May 19, 2024

Bhavana Tv

Its Your Channel

ಒಂದು ಅಪಘಾತ ನಾಲ್ಕು ಸಾವು, ಬದುಕು ಛಿದ್ರ : ಕುಟುಂಬದವರ ರೋಧನೆ

ಹೊನ್ನಾವರ : ಭಟ್ಕಳ ತಾಲೂಕಿನ ಶಿರೂರಿನ ಟೋಲ್ ಗೇಟ್ ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಮೃತ ಪಟ್ಟವರ ನಾಲ್ಕು ಜನರ ಅಂತ್ಯಕ್ರಿಯೆ ಕುಟುಂದವರ, ಬಂಧುಬಾAಧವರ ರೋದನದ ನಡುವೆ ಗುರುವಾರ ಮುಂಜಾನೆ ನಡೆಯಿತು. ಊರಿಗೆ ಊರೆ ಮಮ್ಮಲ ಮರುಗುತ್ತಿತ್ತು. ದಾರಿಯಲ್ಲಿ ತಿರುಗಾಡುವವರೆಲ್ಲ ಕಣ್ಣೀರು ಹಾಕುತ್ತಲೆ ಓಡಾಡುತ್ತಿದ್ದರು. ಇಡೀ ಹಾಡಗೇರಿ ಗ್ರಾಮಕ್ಕೆ ಸೂತಕದ ಛಾಯೆ ಹರಡಿತ್ತು.

ಬೆಳಿಗ್ಗೆ ಮೃತರ ಮನೆಗೆ ಮೃತದೇಹವನ್ನು ತರಲಾಯಿತು. ಬೆಳ್ಳಂಬೆಳಿಗ್ಗೆಯೆ ಮೃತರ ಮನೆಯ ಹತ್ತಿರ ನೂರಾರು ಜನರು ಸೇರಿದ್ದರು. ಸಂಬAಧಿಕರು, ಬಂಧುಬಾAಧವರು, ಸ್ನೇಹಿತರು ಸೇರಿ ರಸ್ತೆ ಉದ್ದಕ್ಕೂ ಜನರು ತುಂಬಿಕೊAಡಿದ್ದರು. ಮೃತ ಮಂಜುನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಆತನ ಪತ್ನಿ ಜ್ಯೋತಿ ನಾಯ್ಕ ಮನೆ ಅಕ್ಕ ಪಕ್ಕ ದಂತಿದ್ದು ಎರಡು ಕುಟುಂದವರ ಆರ್ಥನಾದ ಕೇಳಲಾಗುತ್ತಿರಲಿಲ್ಲ.

ಮೃತ ಮಂಜುನಾಥ ನಾಯ್ಕ ಮನೆಗೆ ಮೃತ ದೇಹವನ್ನು ತಂದಾಗ ಅವರ ಮನೆಯವರ ರೋದನ ಮುಗಿಲು ಮುಟ್ಟಿತ್ತು. ಅವರ ಅಕ್ಕಂದಿರು, ಹೆಂಡತಿ, ಚಿಕ್ಕ ಮಕ್ಕಳ ರೋದನ ಕುರುಳು ಹಿಚುಕಿದಷ್ಟು ಸಂಕಟವಾಗುತ್ತಿತ್ತು. ಮೃತರ ಮಗ ವಿದಿವಿಧಾನ ಪೂರೈಸಿ, ಹೆಚ್ಚಿನ ಕಾರ್ಯವನ್ನು ಸಹೋದರ ನಡೆಸಿಕೊಟ್ಟರು. ಮಂಜಣ್ಣರವರ ನೂರಾರು ಒಡನಾಡಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೋಂಡಿದ್ದರು. ತನ್ನ ಬದುಕು ನಿರ್ವಹಣೆಗಾಗಿ ಗೋಬಿ ಮಂಚೂರಿ ಮತ್ತು ಬಿರಿಯಾನಿ ಅಂಗಡಿ ನಡೆಸಿಕೊಂಡು ತನ್ನ ಪಾಡಿಗೆ ತಾನಿದ್ದ ಇವನಿಗೆ ವಿಧಿ ಬೇರೆಯೇ ಬರೆದಿತ್ತು. ತನ್ನ ಅಂಗಡಿಯಲ್ಲಿ ಕೆಲಸಕ್ಕೆ ಇದ್ದವನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಅಂಬ್ಯುಲೆನ್ಸ್ ಅಪಘಾತ ಇತನ ಉಸಿರು ನಿಲ್ಲಿಸಿ ಬಿಟ್ಟಿದೆ.

ತನ್ನ ಕುಟುಂಬದ ಎರಡು ಮುದ್ದಾದ ಕುಡಿಗಳನ್ನು ಅನಾಥರನ್ನಾಗಿಸಿ ವಿಧಿಯ ಆಟಕ್ಕೆ ಬಲಿಯಾದ ದಂಪತಿಗಳಾದ ಲೋಕೇಶ ನಾಯ್ಕ ಮತ್ತು ಜ್ಯೋತಿ ನಾಯ್ಕರವರ ಮೃತ ದೇಹ ಮನೆಗೆ ಬಂದಾಗ ಕುಟುಂದವರ, ಬಂಧುಬಾAಧವರ ರೋದನ ಮುಗಿಲು ಮುಟ್ಟಿತ್ತು. ಶವದ ಮೇಲೆ ಬಿದ್ದು ಅಳುತ್ತಿದ್ದರು. ಎರಡು ಶವವನ್ನು ಒಟ್ಟಿಗೆ ಮಲಗಿಸಿಟ್ಟಿದ್ದು ನೋಡಿ ಬಂದವರೆಲ್ಲ ಕಣ್ಣಿರು ಸುರಿಸುತ್ತಿದ್ದರು. ಇವರ ಅತೀ ಚಿಕ್ಕ ಮಗನೆ ಅಪ್ಪ ಅಮ್ಮನ ಅಂತ್ಯಸAಸ್ಕಾರ ಕಾರ್ಯ ನಡೆಸಿಕೊಟ್ಟರು. ಒಟ್ಟಿಗೆ ಬಾಳಿ ಬದುಕ ಬೇಕಿದ್ದ ದಂಪತಿಗಳಿಬ್ಬರು ತನ್ನ ಸಂಬAಧಿಯ ಚಿಕಿತ್ಸೆಯ ಸಲುವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಒಟ್ಟಿಗೆ ಉಸಿರು ನಿಲ್ಲಿಸಿದಂತಾಗಿದೆ.

ಮಂಜುನಾಥ ನಾಯ್ಕ ಅವರ ಅಂಗಡಿಯಲ್ಲಿ ಬಾಣಸಿಗನಾಗಿದ್ದ, ಅನಾರೋಗ್ಯಕ್ಕೆ ಒಳಗಾಗಿದ ಗಜಾನನ ನಾಯ್ಕ ಅಂತ್ಯಕ್ರಿಯೆಯನ್ನು ಹುಟ್ಟುರು ಬಳಕೂರಿನಲ್ಲಿ ನಡೆಸಲಾಯಿತು

ಈ ಅಪಘಾತಕ್ಕೆ ಟೋಲ್ ಗೇಟ್ ಅಜಾಗರುಕತೆಯೇ ಕಾರಣ ಎಂದು ಸಹ ಪ್ರಯಾಣಿಕರ :
ಅಂಬ್ಯುಲೆನ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಗಣೇಶ ನಾಯ್ಕ ಎಂಬವರು ಗಜಾನನ ನಾಯ್ಕ ರವರ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವು. ಒಟ್ಟು ೭ ಜನ ರಿದ್ದೆವು. ಟೋಲ್ ಗೇಟ್ ನವರು ವಾಹನ ಬಂದ ಮೇಲೆ ಆಕಳು ಎಬ್ಬಿಸಲು ಹೋದರು. ಆಗ ಡ್ರೈವರ್ ಬ್ರೇಕ್ ಹಾಕಿದ ವಾಹನ ಪಲ್ಟಿಯಾಯಿತು. ಅಪಘಾತಕ್ಕೆ ಟೋಲ್ ಸಿಬ್ಬಂದಿಯೇ ಕಾರಣ ಎಂದು ಸಹ ಪ್ರಯಾಣಿಕ ಗಣೇಶ ನಾಯ್ಕ ಹೇಳುತ್ತಾರೆ

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: