May 15, 2024

Bhavana Tv

Its Your Channel

ಸರಕಾರಿ ಅಧಿಕಾರಿಗಳೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮೀನುಗಾರರ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು

ಹೊನ್ನಾವರ ; ಸರಕಾರಿ ಅಧಿಕಾರಿಗಳೇ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮೀನುಗಾರರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಾಗಿದೆ ಎಂದು ರಾಷ್ಟೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದಶಿ9 ಚಂದ್ರಕಾAತ ಕೊಚರೇಕರವರು ತಿಳಿಸಿದರು.

ಕಾಸರಕೊಡ ಟೊಂಕಾದಲ್ಲಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು
ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಅಭಿವೃದ್ಧಿ ನಿಷೇದಿತ ಕಾಸರಕೋಡ ಕಡಲತೀರದಲ್ಲಿ ಬಲವಂತದಿAದ ಅಕ್ರಮ ರಸ್ತೆ ಕಾಮಗಾರಿ ನಿರ್ವಹಿಸಿದ ಮತ್ತು ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯ ಆಮೀಶಗಳಿಗೆ ಒಳಗಾಗಿ ಸರಕಾರಿ ಆಡಳಿತ ಯಂತ್ರದ ದುರ್ಬಳಕೆ ಮಾಡಿರುವುದರ ವಿರುದ್ಧ ಹಾಗೂ ಗರ್ಭಿಣಿ ಮಹಿಳೆಯರು ಸೇರಿದಂತೆ ಪ್ರತಿಭಟನಾ ನಿರತ ನಾಗರಿಕರ ಅಕ್ರಮ ಬಂಧನ ಮತ್ತು ನಾಗರಿಕರ ಮೇಲಿನ ಪೋಲಿಸ್ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ,ದೆಹಲಿಯ ಹ್ಯೂಮನ್ ರೈಟ್ ಡಿಫೆಂಡರ್ಸ್ ಅಲರ್ಟ್-ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಹೆನ್ರಿ ತಿಪಗ್ನೆ ಎನ್ನುವವರು ಹೊನ್ನಾವರ ಪೋಲಿಸ ಅಧಿಕಾರಿಗಳ ವಿರುದ್ಧ ತುರ್ತು ಮೇಲ್ಮನವಿ ರೂಪದ ದೂರನ್ನು ದಾಖಲಿಸಿದ್ದಾರೆ. ಇನ್ನೊಂದೆಡೆ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಅಧಿಕಾರಿಗಳ ವಿರುದ್ಧ ನಿಯಮಬಾಹಿರ ಕಾಮಗಾರಿ, ಕಾನೂನು ಉಲ್ಲಂಘನೆ, ಅಧಿಕಾರದ ದುರ್ಬಳಕೆ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪೋಲಿಸ್ ದೌರ್ಜನ್ಯದ ವಿರುದ್ಧ ರಾಜ್ಯದ ರಾಜ್ಯಪಾಲರು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರನ್ನು ಸಲ್ಲಿಸಲಾಗಿದ್ದು ಸಮಗ್ರ ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆಗೆ ಆಗ್ರಹಪಡಿಸಿದ್ದು ಕೆಲವು ಪ್ರಮುಖ ವಿಚಾರಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತ್ರತ್ವದ ಸ್ವತಂತ್ರ ಸಮಿತಿಯಿಂದ ತನಿಖೆ ಏರ್ಪಡಿಸುವಂತೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ರವರಿಗೆ ಲಿಖಿತ ದೂರು ಸಲ್ಲಿಸಿದೆ ಎಂದರು.

ಕಡಲ ವಿಜ್ಞಾನಿ ಡಾ ಪ್ರಕಾಶ ಮೇಸ್ತರವರು ಮಾತನಾಡಿ ಯಾವುದೇ ಇಲಾಖೆಯ ಅನುಮತಿ ಇಲ್ಲದಿದ್ದರೂ ಸಿ ಆರ್ ಜೆಡ್ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು.

ಮೀನುಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣಪತಿ ತಾಂಡೇಲ, ಕಾರ್ಮಿಕ ಸಂಘದ ಕಾರ್ಯದರ್ಶಿ ರಾಜು ತಾಂಡೇಲ, ಭಾಷ್ಕರ ತಾಂಡೇಲ, ಸಂದೀಪ ತಾಂಡೇಲ, ರಮೇಶ ತಾಂಡೇಲಮುAತಾದ ಪ್ರಮುಖರು ಉಪಸ್ಥಿತರಿದ್ದರು.

ವರದಿ:- ವೆಂಕಟೇಶ್ ಮೇಸ್ತ ಹೊನ್ನಾವರ

error: