May 19, 2024

Bhavana Tv

Its Your Channel

ಉಪ್ಪೋಣಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೌರ್ಣಮಿಯಂದು ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ವೃತ

ಹೊನ್ನಾವರ:- ಉಪ್ಪೋಣಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೌರ್ಣಮಿಯಂದು ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ವೃತ ಕಥೆ ಪೂಜೆಯು ಜರುಗಿತು.

ಹೊನ್ನಾವರ ತಾಲೂಕಿನ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಉಪ್ಪೋಣಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರತಿ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ವೃತ ಕಥೆಯು ಜರುಗುತ್ತದೆ.

ಅತ್ಯಂತ ಕಷ್ಟದಿಂದ ನೊಂದು ಬೆಂದು ಬಂದ ಭಕ್ತರನ್ನು ಉದ್ದರಿಸಲು ಇಂತಹ ಕಲಿಗಾಲದಲ್ಲಿ ನಾನಿದ್ದೇನೆ ಎಂದು ತನ್ನ ಅಪಾರ ಮಹಿಮೆಯಿಂದ ತನ್ನ ಇರುವಿಕೆಯನ್ನು ಸಾರಿದ ತಾಯಿ ಚಾಮುಡೇಶ್ವರಿಯ ಅದ್ಬುತ ಮಹಿಮೆ ಹಾಗೂ ಪವಾಡದಿಂದ ಊರಿಂದ ಊರಿಗೆ ಹಬ್ಬಿದೆ.

ಅರ್ಚಕರಾದ ರವಿಯವರೆಗೆ ಮೈದರ್ಶನ ಬಂದು ಬಡವ ಬಲ್ಲಿದ ಎಂಬ ಯಾವ ಬೇದವೂ ಇಲ್ಲದೇ ಎಲ್ಲ ಜನರ ಸಮಸ್ಯೆಗಳಿಗೆ ಪರಿಹಾರವನ್ನು ತಾಯಿ ಚಾಮುಡೇಶ್ವರಿಯು ನೀಡುತ್ತಿದ್ದಾಳೆ.
ಅರ್ಚಕ ರವಿಯವರು ಮುಗ್ದರು ಧರ್ಮಬೀರುಗಳು ಅವರ ನಿಸ್ವಾರ್ಥ ಸೇವೆಗೆ ಅವರ ಭಕ್ತಿಗೆ ಮೆಚ್ಚಿ ತಾಯಿ ಚಾಮುಡೇಶ್ವರಿ ಯು ಅವರಿಗೆ ಮೈದರ್ಶನ ಬಂದು ಎಲ್ಲಾ ಭಕ್ತರ ಸಮಸ್ಯೆ ಗಳನ್ನು ಆಲಿಸಿ ಕ್ಷಣ ಮಾತ್ರದಲ್ಲಿ ಕಷ್ಟವನ್ನು ಪರಿಹರಿಸುತ್ತಿದ್ದಾಳೆ.

ತಾಯಿ ಚಾಮುಡೇಶ್ವರಿಯ ಸನ್ನಿಧಾನದಲ್ಲಿ ಪ್ರತಿ ಅಮವಾಸ್ಯೆಯಂದು ತೀರ್ಥಸ್ನಾನ ನಡೆಯುತ್ತದೆ ಅಂದು ಬರುವ ಭಕ್ತರ ಆರೋಗ್ಯ ಸಮಸ್ಯೆ, ಕೃತ್ರಿಮ ಬಾಧೆ ಮುಂತಾದ ಯಾವುದೇ ಸಮಸ್ಯೆ ಇದ್ದರೂ ತಾಯಿ ಚಾಮುಡೇಶ್ವರಿಯ ಸನ್ನಿಧಾನದಲ್ಲಿ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಅಂತೆಯೇ ಊರು ಪರ ಊರಿನ ಜಿಲ್ಲೆ ಹೊರಜಿಲ್ಲೆ ಯಾದ್ಯಂತ ತಾಯಿ ತನ್ನ ಅಪಾರ ಮಹಿಮೆಯಿಂದಲೇ ತಾಯಿ ಚಾಮುಡೇಶ್ವರಿಯು ಮನೆಮಾತಾಗಿದ್ದಾಳೆ.

error: