ನು ಕಾರವಾರ ವಿಭಾಗದಿಂದ ಪ್ರತ್ಯೇಕಿಸಿ ಭಟ್ಕಳ್, ಹೊನ್ನಾವರ ಮತ್ತು ಕುಮಟಾ ಉಪ ವಿಭಾಗಕ್ಕೆ ಹೊನ್ನಾವರದಲ್ಲಿ ವಿಭಾಗ ಕಚೇರಿಯನ್ನು ಪ್ರಾರಂಭಿಸಲಾಯಿತು. ಇದರಿಂದ ಇಲ್ಲಿಯ ಪಿಂಚಣಿದಾರರು ಸಂಭ್ರಮ ಪಟ್ಟರು. ಆದರೆ ಆ ಸಂಭ್ರಮ ಬಹಳ ದಿನ ಉಳಿಯಲಿಲ್ಲ.

ವಿಭಾಗ ಮಂಜೂರಿಯಾಗಿ ೫ ವರ್ಷ ಸಂದರೂ ಇನ್ನೂವರೆಗೆ ಸ್ವಂತ ಕಟ್ಟಡ ನಿರ್ಮಿಸದೆ ಮುಖ್ಯ ರಸ್ತೆಯಿಂದ ದೂರ ಇರುವ ಹೌಸಿಂಗ್ ಬೋರ್ಡ್ ವಸತಿ ಪ್ರದೇಶದ ಕೊನೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಮುಂದುವರೆದಿದೆ. ಪಿಂಚಣಿದಾರರು ವಿಭಾಗ ಕಚೇರಿಗೆ ಹೋಗುವ ಸ್ಥಳಕ್ಕೆ ಯಾವದೇ ಸಾರಿಗೆ ವಾಹನ ಸೌಕರ್ಯ ಇಲ್ಲದ್ದರಿಂದ ಅನಿವಾರ್ಯವಾಗಿ ಕನಿಷ್ಠ ೧೦೦ ರೂಪಾಯಿ ಕೊಟ್ಟು ಆಟೋ ರಿಕ್ಷಾವನ್ನೇ ಅವಲಂಬಿಸಬೇಕಾಗಿದೆ. ಸಾಮಾನ್ಯವಾಗಿ ಪಿಂಚಣಿದಾರರು ವಯಸ್ಕರಾಗಿರುತ್ತಿದ್ದು ಮತ್ತು ಅನಾರೋಗ್ಯ ಪೀಡಿತರಾಗಿದ್ದು ವರ್ಷಕ್ಕೆ ೨ ಸಲ ಜೀವಿತ ಪ್ರಮಾಣ ಪತ್ರ ವಿಭಾಗ ಕಚೇರಿಗೆ ಹೋಗಿ ಸಲ್ಲಿಸಬೇಕಾಗಿದೆ. ಪಿಂಚಣಿದಾರರಿಗೆ ಅನುಕೂಲ ಆಗುವಂತೆ ವಿಭಾಗ ಕಚೇರಿ ಉಪ ವಿಭಾಗ ಕಚೇರಿಯ ಕಟ್ಟಡ ಸ್ವಂತ ನಿವೇಶನದಲ್ಲಿ ನಿರ್ಮಿಸಿದಲ್ಲಿ ಎಲ್ಲರಿಗೂ ಉಪಯೋಗ ಆಗುತ್ತದೆ. ಹೊನ್ನಾವರ ಮತ್ತು ದಾಂಡೇಲಿ ವಿಭಾಗ ಒಂದೇ ಸಲ ಮಂಜೂರಿಯಾಗಿದ್ದು ದಾಂಡೇಲಿ ವಿಭಾಗ ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಹೊನ್ನಾವರದ ಕಟ್ಟಡದ ಬಗ್ಗೆ ಯಾವದೇ ಮಾಹಿತಿ ಇರುವದಿಲ್ಲ.
ಸ್ಥಳೀಯ ಮಾನ್ಯ ಶಾಸಕರು, ಮಾನ್ಯ ಉಸ್ತುವಾರಿ ಸಚಿವರು, ಮಾನ್ಯ ಇಂಧನ ಸಚಿವರಲ್ಲಿ ಹೊನ್ನಾವರದಲ್ಲಿ ಕೂಡಲೇ ವಿಭಾಗ ಕಚೇರಿ ಕಟ್ಟಡ ನಿರ್ಮಿಸುವಂತೆ ಇಲ್ಲಿಯ ಪಿಂಚಣಿದಾರರು ಮನವಿ ಮಾಡಿರುತ್ತಾರೆ.

error: