April 26, 2024

Bhavana Tv

Its Your Channel

ಲಯನ್ಸ ಸಂಸ್ಥೆಯಿoದ ಮಹಿಳಾ ಸಬಲೀಕರಣದಡಿ ಹೋಲಿಗೆ ತರಬೇತಿ ಕೇಂದ್ರ ಉದ್ಘಾಟನೆ

ಹೊನ್ನಾವರ:-ಈ ಸಾಲಿನಲ್ಲಿ ಸುಮಾರು ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿ ಪ್ರಶಂಸೆಗೆ ಪಾತ್ರರಾದ ಹೊನ್ನಾವರದ ಪ್ರತಿಷ್ಟಿತ ಲಯನ್ಸ ಸಂಸ್ಥೆಯಿAದ ಮಹಿಳಾ ಸಬಲೀಕರಣದಡಿ ಹೋಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಲಯನ್ಸ ಭವನದಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಲಯನ್ಸ ಸಂಸ್ಥೆಯ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆಯವರು ಈ ವಷ9ದ ಲಯನ್ಸ ಧ್ಯೇಯ ವಾಕ್ಯದಂತೆ ಲಯನ್ಸ ನಡೆ ಹಳ್ಳಿಕಡೆ ಎಂಬAತೆ ಶೇ70 ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸಿದ್ದೇವೆ. ಮಹಿಳಾ ಸಬಲೀಕರಣದಡಿಯಲ್ಲಿ ಮೂರನೇ ಹೋಲಿಗೆ ಕೇಂದ್ರವನ್ನು ಹೊನ್ನಾವರ ಪಟ್ಟಣದಲ್ಲಿ ಆರಂಭಿಸಿದ್ದೇವೆ. ಈ ಸಾಲಿನಲ್ಲಿ ಹಿರಿಯ ಲಯನ್ಸ ಪಧಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಕಾರದಿಂದ ನೂರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿ ಯಶಸ್ಸಿಯಾಗಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಲಯನ್ಸ ಸದಸ್ಯರು ಹಾಗೂ ಈ ಸಾಲಿನ ಖಜಾಂಚಿಗಳಾದ ಎಸ್ ಜೆ ಕೈರನ್ ರವರು ಮಾತನಾಡಿ ಮಹಿಳೆಯರ ಅಭಿವೃದ್ದಿಗಾಗಿ ಹೋಲಿಗೆ ತರಬೇತಿಯಂತಹ ಅನೇಕ ಕಾರ್ಯಕ್ರಮಗಳನ್ನು ಲಯನ್ಸ ಸಂಸ್ಥೆ ಹಮ್ಮಿಕೊಂಡಿದೆ ಎಂದರು. ವೇದಿಕೆಯಲ್ಲಿ ಮಹಿಳಾ ಸಂಘಟಕಿ ಶಾರದ ನಾಯ್ಕ ಫಾರೆಸ್ಟ ಕಾಲೋನಿ ಹಾಗೂ ರಾಜೇಶ ಸಾಲೇಹಿತ್ತಲರವರು ಮಾತನಾಡಿದರು.
ಸಮಾರಂಭದಲ್ಲಿ ಲಯನ್ಸ ಕಾರ್ಯದರ್ಶಿ ಉದಯ ನಾಯ್ಕ, ಮಹಿಳಾ ಸದಸ್ಯರಾದ ಶೈಲಾ ಶ್ಯಾನಭಾಗ , ಕುಸುಮಾ ಸುರೇಶ ಮುಂತಾದವರು ಉಪಸ್ಥಿತರಿದ್ದರು.
ಲಯನ್ ಎಂ.ಜಿ ನಾಯ್ಕರವರು ಕಾರ್ಯಕ್ರಮ ನಿರ್ವಹಿಸಿದರು, ಉದಯ ಎಚ್ ನಾಯ್ಕ ಸ್ವಾಗತಿಸಿದರು. ಲಯನ್ ಜೀವೊತ್ತಮ ನಾಯಕ್ ವಂದಿಸಿದರು.
ಲಯನ್ಸ ಹಿರಿಯ ಸದಸ್ಯರಾದ ಶಾಂತರಾಮ ನಾಯ್ಕ, ಪ್ರೋ ಸುರೇಶ್, ಶ್ರೀಕಾಂತ ಹೆಗ್ಡೆಕರ್, ಡಿಡಿ ಮಡಿವಾಳ, ಶೇಖರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: