May 18, 2024

Bhavana Tv

Its Your Channel

ಅಕಸ್ಮಾತ್ ಜಾರಿ ಹಳ್ಳದಲ್ಲಿ ಬಿದ್ದು ವ್ಯಕ್ತಿ ಸಾವು, ಹೊನ್ನಾವರ ತಾಲೂಕಿನ ವಂದೂರು ರೈಲ್ವೆ ಗೇಟ್ ಬಳಿ ನಡೆದ ಘಟಣೆ.

ಹೊನ್ನಾವರ ; ಬೆಳಿಗ್ಗೆ ಕೂಲಿಕೆಲಸಕ್ಕೆ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟಣೆ ಹೊನ್ನಾವರ ತಾಲೂಕಿನ ವಂದೂರು ರೈಲ್ಚೆ ಗೇಟ್ ಬಳಿ ನಡೆದಿದೆ, ಮೃತ ವ್ಯಕ್ತಿಯನ್ನು ಕೃಷ್ಣ ಗೌಡ ಎಂದು ಗುರುತಿಸಲಾಗಿದೆ.

ಎಂದಿನoತೆ ನಿನ್ನೆ ೧೬-೭-೨೦೨೨ ರಂದು ಬೆಳಿಗ್ಗೆ ೯ ಗಂಟೆಗೆ ಕರ್ಕಿಗೆ ಕೂಲಿ ಕೆಲಸಕ್ಕೆ ಎಂದು ಹೋದ ವ್ಯಕ್ತಿ ಸಂಜೆಯಾದರು ಮನೆಗೆ ಬರದೆ ಇದ್ದದ್ದನ್ನ ಕಂಡ ಆತನ ಪತ್ನಿ ತನ್ನ ಗಂಡನ ಅಣ್ಣನಾದ ಗಣಪತಿ ಮಾಸ್ತಿ ಗೌಡರ ಹತ್ತಿರ ವಿಷಯ ತಿಳಿಸಿದಾಗ ಅವರು ತಮ್ಮನ ಸ್ನೇಹಿತರಲ್ಲಿ ಹಾಗೂ ತಮ್ಮ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ವಿಚಾರಿಸಿದಾಗ ತಮ್ಮ ಎಲ್ಲಯೂ ಸಿಕ್ಕಿರಲಿಲ್ಲ. ನಂತರ ದಿನಾಂಕ: ೧೭-೦೭-೨೦೨೨ ರಂದು ಬೆಳಗ್ಗೆ ಗಣಪತಿ ಹಾಗೂ ಸಂಬAಧಿಕರೇಲ್ಲರೂ ಸೇರಿ ಕೃಷ್ಣ ಗೌಡ ಈತನ ಹುಡುಕಾಟದಲ್ಲಿದ್ದಾಗ ಅವನ ಸಂಬoಧಿಯಾದ ವಿಶ್ವನಾಥ ಮಾರು ಗೌಡ ಇವರು ವಂದೂರು ರೈಲ್ವೆ ಗೇಟ್ ಹತ್ತಿರ ಹರಿದಿರುವ ರೈಲ್ವೇ ಟ್ರಾಕ್ ಪಕ್ಷದ ಹಳ್ಳದಲ್ಲಿ ಮುಳುಗಿ ಮೃತಪಟ್ಟದ್ದಾಗಿ ತಿಳಿಸಿ ಕೂಡಲೇ ಬರುವಂತೆ ತಿಳಿಸಿದ್ದಾರೆ, ಕೂಡಲೇ ಅವರು ಸ್ಥಳಕ್ಕೆ ಹೋಗಿ ನೋಡಿದ್ದರಲ್ಲಿ ಕೃಷ್ಣ ಗೌಡ ಈತನು ವಂದೂರು ರೈಲ್ವೆ ಗೇಟ್ ಬಳಿ ಹರಿದಿರುವ ಹಳ್ಳದಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಇದ್ದನು.

ಕೃಷ್ಣ ಗೌಡ ಈತನು ಕೆಲಸಕ್ಕೆ ಹೋದವನು ವಾಪಸ್ ಮನೆಗೆ ಬರುತ್ತಿದ್ದಾಗ ದಿನಾಂಕ: ೧೬-೦೭-೨೦೨೨ ರಂದು ವಿಪರೀತ ಮಳೆ ಗಾಳಿ ಇದ್ದುದ್ದರಿಂದ ಮನೆಗೆ ಬರುವ ದಾರಿಯಲ್ಲಿ ಇರುವ ವಂದೂರು ರೈಲ್ವೆ ಟ್ರ‍್ಯಾಕ್ ಪಕ್ಕದ ಹಳ್ಳದಲ್ಲಿ ಕಾಲುಜಾಲಿ ಬಿದ್ದು ನೀಲಿನಲ್ಲಿ ಮುಳುಗಿ ಮೃತಪಟ್ಟದ್ದು ಇರುತ್ತದೆ. ನನ್ನ ತಮ್ಮನಾದ ಮೃತ ಕೃಷ್ಣ ಮಾಸ್ತಿ ಗೌಡ, ಪ್ರಾಯ: ೪೮ ವರ್ಷ, ಈತನು ದಿನಾಂಕ: ೧೬-೦೭-೨೦೨೨ ರಂದು ಕೂಲಿ ಕೆಲಸಕ್ಕೆ ಹೋದವನು ದಿನಾಂಕ: ೧೬-೦೭-೨೦೨೨ ರಂದು ಬೆಳಗ್ಗೆ ೦೯-೦೦ ಗಂಟೆಯಿAದ ದಿನಾಂಕ: ೧೭-೦೭-೨೦೨೨ ರಂದು ಬೆಳಗ್ಗೆ ೦೬-೩೦ ಗಂಟೆ ನಡುವಿನ ಅವಧಿಯಲ್ಲಿ ಕೂಲಿಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದಾಗ ವಿಪರೀತ ಮಳೆ ಗಾಳ ಇದ್ದುದ್ದರಿಂದ ವಂದೂರು ರೈಲ್ವೇ ಟ್ರ‍್ಯಾಕ್ ಪಕ್ಕದ ಹಳ್ಳದಲ್ಲಿ ಆಕಸ್ಮಾತ್ ಕಾಲುಜಾರಿ ಬಿದ್ದು ನೀಲಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ನನ್ನ ತಮ್ಮನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂದು ಗಣಪತಿ ಗೌಡ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: