May 19, 2024

Bhavana Tv

Its Your Channel

ಹೊನ್ನಾವರ ತಾಲೂಕಿನಲ್ಲಿ ಎಡಬಿಡದೆ ನಿರಂತರ ಸುರಿದ ಮಳೆ; ನದಿ ಪಾತ್ರದ ಜನರು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ

ಹೊನ್ನಾವರ ತಾಲೂಕಿನಲ್ಲಿ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆ ತನಕ ಎಡಬಿಡದೆ ನಿರಂತರ ಸುರಿದ ಮಳೆಗೆ ನೆರೆ ಉಕ್ಕುವಂತೆ ಮಾಡಿದೆ. ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿಯು ನಿರಂತರ ಉಕ್ಕಿ ಹರಿಯುತ್ತಿದ್ದು ನದಿ ಅಂಚಿಗೆ ವಾಸ್ತವ್ಯ ಇದ್ದವರು ಕಾಳಜಿ ಕೇಂದ್ರ ಮತ್ತು ಸಂಬAಧಿಕರ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ.

ಗುಂಡಬಾಳ ಭಾಸ್ಕೇರಿ ಬಡಗಣಿ ನದಿಪಾತ್ರದ ಕುಟುಂಬಗಳು ಪ್ರವಾಹದ ಸಂಕಷ್ಟ ಎದುರಿಸುವಂತಾಗಿದೆ. ಕಳೆದೊಂದು ವಾರದಿಂದ ನಿರಂತರವಾಗಿ ವರುಣನ ಅಬ್ಬರ ಹೆಚ್ಚಾಗಿದ್ದು ಮುಗ್ವಾ ಗ್ರಾ. ಪಂ. ವ್ಯಾಪ್ತಿಯ ಕೊಂಡಾಮಕ್ಕಿ, ಅಬ್ಳಿಮನೆ, ಬಂಕನಹಿತ್ಲ, ಹರಿಜನ ಕೇರಿ, ಕ್ರಿಶ್ಚಿಯನ್ ಕೇರಿ, ಸಂಕದ ಬಾಗಿಲಿನಲ್ಲಿ ನೀರು ತೋಟ ಮತ್ತೆ ಮನೆಯ ಅಂಗಳ ತನಕ ಬಂದಿದ್ದು, ಮನೆಯ ಮೆಟ್ಟಿಲಿನ ತನಕ ಬಂದಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಸುರಕಟ್ಟೆ ಹಿ. ಪ್ರಾ. ಶಾಲೆ ಮತ್ತು ಭಾಸ್ಕೇರಿ ಹಿ. ಪ್ರಾ. ಶಾಲೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದರು. ಸ್ವಲ್ಪ ಮಟ್ಟಿಗೆ ನೀರು ಇಳಿಕೆಯಾದ ಕಾರಣ ಕಾಳಜಿ ಕೇಂದ್ರಕ್ಕೆ ಬರಲು ಒಪ್ಪಲಿಲ್ಲ ಎಂದು ಸ್ಥಳೀಯ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಯವರು ತಿಳಿಸಿದ್ದಾರೆ.

ಚಿಕ್ಕನಕೋಡ ಗ್ರಾ. ಪಂ. ವ್ಯಾಪ್ತಿಯ ಹಿ. ಪ್ರಾ. ಶಾಲೆ ಗುಂಡಿಬೈಲ್ ನಂ.೨ ಮತ್ತು ಗುಂಡಬಾಳ ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ನೇರೆ ಪೀಡಿತ ಪ್ರದೇಶದ ಗ್ರಾಮಸ್ಥರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಗುಂಡಿಬೈಲ್, ಚಿಕ್ಕನಕೋಡ, ಗುಂಡಬಾಳ, ಹೆಬೈಲ್ ಗ್ರಾಮದಲ್ಲಿ ಗುಂಡಬಾಳ ನದಿಯ ನೀರು ತೋಟ ಅಂಗಳದಲ್ಲಿ ನೀರು ತುಂಬಿಕೊAಡಿದ್ದು, ಮನೆಯ ಮೆಟ್ಟಿಲಿನ ತನಕ ಪ್ರವೇಶ ಮಾಡಿದೆ. ಸ್ಥಳೀಯ ನಿವಾಸಿಗಳೆಲ್ಲ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ.

ಹಳದಿಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ಬಡಗಣಿ ನದಿಯು ಉಕ್ಕಿ ಹರಿದಿದ್ದು ಕರಿಮೂಲೆ ಚಿಟ್ಟೆ, ಮಣ್ಣಗದ್ದೆ, ಕಂಚAಟಿ, ರಜನಿಗುಡಿಯಲ್ಲಿ ಮನೆಯ ಒಳಗೆ ನೀರು ಹೊಕ್ಕಿದೆ. ಸ್ಥಳೀಯರನ್ನು ಸುರಕ್ಷಿತವಾಗಿ ಸಾಗಿಸಲು ದೋಣಿಯನ್ನು ಬಳಸಲಾಯಿತು. ಸ್ಥಳೀಯರು ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದೇ ತಮ್ಮ ಸಂಬAಧಿಕರ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಸ್ಥಳೀಯ ಗ್ರಾ. ಪಂ. ಅಧ್ಯಕ್ಷ ಅಜೀತ್ ನಾಯ್ಕ, ಉಪಾಧ್ಯಕ್ಷೆ ಪುಷ್ಪ ಮಹೇಶ್, ಉಳಿದ ಸದಸ್ಯರು, ಪಿಡಿಓ, ಕಂದಾಯ ಇಲಾಖೆಯ ಅಧಿಕಾರಿಗಳು ತುರ್ತು ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕAದಾಯ, ಪೊಲೀಸ್, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದು, ಸಾರ್ವಜನಿಕರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ.

ಶಾಸಕ ಸುನೀಲ ನಾಯ್ಕ ನೆರೆ ಪ್ರದೇಶಕ್ಕೆ ಮತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿರಾಶ್ರಿತರಿಗೆ ಧೈರ್ಯ ತುಂಬಿದ್ದಾರೆ. ಭಟ್ಕಳ್ ಉಪವಿಬಾಧಿಕಾರಿ ಮಮತಾದೇವಿ, ತಹಶೀಲ್ದಾರ ನಾಗರಾಜ ನಾಯ್ಕಡ್ ತಾಲ್ಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ ಜಿ ನಾಯ್ಕ, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.. ಮಳೆಯು ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರಕ್ಕೆ ಬರಲು ನೆರೆಯ ಭೀತಿಯಲ್ಲಿರುವವರಿಗೆ ಮನವಿ ಮಾಡಿದ್ದು, ಸಕಲ ರೀತಿಯು ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ.

ಗಾಳಿ ಮಳೆಗೆ ಲಕ್ಷ್ಮೀ ರಾಮ ನಾಯ್ಕ ಅಡುಕಳ ಇವರ ಮನೆಗೆ ಹಾನಿಯಾಗಿದೆ. ಕಾಸರಕೋಡು ಕಡಲತೀರದಲ್ಲಿ , ಖಾಸಗಿ ಮೂಲದ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣಕ್ಕೆ ಪೋಲಿಸ್ ಬಲ ಪ್ರಯೋಗದಲ್ಲಿ, ನಿರ್ಮಿಸಿದ ರಸ್ತೆಯು ಇತ್ತೀಚೆಗೆ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಮತ್ತು ಸಮುದ್ರದ ಅಲೆಗಳಿಂದ ಕೊಚ್ಚಿ ಹೋಗಿದೆ.

ಹೆರಂಗಡಿ ಗ್ರಾಮದ ಅಳ್ಳಂಕಿಯ ನೆರೆ ನಿರಾಶ್ರಿತರ ಕಾಲೋನಿಯ ಹತ್ತಿರ ಗುಡ್ಡ ಕುಸಿದು ಮೋಹನ ನಾರಾಯಣ ಬಾಂದೇಕರ ಎನ್ನುವವರ ಎರಡು ತೆಂಗಿನ ಮರಗಳು ಧರೆಗುರುಳಿದ್ದು ಸುಮಾರು ರೂ. ೨೦೦೦೦ ರಷ್ಟು ಹಾನಿಸಂಬವಿಸಿದೆ. ಇನ್ನಷ್ಟು ಗುಡ್ಡ ಕುಸಿತದ ಭೀತಿ ಎದುರಾಗಿದ್ದು ಒಂದೆರಡು ಮನೆಗಳಿಗೆ ಅಪಾಯದ ಸಾಧ್ಯತೆ ಇರುವದಾಗಿ ವರದಿಯಾಗಿದೆ.

ಕುಮಟಾ ಶಾಸಕ ದಿನಕರ ಶೆಟ್ಟಿಯವರು ಹಳದಿಪುರ ಗ್ರಾ. ಪಂ. ವ್ಯಾಪ್ತಿಯ ನೆರೆ ಪೀಡಿತ ಪ್ರದೇಶವಾದ ಸಾಲಿಕೇರಿ, ಬಂದ್ನ ಕೇರಿ, ತಾರೀಹೊಳೆ , ಕಲಕಟ್ಟೆ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ತಶೀಲ್ದಾರ್ ನಾಗರಾಜ್ ನಾಯ್ಕಡ್, ಸಿಪಿಐ ಶ್ರೀಧರ್ ಎಸ್. ಆರ್, ಗ್ರಾ. ಪಂ. ಸದಸ್ಯ ಗಣೇಶ ಪೈ, ಶಿವಾನಂದ ನಾಯ್ಕ, ರೇಣುಕಾ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ವೆಂಕಟೇಶ ಮೇಸ್ತ, ಹೊನ್ನಾವರ

error: