April 29, 2024

Bhavana Tv

Its Your Channel

ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌoಡ್ ಗೋಡೆಯು ಕುಸಿದು ಹಾನಿ

ಹೊನ್ನಾವರ ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌAಡ್ ಗೋಡೆಯು ಬುಧವಾರ ಸಂಜೆ ಕುಸಿದು ಹಾನಿಯಾಗಿದೆ. 

ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌAಡ್ ಗೋಡೆ ಕುಸಿದು ಬಿದ್ದಿದೆ. ಪ್ರಭಾತನಗರ ಶಾಲೆಯ ಎರಡು ವರ್ಗ ಕೋಣೆಗಳು ತುಂಬಾ ಹಳೆಯದಾಗಿದ್ದು ಕುಸಿಯುವ ಭೀತಿ ಎದುರಾಗಿದೆ. ಹಳೆಯ ಕಟ್ಟಡದ ಆತಂಕದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುವಂತಾಗಿದೆ.
ಕಾಂಪೌAಡ್ ಕುಸಿದು ಗಟಾರದಲ್ಲಿ ಬಿದ್ದಿರುವುದರಿಂದ ನೀರು ಸಾರ್ವಜನಿಕ ರಸ್ತೆಯಲ್ಲಿ ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಶಾಲೆಯ ಮೈದಾನದಲ್ಲಿ ನೀರು ನಿಂತು ವಿದ್ಯಾರ್ಥಿಗಳು ಓಡಾಡದಂತೆ ಆಗಿತ್ತು. ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮತ್ತು ವಾರ್ಡ್ ಸದಸ್ಯೆ ಮೇಧಾ ನಾಯ್ಕ, ಮುಖ್ಯಾಧಿಕಾರಿ ಪ್ರವೀಣಕುಮಾರ ಗುರುವಾರ ಮುಂಜಾನೆ ಜೆಸಿಬಿ ಯಂತ್ರ ಹಾಗೂ ಪೌರ ಕಾರ್ಮಿಕರೊಂದಿಗೆ ಆಗಮಿಸಿ ಗಟಾರವನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು.
ಸರ್ಕಾರಿ ಶಾಲೆಗೆ ಸರ್ಕಾರದಿಂದ ನಿರ್ಲಕ್ಷ : ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 155 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ವರ್ಗಗಳು ಮಂಜೂರಾಗಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಆದರೆ ಬೆಂಬಲ ನೀಡಿ ಬೆಳೆಸಬೇಕಾದ ಸರ್ಕಾರದಿಂದ ಅಗತ್ಯ ಸೌಲಭ್ಯ ಒದಗಬೇಕಾಗಿದೆ. ಪ್ರಭಾತನಗರ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕಂಪೌAಡು ಮತ್ತು ಮೈದಾನದ ಕುರಿತು ಅಧಿಕಾರಿಗಳು ಮತ್ತು ಶಾಸಕರನ್ನು ಈ ಹಿಂದೆ ಶಾಲೆಗೆ ಕರೆಸಿ ಸಮಸ್ಯೆ ಮಾಹಿತಿ ನೀಡಲಾಗಿತ್ತು. ಅವರು ಭರವಸೆ ನೀಡಿ ಹೋಗಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷತನದಿಂದ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯು ಅಪಾಯದ ಸ್ಥಿತಿ ತಲುಪಿದೆ ಎಂದು ವಿದ್ಯಾರ್ಥಿ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಭೇಟಿ: ಪ್ರಭಾತನಗರ ಶಾಲೆಯ ಕಂಪೌAಡ್ ಗೋಡೆ ಕುಸಿದಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯ ಕಾಂಪೌAಡ್ ನಿರ್ಮಾಣ ಮತ್ತು ಕೊಠಡಿ ಮಂಜೂರಿ ಮಾಡಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಸ್ಥಳಕ್ಕೆ ಭೇಟಿ ನೀಡಿಶಾಲೆಗೆ ಕಟ್ಟಡ ಮತ್ತು ಶಿಕ್ಷಗರ ಅಗತ್ಯವಿದೆ. ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ

.

error: