May 19, 2024

Bhavana Tv

Its Your Channel

ಶರಾವತಿ ನದಿ ತೀರದ ಜನರ ನೆಮ್ಮದಿ ಕೆಡಿಸಿರುವ ಪ್ರೀ ವೆಡ್ಡಿಂಗ್ ಶೂಟಿಂಗ್, ದಂಧೆಗೆ ಕಡಿವಾಣ ಹಾಕಲು ಸಾರ್ವಜನಿಕರ ಆಕ್ರೋಶ

ಹೊನ್ನಾವರ: ಶರಾವತಿ ನದಿ ತೀರದ ಜನರ ನೆಮ್ಮದಿ ಕೆಡಿಸಿರುವ, ಪ್ರಾಣಹಾನಿಗೂ ಕಾರಣವಾಗಿರುವ ಪ್ರೀ ವೆಡ್ಡಿಂಗ್ ಶೂಟಿಂಗ್ ದಂಧೆಗೆ ಕಡಿವಾಣ ಹಾಕಲು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಸೋದ್ಯಮ ಮತ್ತು ಉದ್ಯೋಗದ ಹೆಸರಿನಲ್ಲಿ ತಾಲೂಕಿನ ಭಿಕಾಶಿ ತಾರಿಯಲ್ಲಿ ಹುಟ್ಟಿಕೊಂಡಿರುವ ಈ ದಂದೆ ಶರಾವತಿ ನದಿಯ ಪೂರ್ತಿ ಆವರಿಸಿ ಬಿಟ್ಟಿದೆ. ಈ ಉದ್ಯಮಕ್ಕೆ ಸ್ಪಷ್ಟವಾದ ಕಾನೂನಿನ ಕುಣಿಕೆ ಬೀಳುವ ತನಕ ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಜನಾಗ್ರಹವಾಗಿದೆ.

ಜಗಳ, ಹೊಡೆದಾಟ, ಕೂಗಾಟ, ಪಾಳಿ ಸ್ಪರ್ಧೆ, ಪೊಲೀಸ್ ಕೇಸ್, ಪ್ರವಾಸಿಗರ ಮಿತಿಮೀರಿದ ಮೋಜು ಮಸ್ತಿ ಹೀಗೆ ನೂರೆಂಟು ಹೈಡ್ರಾಮದ ಮೂಲಕ ನದಿ ತೀರದ ಜನತೆಯ ನಿದ್ದೆಗೆಡಿಸಿದ ಈ ಉದ್ಯಮ ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತು ಉದ್ಯೋಗದ ದೃಷ್ಟಿಯಲ್ಲಿ ಒಳ್ಳೆಯ ಅವಕಾಶವಾಗಿದ್ದರು ಕೂಡ ವ್ಯವಸ್ಥಿತವಾಗಿ ನಡೆಯದೆ ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ. ಸರಿಸುಮಾರು 80 ಬೋಟ್ ಗಳು ತನ್ನ ಹಿಂದಿನ ಕೆಲಸ ಬಿಟ್ಟು ಶೃ0ಗಾರಗೊಂಡ ಮದುವಣ ಗಿತ್ತಿಯಂತೆ ಮನಸೋ ಇಚ್ಛೆ ನದಿಯಲ್ಲಿ ಓಡಾಡಿಕೊಂಡಿದೆ.

ಯಾವ ಇಲಾಖೆಯ ಹಿಡಿತಕ್ಕೂ ಸಿಗದೆ, ತಾವು ಮಾಡಿದ್ದೆ ಸರಿ ಅನ್ನುವ ಮಟ್ಟಿಗೆ ಕೆಲವರಿಗೆ ಈ ದಂದೆಯ ರುಚಿ ಸಿಕ್ಕಿಬಿಟ್ಟಿದೆ. ಒಂದಿಷ್ಟು ದಿನ ಕೆಲವೇ ಕೆಲವು ಜನರು ತಮ್ಮ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಕಿಸೆ ತುಂಬಿಕೊAಡಾಗಿದೆ. ಇತ್ತೀಚಿಗೆ ತಾಲೂಕಾ ಆಡಳಿತ ಸ್ವಲ್ಪ ಮಟ್ಟಿಗೆ ಮೂಗುದಾರ ಹಾಕುವ ಪ್ರಯತ್ನ ಮಾಡಿತ್ತು. ಸಭೆಯಲ್ಲಿ ತಲೆ ಅಲ್ಲಾಡಿಸಿ ಬರುವ ಕೆಲವರು ಬೋಟ್ ನದಿಗೆ ಇಳಿದ ಮೇಲೆ ಇವರು ಓಡಿಸಿದ್ದೆ ವೇಗ, ಹೋದದ್ದೇ ಮಾರ್ಗ ಅನ್ನುವಂತಾಗಿತ್ತು.

ಕೆಲವು ದಿನಗಳ ಹಿಂದೆ ದೋಣಿ ಮುಳುಗಿ ಯುವಕ ಸಾವನ್ನಪ್ಪಿದ ಘಟನೆಗೆ ಇದೆ ಬೋಟ್ ರಗಳೆ ಕಾರಣ ಎಂದು ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೂ ಕೂಡ ಇದೆ ಸ್ಥಳದಲ್ಲಿ ಅವಘಡ ನಡೆದಿತ್ತು ಪ್ರಾಣಪಾಯವಾಗಿರಲಿಲ್ಲ. ಶೂಟಿಂಗ್ ಬೋಟ್ ವೇಗಕ್ಕೆ ನದಿಯಲ್ಲಿ ಸಂಚರಿಸುವ ಸಣ್ಣ ಪುಟ್ಟ ದೋಣಿಯು ಪಲ್ಟಿ ಯಾಗುವ ಭಯ ಕಾಡುತ್ತಿತ್ತು. ಪ್ರವಾಸಿಗರು ದೊಡ್ಡದಾಗಿ ಕೂಗುವುದರಿಂದ ನದಿ ತೀರದ ಜನತೆಗೆ ಕಿರಿಕಿರಿ ಅನುಭವಿಸುತ್ತಿದ್ದರು. ನಿದ್ದೆ ಮಾಡುವ ಹಾಗಿಲ್ಲ, ಮೊಬೈಲ್ ಬಳಸೋ ಹಾಗಿಲ್ಲ, ಮನೆಯಲ್ಲಿ ಕುಳಿತು ಮಾತಾಡೋ ಹಾಗೂ ಇಲ್ಲ. ಇನ್ನೂ ಅನಾರೋಗ್ಯ ಪೀಡಿತರು ವಿಶ್ರಾಂತಿ ಪಡೆಯುವಂತು ಇಲ್ಲ. ಬೆಳಿಗ್ಗೆ 6 ಗಂಟೆಯಿAದ ಸಂಜೆ 8 ಗಂಟೆ ತನಕ ಬೋಟ್ ಓಡಾಟಕ್ಕೆ ಲೆಕ್ಕವೇ ಇಲ್ಲ. ಪ್ರತಿದಿನ ನದಿ ತೀರದ ನಿವಾಸಿಗಳಿಗೆ ಬೋಟಿನವರ ರಗಳೆ ನಿತ್ಯದ ಕೊಡುಗೆ ಯಾಗಿ ಬಿಟ್ಟಿದೆ.

ಹೆಚ್ಚಿನ ಪ್ರವಾಸಿಗರು ಬೋಟ್ ನಲ್ಲಿ ಮೋಜು ಮಸ್ತಿ ಮಾಡೋದು ಜಾಸ್ತಿ. ಬೋಟ್ ಓಡುವಾಗ ನೀರಲ್ಲಿ ಕಾಲು ಹಾಕಿ ಕುಳಿತುಕೊಳ್ಳುವುದು, ಬಗ್ಗಿ ಕೈ ನೀರಲ್ಲಿ ಹಾಕಿ ಮಸ್ತಿಮಾಡೋದು, ಬೋಟ್ ತುದಿಯಲ್ಲಿ ನಿಲ್ಲೋದು, ಸುರಕ್ಷಾ ಪರಿಕರ ಬಳಸದೆ ಇರೋದು ಅಪಾಯಕ್ಕೆ ನೂಕುತ್ತಿದೆ.
ಇಷ್ಟೆಲ್ಲ ಅವಾಂತರ ನಡೆಯುತ್ತಿದ್ದರು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳದೆ, ಕಾಟಾಚಾರಕ್ಕೆ ಕೆಲವು ಆದೇಶ ಮಾಡಿದ್ದು ಬಿಟ್ಟರೆ ಪ್ರಯೋಜನಕ್ಕೆ ಬಂದಿಲ್ಲ. ಪೊಲೀಸ್ ಮತ್ತು ತಹಸೀಲ್ದಾರ್ ರವರು ಒಂದೆರಡು ಮೀಟಿಂಗ್ ಮಾಡಿ ಸರಿಪಡಿಸುವ ಪ್ರಯತ್ನ ಮಾಡಿದ್ದರು. ಸ್ಥಳೀಯರೊಬ್ಬರು ಹಲವು ದೂರು ಕೊಟ್ಟರು ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ ಅನಾಹುತಕ್ಕೆ ದಾರಿ ಮಾಡುತ್ತಿದೆ.
ನದಿಯಲ್ಲಿ ವೇಗವಾಗಿ ವಿಪರೀತ ಬೋಟ್ ಓಡಾಟದಿಂದ ಮೀನುಗಾರರಿಗೂ ಕೂಡ ಮೀನು ಸಿಗುತ್ತಿಲ್ಲ. ಪ್ರತಿದಿನ ಬಲೆ ಬಿಸಿ, ಗಾಳ ಹಾಕಿ ಮೀನು ಹಿಡಿಯುವವರು ಬರಿ ಕೈಯಲ್ಲಿ ಹೋಗುತ್ತಿದ್ದಾರೆ.
ವರದಿ: ವೆಂಕಟೇಶ್ ಮೇಸ್ತ ಹೊನ್ನಾವರ

error: