May 19, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಅರೇಅಂಗಡಿಯಲ್ಲಿ ಬೃಹತ್ ಆಲದ ಮರ ಬಿದ್ದು ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಬಂದ್.

ಹೊನ್ನಾವರ ತಾಲೂಕಿನ ಅರೇಅಂಗಡಿ ಸಮೀಪ ಬೃಹತ್ ಆಲದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಒಂದು ಗಂಟೆಗು ಅಧಿಕ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಇದರಿಂದ ಹೊನ್ನಾವರದಿಂದ ಅರೇಅಂಗಡಿ ಮಾರ್ಗವಾಗಿ ಸಾಲ್ಕೋಡ್, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ, ತೊಳಸಾಣಿ, ಚಿಕ್ಕೋಳಿ ಹೋಗುವ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಾಲ್ಕೋಡ್ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಸಹಕಾರದಿಂದ ಮರವನ್ನು ಕಟಾವು ಮಾಡುವ ಮೂಲಕ ಸಂಚಾರ ಸುಗಮಗೊಳಿಸಿದರು. ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಲೈನ್ ತುಂಡಾಗಿದ್ದು, ಹೆಸ್ಕಾಂ ಸಿಬ್ಬಂದಿಗಳು ಮಳೆಯ ನಡುವೆ ಕರ್ತವ್ಯ ನಿರ್ವಹಿಸುವ ಮೂಲಕ ಕೆಲವೇ ಗಂಟೆಯಲ್ಲಿ ವಿದ್ಯುತ್ ಸರಿಪಡಿಸುವ ಮೂಲಕ ಸ್ಥಳಿಯರ ಮೆಚ್ಚುಗೆ ಪಾತ್ರರಾದರು. ಬೃಹತ್ ಮರ ರಸ್ತೆಯಲ್ಲಿ ಬಿದ್ದರು, ಹೆಚ್ಚಿನ ರೀತಿಯಲ್ಲಿ ಹಾನಿ ಸಂಭವಿಸಿಲ್ಲ.

error: