May 20, 2024

Bhavana Tv

Its Your Channel

ಕಳಸನಮೋಟೆ ನಂ. 1 ರಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಹೊನ್ನಾವರ:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಸನಮೋಟೆ ನಂ. -1 ರಲ್ಲಿ ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸ್ಥಳೀಯರು ಆಗಿರುವ ಮಂಜು ಜಟ್ಟಿ ಗೌಡ ರವರು ಕಳಸನಮೋಟೆಯ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್. ನಾಯ್ಕ ರವರು ಕಲಿಕಾ ಸಾಮಗ್ರಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಇದೊಂದು ಶೈಕ್ಷಣಿಕ ಕಳಕಳಿಯ ಕಾರ್ಯಕ್ರಮ. ಮಂಜು ಗೌಡರು ಮೊದಲಿನಿಂದಲೂ ಶಾಲಾ ಶಿಕ್ಷಣದ ಅಭಿವೃದ್ಧಿಯ ಕುರಿತು ನನ್ನ ಜೊತೆ ಮಾತನಾಡುತ್ತಿದ್ದರು. ಇಂದಿನ ಕಾರ್ಯಕ್ರಮ ಅವರು ಶಿಕ್ಷಣದ ಬಗ್ಗೆ ಇಟ್ಟಿರುವ ಅಭಿಮಾನವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾಗಿರುವ ತಾಲೂಕಾ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರಾಧ ಎಮ್.ಜಿ. ನಾಯ್ಕ ರವರು ಮಾತನಾಡಿ, ಕರ‍್ಯಕ್ರಮಕ್ಕೆ ಸೇರಿರುವ ಪಾಲಕ /ಪೋಷಕರ ಸಂಖ್ಯೆಯನ್ನು ಗಮನಿಸಿದಾಗ ನಿಮ್ಮಲ್ಲಿರುವ ಶಿಕ್ಷಣದ ಕಳಕಳಿಯನ್ನು ತೋರಿಸುತ್ತದೆ. ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಸಂಘÀಟನೆಯಿAದಾಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿದರು.
ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸುವ ಮಂಜು ಜಟ್ಟಿ ಗೌಡ ಮಾತನಾಡುತ್ತಾ ನನ್ನ ಭಾಗದ ಮಕ್ಕಳಿಗೆ ಅನುಕೂಲವಾಗಲಿ ನಾವು ನೀಡುತ್ತಿರುವ ಕಲಿಕಾ ಉಪಕರಣಗಳು ಮಗುವಿನ ಶೈಕ್ಷಣಿಕ ಬದುಕಿಗೆ ಉಪಯುಕ್ತವಾಗಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಸಂಘಟಿಸೋಣ ಎನ್ನುವ ಅಭಿಮಾನದ ಮಾತನ್ನು ಹೇಳಿದರು.
ಕರ‍್ಯಕ್ರಮದವೇದಿಕೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಕಾಸರಕೋಡ ಭಾಗದ ಮೇಲ್ವಿಚಾರಿಕೆಯರಾದ ಭಾರತಿ ಹೆಗಡೆ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ ಗೌಡ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗೇಶ ಗೌಡ, ನಿಕಟ ಪೂರ್ವ ಎಸ್.ಡಿ. ಎಂ.ಸಿ ಅಧ್ಯಕ್ಷರಾದ ವಿಘ್ನೇಶ್ವರ ಗೌಡ ಕಾಸರಕೋಡ ಭಾಗದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಮಲ್ಲಪ್ಪ, ಕಳಸನಮೋಟೆ ನಂ. -2 ರ ಮುಖ್ಯಾಧ್ಯಾಪಕರಾದ ವಿನೋದ ಮಡಿವಾಳ ಹಾಜರಿದ್ದರು.
ಕರ‍್ದಯಕ್ರಮದಲ್ಲಿ ಕೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಸ್. ನಾಯ್ಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಮ್. ಜಿ. ನಾಯ್ಕ ದಾನಿಗಳಾಗಿರುವ ಮಂಜು ಜಟ್ಟಿ ಗೌಡ ಇವರುಗಳನ್ನು ಕರ‍್ಯಕ್ರಮದಲ್ಲಿ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕರಾದ ಕೆ.ಎಂ.ಹೆಗಡೆ ಸ್ವಾಗತಿಸಿದರು. ಗೌರೀಶ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: