May 18, 2024

Bhavana Tv

Its Your Channel

ನೀರು ಹರಿದು ಹೋಗುತ್ತಿದ್ದ ಜಾಗದಲ್ಲಿ ಕೆಂಪು ಮಣ್ಣು ತುಂಬಿ ತೊಂದರೆ ; ಸ್ಥಳೀಯ ನಿವಾಸಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಹೊನ್ನಾವರ:- ನೈಸರ್ಗಿಕವಾಗಿ ಮಳೆಗಾಲದ ನೀರು ಹರಿದು ಹೋಗುತ್ತಿದ್ದ ಜಾಗದಲ್ಲಿ ಕೆಂಪು ಮಣ್ಣು ತುಂಬಿ ನೀರು ಹರಿಯದಂತೆ ಅಡೆತಡೆ ಉಂಟು ಮಾಡಿ ತೊಂದರೆ ಮಾಡಿರುತ್ತಾರೆ ಎಂದು ತಹಶೀಲ್ದಾರರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

ಹೊನ್ನಾವರ ಪಟ್ಟಣದ ಕರ್ಕಿನಾಕಾ, ಬಾಂದೆಗದ್ದೆ, ಸರ್ಪಿ ಸೆಂಟರ್, ನವನಗರ ಕಾಲೋನಿಯ ಸ್ಥಳೀಯ ನಿವಾಸಿಗಳು ತಹಶೀಲ್ದಾರರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮನವಿ ನೀಡಿದ ಸ್ಥಳೀಯರು ನಾವು ನಮ್ಮ ಜಾಗದಲ್ಲಿ ಅಡಿಕೆ, ತೆಂಗು, ಭತ್ತ, ಮಾವು ಮತ್ತು ಇನ್ನಿತರ ಕೃಷಿ ಬೆಳೆಯನ್ನು ಬೆಳೆಸಿದ್ದು, ನಮ್ಮ ಜಾಗದ ಎದುರುಗಡೆ ಜಾಗ ತೆಗೆದುಕೊಂಡಿರುವ ನಾರಾಯಣ ಶಿವಾ ನಾಯ್ಕ ಎನ್ನುವವರು ಅವರ ಜಾಗದಲ್ಲಿ ಮಣ್ಣು ತುಂಬಿದ್ದಾರೆ. ಇದರಿಂದ ಮಳೆಗಾಲದ ನೀರು ಹರಿದು ಹೋಗಲು ತಡೆ ಉಂಟಾಗಿ ನಮಗೆ ಅನಾನುಕೂಲ ಆಗುವಂತೆ ಮಾಡಿದ್ದಾರೆ.

ಮಳೆಯ ನೀರು ಗದ್ದೆಗಳಲ್ಲಿ ತುಂಬಿ ಗದ್ದೆಯಲ್ಲಿ ಬೆಳೆದ ಬೆಳೆ ನಾಶವಾಗಿದೆ. ಕೆಲವು ಮನೆಗಳಿಗೆ ನೀರು ತುಂಬಿ ವಾಸ್ತವ್ಯಕ್ಕೆ ಅನಾನುಕೂಲ ಉಂಟಾಗಿದ್ದು ಮನೆ ಹಾಗೂ ಜಮೀನಿನ ತಡೆಗೋಡೆ ಬಿದ್ದು ಹೋಗಿದೆ.

ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಅರಿತು ಅನಾಧಿಕಾಲದಿಂದಲು ನೈಸರ್ಗಿಕವಾಗಿ ನೀರು ಹರಿಯುತ್ತಿದ್ದ ಸ್ಥಳದಲ್ಲಿನ ಮಣ್ಣನ್ನು ತೆರವು ಗೊಳಿಸಿ ಈ ಹಿಂದಿನAತೆ ನೀರು ಕಾಲುವೆ ಮೂಲಕ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ವಿನಂತಿ ಮಾಡಿಕೊಂಡಿದ್ದಾರೆ. ಈ ಕುರಿತು ವಾಡ೯ ನಂಬರ ೧ರ ಪಟ್ಟಣ ಪಂಚಾಯತ ಸದಸ್ಯೆ ಶ್ರೀಮತಿ ಭಾರತಿ ಭಾಸ್ಕರ ಭಂಡಾರಿಯವರು ಮನವಿಯನ್ನು ಓದಿ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಭಾಗದ ನಾಗರೀಕರು ತನ್ನಲ್ಲಿ ಸಮಸ್ಯೆ ತೋಡಿಕೊಂಡಿದ್ದಕ್ಕೆ ತಾನು ನಾಗರೀಕರೊಂದಿಗೆ ಮಾನ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸುತ್ತಿರುವದಾಗಿ ತಿಳಿಸಿದರು.
ಪಟ್ಟಣ ಪಂಚಾಯತ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಸುಬ್ರಾಯ ಗೌಡರವರು ಮಾತನಾಡಿ ಕಕಿ೯ನಾಕಾ ಹಾಗೂ ಬಾಂದೆಗದ್ದೆ ಸುತ್ತಮುತ್ತಲಿನ ನಾಗರೀಕರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಮೋಹನ ಸಾಲೇಹಿತ್ತಲ್ಲರವರು ಮಾತನಾಡಿ ಸಮಸ್ಯೆಗೆ ಪರಿಹಾರ ದೊರೆಯಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವದಾಗಿ ತಿಳಿಸಿದರು.
ಈ ಸಂದಭ೯ದಲ್ಲಿ ಪ್ರೋ ವಿ ಎಮ್ ಭಂಡಾರಿ, ಗಜಾನನ ಶೇಷಗೀರಿ ಸಾಳೇಹಿತ್ತಲ್, ಸವಿತಾ ಎಸ್ ನಾಯ್ಕ, ದೇವು ಜಿ ಗೌಡ, ಸುಧಾಕರ ದಾಮೋದರ ನಾಯ್ಕ,ಕುಮಾರ ಮುಕ್ರಿ ಗೌಡ ಮುಂತಾದವರು ಉಪಸ್ಥಿತರಿದ್ದರು.

ವರದಿ:- ವೆಂಕಟೇಶ ಮೇಸ್ತ, ಹೊನ್ನಾವರ,

error: