May 19, 2024

Bhavana Tv

Its Your Channel

ಅಳ್ಳಂಕಿ ಕಾಲೇಜಿನಲ್ಲಿ ಕಾಲೇಜು ಸಂಸತ್ತು ಉದ್ಘಾಟನೆ

ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಸಂಸತ್ತು ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಎಸ್.ಎನ್.ಹೆಗಡೆ ಇವರು ” ದೇಶದ ಭವಿಷ್ಯ ರೂಪಿಸುವ ಇಂದಿನ ಯುವ ಜನತೆಯು, ಮಾಧ್ಯಮಗಳು ಬಿಂಬಿಸುವ ಸಂಗತಿಗಳನ್ನು ಸ್ವಂತ ವಿವೇಚನೆಯಿಂದ ಸ್ವೀಕರಿಸುವ ಗುಣವನ್ನು ರೂಢಿಸಿಕೊಳ್ಳಬೇಕು” ಎಂದು ನುಡಿದರು.

ಮುಖ್ಯ ಅತಿಥಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಮೋದ ನಾಯ್ಕ ಮಾತನಾಡಿ, ” ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ” ಎಂದರು.
ಹೆರಂಗಡಿ ಪಂಚಾಯತ ಸದಸ್ಯರಾದ ವಿನಾಯಕ ನಾಯ್ಕ ಹಾಗೂ ಗಣೇಶ ಹಳ್ಳೇರ ಇವರು
“ವಿದ್ಯಾರ್ಥಿ ಪ್ರತಿನಿಧಿಗಳು ಕ್ರಿಯಾಶೀಲವಾಗಿ ದುಡಿದು, ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲಿಕ್ಕೆ ಕಾಲೇಜು ಸಂಸತ್ತು ವೇದಿಕೆಯಾಗಲಿ ” ಎಂದು ಹಾರೈಸಿದರು.
ಕಾಲೇಜು ಸಂಸತ್ತಿಗೆ ಆಯ್ಕೆಯಾದ ನೂತನ ವಿದ್ಯಾರ್ಥಿ ಪ್ರತಿನಿಧಿಗಲ್ಲಿ ಮಾನಸಾ ನಾಯ್ಕ,ದೀಕ್ಷಿತಾ ನಾಯ್ಕ , ಮತ್ತು ಶ್ರೀನಿಧಿ ಇವರು ತಮ್ಮ ಜವಾಬ್ದಾರಿ ಕುರಿತ ಅನಿಸಿಕೆ ಹಂಚಿಕೊAಡರು.
ಅನಂತರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಣಿತದಲ್ಲಿ 100 ಕ್ಕೆ 100 ಅಂಕ ಪಡೆದ ಒಂಬತ್ತು ವಿದ್ಯಾರ್ಥಿಗಳಿಗೆ ಗಣಿತ ಉಪನ್ಯಾಸಕರಾದ ಮಹೇಶ ಹೆಗಡೆಯವರು ತಲಾ ಎರಡು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಿದರು.ಕಾಲೇಜು ಉಪನ್ಯಾಸಕರ ವತಿಯಿಂದ ಮಹೇಶ ಹೆಗಡೆಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಎಸ್ . ಹೆಗಡೆ , ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಯು ಎಷ್ಟು ಮುಖ್ಯವೋ ಹಾಗೆಯೇ ಕಲಾ, ವಾಣಿಜ್ಯ, ವಿಜ್ಞಾನದ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿವೆ. ” ಎಂದರು.

ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ 25 ವರ್ಷ ಪೂರೈಸಿದ ನೆಲೆಯಲ್ಲಿ ಉಪನ್ಯಾಸಕರೆಲ್ಲ ಸೇರಿ ಅವರನ್ನು ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಗಜಾನನ ಹೆಗಡೆಯವರು ಉಪಸ್ಥಿತರಿದ್ದರು.
ಉಪನ್ಯಾಸಕ ಗೋವಿಂದ ರಾಯ ನಾಯಕ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಭಾರ್ಗವ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ದೇವಿದಾಸ ಕುಮಟಾಕರ ವಂದಿಸಿದರು. ಮಹೇಶ ಹೆಗಡೆ ಹಾಗೂ ಕಿಶೋರ್ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

error: