May 19, 2024

Bhavana Tv

Its Your Channel

ಹೊನ್ನಾವರ ರೋಟರಿ ಕ್ಲಬ್ ಅಧ್ಯಕ್ಷರಾಗಿ ಮಹೇಶ ಕಲ್ಯಾಣಪುರ ಆಯ್ಕೆ

ಹೊನ್ನಾವರ ರೋಟರಿ ಕ್ಲಬ್ ಅಧ್ಯಕ್ಷರಾಗಿ ಮಹೇಶ ಕಲ್ಯಾಣಪುರ, ಕಾರ್ಯದರ್ಶಿಯಾಗಿ ಡಾ|| ಗಾಯತ್ರಿ ಗುನಗಾ ಹಾಗೂ ಖಜಾಂಚಿಯಾಗಿ ಶ್ರೀಧರ ಎನ್ ಹೆಗಡೆಯವರು ಆಯ್ಕೆಯಾಗಿದ್ದಾರೆ.

ಗುರುಪೂರ್ಣೀಮೆ ದಿನ ರೋಟರಿ ಕ್ಲಬ್ ಹೊನ್ನಾವರ ಇದರ ಪದಗ್ರಹಣ ಸಮಾರಂಭ ರೋಟರಿ ಪಾರ್ಕನಲ್ಲಿ ಜರುಗಿತು. ಮುಖ್ಯ ಅಥಿತಿಗಳಾಗಿ ರೋಟರಿ ಕ್ಲಬ್ ಬೆಂಗಳೂರು, ಲೇಕ್‌ಸೈಡ್‌ನ ಮಾಜಿ ಅಧ್ಯಕ್ಷರಾದ ರೋಟೆರಿಯನ್ ಕಾಶಿನಾಥ ಪ್ರಭುರವರು ಈ ವರ್ಷದ ಅಧ್ಯಕ್ಷರಾದ ರೋ. ಮಹೇಶ ಕಲ್ಯಾಣಪುರ, ಸೆಕ್ರೆಟರಿಯಾದ ರೋ. ಡಾ. ಗಾಯತ್ರಿ ಗುನಗಾ, ಮತ್ತು ಖಜಾಂಚಿಯಾದ ರೋ. ಶ್ರೀಧರ ಎನ್ ಹೆಗಡೆಯವರಿಗೆ ಪದಗ್ರಹಣ ನೀಡಿ ಶುಭ ಕೋರಿ ಮಾತನಾಡಿದರು,
ಅಧಿಕಾರ ಸ್ವೀಕರಿಸಿ ಅಧ್ಯಕ್ಷ ಮಹೇಶ ಕಲ್ಯಾಣಪುರರವರು ಮಾತನಾಡಿ ತಮ್ಮ ಅವಧಿಯಲ್ಲಿ ನಿರ್ವಹಿಸಬೇಕಾದ ಕಾರ್ಯಗಳನ್ನು ವಿವರಿಸುತ್ತಾ ಈ ವರ್ಷ ಮೀನುಗಾರರ ಸಮಸ್ಯೆಗಳ ಬಗ್ಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ರೋಟರಿ ಕ್ಲಬ್ ಹೊನ್ನಾವರ ಇವರು 3 ಯೋಜನೆಗಳ ಅನಾವರಣ ಗೊಳಿಸಿದರು. ಮೊದಲನೆಯದಾಗಿ ಸಾಮಾಜಿಕ ಜಾಲತಾಣದ ಅನಾವರಣ. ಎರಡನೆಯದಾಗಿ ಹೆಣ್ಣುಮಕ್ಕಳ ಸಬಲಿಕರಣ ಯೋಜನೆ, ಅದರಲ್ಲಿ ಒಂದರಿAದ ಹತ್ತನೆ ತರಗತಿಯ ತನಕ ಓದುತ್ತಿರುವ ನಾಲ್ಕು ವಿದ್ಯಾರ್ಥಿನಿಯರನ್ನು ಆಯ್ಕೆಮಾಡಿ ಅವರ ಶಿಕ್ಷಣಕ್ಕೆ ಬೇಕಾದ, ಪಠ್ಯ ಪುಸ್ತಕಗಳು ಹಾಗು ಅವರಿಗೆ ಓದಲು ಧನಸಹಾಯ, ಮೂರನೆಯದಾಗಿ ಗಿಫ್ಟ ಅ ಲ್ಯಾಬ್ ಎಂಬ ಯೋಜನೆಯ ಅಡಿಯಲ್ಲಿ 8 ರಿಂದ 10ನೇ ತರಗತಿಯ ಮಕ್ಕಳ ಕಲಿಕೆಗೆ ಬೇಕಾಗುವ 200 ಬಗೆಯ ಪ್ರಯೋಗಾಲಯದ ಸಲಕರಣೆಗಳನ್ನು ನೀಡುವುದು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾತನಗರದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಲಾಯಿತು.
ಕರಿಯರ್ ಕೌಂಸಲಿAಗ ಕಿಟ್‌ಗಳನ್ನು ಚನ್ನಕೇಶವ ಶಾಲೆ ಕರ್ಕಿ ಮತ್ತು ನ್ಯೂ ಇಂಗ್ಲಿಷ಼ ಶಾಲೆ ಹೊನ್ನಾವರಕ್ಕೆ ನಿಡಲಾಯಿತು. ಈ ಮೂಲಕ ಪ್ರತಿ ಶಾಲೆಗೆ ಭೇಟಿ ನೀಡಿ ಅವರಿಗೆ ವೃತ್ತಿ ಸಮಾಲೋಚನೆಯನ್ನು ರೋಟರಿ ಕ್ಲಬ್ ವತಿಯಿಂದ ಮಾಡಲಾಗುಚು ಎಂದರು.
ಈ ಸಂದರ್ಭದಲ್ಲಿ ಪರಿಪೂರ್ಣ ರೋಟಿ ಸದಸ್ಯರನ್ನು ಹಾಗೂ ರೋಟರಿ ಸಂಸ್ಥೇಗೆ ಅತೀ ಹೆಚ್ಚು ದೇಣಿಗೆ ನೀಡಿದ ರೋಟರಿ ಸದಸ್ಯರನ್ನು ಗೌರವಿಸಲಾಯಿತು.
ಡಿಸ್ಟಿçÃಕ್ಟ 3170 ಇದರ ಅಸಿಸ್ಟಂಟ್ ಗವರ್ನರ ರೋ. ರಾಜು ಪಾಟಿಲ್ ರವರು ಮುಖ್ಯ ಅಥಿತಿಯಾಗಿ ಆಗಮಿಸಿ ಶುಭ ಕೋರಿದರು.
ನಿಕಟಪೂರ್ವ ಅಧ್ಯಕ್ಷ ಸ್ಟೀಪನ್ ರೊಡ್ರಿಗಿಸ್ ಬಂದ ಎಲ್ಲ ಗಣಯರನ್ನು ಸ್ವಾಗತಿಸಿ ಪ್‌ರಸತಾವಿಕ ನುಇಗಳನ್ನಾಡಿ 2021-22 ನೇ ಸಾಲಿನ ತಮ್ಮ ಅವಧಿಯಲ್ಲಿ ನಡೆದ ಕೆಲಸ ಕಾಯ್ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಸಹಕರಿಸಿದವರನ್ನು ಅಭಿನಂದಿಸಿದರು.
ಡಾ ಗೌತಮ್ ಬಳಕೂರ ಹಾಗೂ ಅತಿಥಿಗಳ ಪರಿಚಯ ಮಾಡಿದರು, ದಿನೇಶ ಕಾಮತ ಮತ್ತು ಸತೀಶ ಭಟ್ ನಿರ್ವಹಿಸಿದರು, ಡಾ|| ಗಾಯತ್ರಿ ಗುನಗಾ ವಂದಿಸಿದರು.

error: