May 6, 2024

Bhavana Tv

Its Your Channel

ಎಡಬಿಡದೆ ಸುರಿದ ಮಳೆ, ತುಂಬಿ ಹರಿದ ನದಿ, ಜನ ಜೀವನ ಅಸ್ತವ್ಯಸ್ತ

ಹೊನ್ನಾವರ : ಗ್ರಾಮೀಣ ಭಾಗವು ಸೇರಿದಂತೆ ರಾತ್ರಿಯಿಂದ ಸುರಿಯುತ್ತಿರುವ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ. ಕೊಳ್ಳ, ನದಿ, ಕಾಲುವೆಯಲ್ಲಿ ನೀರಿನ ಮಟ್ಟ ಏರುತ್ತಿದೆ. ತಾಲೂಕಿನ ಅನೇಕ ಕಡೆ ಮನೆಯ ಮೇಲೆ ತೆಂಗಿನ ಮರ, ಅಡಿಕೆ ಮರ ಬಿದ್ದು ಹಾನಿಯಾಗಿದೆ. ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಯ ಮೇಲೆ ಮರ ಬಿದ್ದಿದೆ. ಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ ಹಲವು ರೀತಿಯ ಹಾನಿ ಉಂಟಾಗಿದೆ.

ಬೆಟ್ಟ ಗುಡ್ಡದಿಂದ ಹರಿದು ಬರುತ್ತಿರುವ ನೀರಿನಿಂದ ಅಂಚಿಗಿರುವ ಹಳ್ಳಗಳು, ನದಿ ಕಾಲುವೆ ತುಂಬಿ ಹರಿಯಲು ಶುರುವಾಗಿದ್ದು, ಮಳೆ ಇದೇ ರೀತಿ ಬೀಳುತ್ತಲೆ ಇದ್ದರೆ ನೀರಿನ ಮಟ್ಟ ಏರಿಕೆಯಾಗಿ ತಗ್ಗು ಪ್ರದೇಶ ಜನರು ನೀರಿನ ಅಪಾಯಕ್ಕೆ ಒಳಗಾಗುವ ಸಾದ್ಯತೆಯಿದೆ. ಆಕಾಶ ಹರಿದಂತೆ ತೊಯ್ಯುತ್ತಿರುವ ಮಳೆ ನದಿಯ ತಗ್ಗು ಪ್ರದೇಶದಲ್ಲಿರುವವರಿಗೆ ಎಚ್ಚರಿಕೆಯ ಘಂಟೆಯಾಗುವAತೆ ಕಾಣುತ್ತಿದೆ. ಆಷಾಢ ಮಾಸ ಪ್ರಾರಂಭವಾಗಿದ್ದು, ಈಗ ಬೀಳುತ್ತಿರುವುದು ಆದ್ರಿ ಮಳೆಯಾಗಿದ್ದು ಈ ಮಳೆಯ ಅವಧಿ ಮುಂದಿನ ಎಂಟು ದಿನಗಳ ತನಕ ಇರಲಿದೆ.

ಹಲವು ಕಡೆ ಹಾನಿ :
ತಾಲೂಕಿನ ಕರ್ಕಿಯ ಗ್ರಾಮ ಪಂಚಾಯತ ವ್ಯಾಪ್ತಿಯ ರಾಮಚಂದ್ರಕೆAಚ ನಾಯ್ಕ ಇವರ ಮನೆಯ ಮುಂಬಾಗದಲ್ಲಿರುವ ತೆಂಗಿನ ಮರ ಮನೆಯ ಮೇಲೆ ಬಿದ್ದು ಬಾಗಶಃ ಹಾನಿ ಉಂಟಾಗಿದೆ. ಚಿತ್ತಾರ ಗ್ರಾ. ಪಂ. ನೇಸಲ್ನೇರ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ಜನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು, ಬಿದ್ದ ಮರವನ್ನು ತೆರವುಗೊಳಿಸಿ ಸಾರ್ವಜನಿಕರ ಒಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಚಿಕ್ಕನಕೋಡ ಗಾ.್ರಪಂ. ವ್ಯಾಪ್ತಿಯ ಗುಂಡಿಬೈಲ್ ಈಶ್ವರ ಗಣಪ ಹಳ್ಳೇರ ಇವರ ಮನೆಯ ಮೇಲೆ ಒಣಗಿದ ಅಡಿಕೆ ಮರ ಬಿದ್ದು ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ. ಭಾಸ್ಕೇರಿಯ ಕನ್ನೆ ಕಣಿಯಾ ಮುಕ್ರಿಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪಟ್ಟಣ ಪಂಚಾಯತ ವ್ಯಾಪ್ತಿಯ ಸರ್ಪಿ ಸೆಂಟರ್ ಹತ್ತಿರ ರಸ್ತೆಯ ಪಕ್ಕ ಕಾಲುವೆಯಲ್ಲಿ ನೀರುನಿಂತು ಬ್ಲಾಕ್ ಆಗಿತ್ತು. ಪಟ್ಟಣ ಪಂಚಾಯತದವರು ಕಾಲುವೆ ಸ್ವಚ್ಚ ಗೊಳಿಸಿ ನೀರು ಹೋಗುವಂತೆ ಸರಿಪಡಿಸಿದ್ದಾರೆ. ಕಾಸರಕೋಡ ಫಾತಿಮಾ ಸಾಲ್ವದೋರ್ ಡಯಾಸ್ ಇವರ ಮನೆಗೆ ಹಾನಿ ಉಂಟಾಗಿದೆ. ಕಡ್ನೀರಿನ ಅಶೋಕ ಗಣಪತಿ ನಾಯ್ಕ ಇವರ ದನದ ಕೊಟ್ಟಿಗೆಗೆ ಹಾನಿ ಉಂಟಾಗಿರುತ್ತದೆ ಎಂದು ತಹಸೀಲ್ದಾರ್ ನಾಗರಾಜ ನಾಯ್ಕಡ ತಿಳಿಸಿದ್ದಾರೆ.

ತುಂಬಿ ಹರಿದ ಗುಂಡಬಾಳ, ಭಾಸ್ಕೇರಿ ನದಿ :
ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾಗಿರುವ ಭಾಸ್ಕೇರಿ ಹೊಳೆ ಮತ್ತು ಗುಂಡಬಾಳ ನದಿ ತುಂಬಿ ಹರಿಯುತ್ತಿದೆ. ಅಪಾಯದ ಮಟ್ಟಿಗೆ ಏರಿಕೆಯಾಗದಿದ್ದರು ಸಂಜೆಯ ವೇಳೆಗೆ ನದಿಯ ಸಮತಟ್ಟಿಗೆ ತುಂಬಿ ಹರಿಯುತ್ತಿದೆ.

ಹೆದ್ದಾರಿ ಪಕ್ಕ ಗುಡ್ಡ ಕುಸಿತ :
ಹೊನ್ನಾವರ ಗೇರುಸೊಪ್ಪ ನಡುವೆ ರಾಷ್ಟಿçÃಯ ಹೆದ್ದಾರಿ 69 ರಲ್ಲಿ ಖರ್ವಾ ಕ್ರಾಸ್ ಹತ್ತಿರ ಗುಡ್ಡ ಕುಸಿತವಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಜೆಸಿಬಿ, ಟಿಪ್ಪರ ಬಳಸಿ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಲು ಪ್ರಯತ್ನ ನಡೆಯುತ್ತಿದೆ. ಮಳೆ ಪ್ರಾರಂಭವಾಗುತ್ತಿರುವಾಗಲೇ ಹೆದ್ದಾರಿ ಪಕ್ಕದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಲೆ ಇದೆ. ಕೆಲವು ದಿನದ ಹಿಂದೆ ಇದೇ ಹೆದ್ದಾರಿಯಲ್ಲಿ ಗುಹೆ ಆಕಾರದ ಕಂದಕ ಕಾಣಿಸಿತ್ತು, ಸರಿಪಡಿಸುವ ಕೆಲಸ ಇನ್ನೂ ಕೂಡ ಮುಗಿದಿಲ್ಲ. ಹುಲಿಯಪ್ಪನ ಕಟ್ಟೆ ಹತ್ತಿರ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು, ಸರಿಪಡಿಸಿದರು ಕೂಡ ನೀರಿನ ಹರಿವು ನಿಂತಿಲ್ಲ. ಕೇಬಲ್ ಕೆಲಸದ ರಗಳೆಗೆ ಹೆದ್ದಾರಿ ಅಂಚಿನಲ್ಲಿ ನಿಲ್ಲುವಂತಿಲ್ಲ. ರಸ್ತೆಯ ಉದ್ದಗಲಕ್ಕೂ ಕೆಂಪು ನೀರಿನ ಅಭಿಷೇಕ ವಾಗುವ ಪರಿಸ್ಥಿತಿಯಿದೆ.

ಈ ಎಲ್ಲಾ ಹಾನಿ ಪ್ರದೇಶಕ್ಕೆ ಕಂದಾಯ ಇಲಾಖೆ ಮತ್ತು ವಿವಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಕಡೆ ತುರ್ತು ಕ್ರಮ ಕೈಗೊಂಡಿದ್ದಾರೆ. ಸಂಜೆಯಾದ ಮೇಲೂ ಮಳೆ ಸುರಿಯುತ್ತಲೆ ಇದ್ದು , ಜನ ಜೀವನ ಅಸ್ತವ್ಯಸ್ತ ಗೊಂಡಿದೆ.

error: