May 4, 2024

Bhavana Tv

Its Your Channel

ಹೊನ್ನಾವರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ

ಹೊನ್ನಾವರ:- ಹಗಲಿರುಳು ಎನ್ನದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿಯು ನಿರಂತರ ಉಕ್ಕಿ ಹರಿಯುತ್ತಿದ್ದು ನದಿಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಹೊನ್ನಾವರ ತಾಲೂಕಿನ ಗುಂಡಬಾಳ ನದಿಪಾತ್ರದ ಕುಟುಂಬಗಳು ಪ್ರವಾಹದ ಸಂಕಷ್ಟ ಎದುರಿಸುವಂತಾಗಿದೆ. ಕಳೆದೊಂದು ವಾರದಿಂದ ನಿರಂತರವಾಗಿ ವರುಣನ ಅಬ್ಬರ ಹೆಚ್ಚಾಗಿದೆ. ಗುರುವಾರ ಬೆಳಿಗ್ಗೆ ನದಿಪಾತ್ರ ಪ್ರದೇಶದಲ್ಲಿ ಪುನಃ ಪ್ರವಾಹ ಉಂಟಾಗಿದೆ. ಬುಧವಾರ, ಗುರುವಾರ ಹೆಚ್ಚು ಮಳೆಯಾದ ಪರಿಣಾಮ ಒಮ್ಮಿಂದೊಮ್ಮೆಲೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡಬಾಳ,ಚಿಕ್ಕನಕೊಡ್,ಗುAಡಿಬೈಲ್,ಮುಟ್ಟಾ,ಹಾಡಗೇರಿ,ಹಡಿನಬಾಳ,ನಾಥಗೇರಿ,ಕೂಡ್ಲ, ಭಾಗದ ನದಿಯ ಎಡ ಬಲದಂಡೆಯ ತಗ್ಗುಪ್ರದೇಶಗಳಲ್ಲಿನ ಹಲವು ಮನೆಗಳಿಗೆ,ತೋಟ,ಗದ್ದೆಗಳಿಗೆ ನೀರು ನುಗ್ಗಿದೆ.ಭಾಸ್ಕೇರಿ, ಕಡತೋಕಾದಲ್ಲು ನೆರೆಯಿಂದ ಜನಜೀವನ ಅಸ್ತವ್ಯಸ್ತವಾಗಿ ನೆರೆ ಸಂಕಷ್ಟ ಎದುರಾಗುತ್ತಿದೆ.
ಕಂದಾಯ, ಪೊಲೀಸ್, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ.
ತಹಶೀಲ್ದಾರ ನಾಗರಾಜ ನಾಯ್ಕಡ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಮಳೆಯು ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರಕ್ಕೆ ಬರಲು ನೆರೆಯ ಭೀತಿಯಲ್ಲಿರುವವರಿಗೆ ಮನವಿ ಮಾಡಿದ್ದು, ಸರ್ಕಾರವು ಸಕಲ ರೀತಿಯು ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ.
ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊAಡಿರುವ ಗುಂಡಬಾಳ ಗ್ರಾಮದ ಬಳಿ ಗುಡ್ಡ ಕುಸಿದಿದೆ. ಹೆದ್ದಾರಿ ಮೇಲೆ ಗುಡ್ಡ ಕುಸಿದ ಹಿನ್ನಲೆ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.ಮಣ್ಣುತೆರವು ಕಾರ್ಯಾಚರಣೆ ನಡೆಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಮಳೆಯ ಪರಿಣಾಮ ನಗರೆಯ ಸುಬ್ರಹ್ಮಣ್ಯ ಶಿವ ಹೆಗಡೆ ಇವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದೆ. 40000 ರೂ ಅಂದಾಜು ಹಾನಿಯಾಗಿದೆ.
ವರದಿ: ವೆಂಕಟೇಶ್ ಮೇಸ್ತ ಹೊನ್ನಾವರ

error: