May 20, 2024

Bhavana Tv

Its Your Channel

ಪ್ರವಾಹದಿಂದ ಹಾನಿಗೊಳಗಾದ ಎಲ್ಲಾ ಮನೆಗಳಿಗೆ ಹೆಚ್ಚಿನ ಪರಿಹಾರ ಮತ್ತು ಅತಿವೃಷ್ಟಿಯಿಂದ ಹಾನಿಗೊಂಡ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹ

ಹೊನ್ನಾವರ:– ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪದೇ ಪದೇ ಪ್ರವಾಹ ಉಂಟಾಗುತ್ತಿದ್ದು ಇದರಿಂದಾಗಿ ಹಲವು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿವೆ. ಪ್ರವಾಹದಿಂದಾಗಿ ತಗ್ಗು ಪ್ರದೇಶಗಳ ಮನೆಗಳ ಸುತ್ತಲೂ ನೀರು ತುಂಬುವುದಲ್ಲದೇ ಕಸ ಕಡ್ಡಿಗಳು, ಮಣ್ಣು ಇವುಗಳೆಲ್ಲ ಮನೆಗಳ ಸುತ್ತಲೂ ಸಂಗ್ರಹಗೊAಡು ಇವುಗಳೆಲ್ಲ ಕೊಳೆತು ರೋಗ ರುಜಿನಗಳಿಗೆ ಕಾರಣವಾಗುತ್ತಿವೆ. ಇದರಿಂದ ಹಲವು ಜನರಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿನ ಬಾವಿಗಳಿಗೆ ಕೂಡ ಹೊಲಸು ನೀರು ತುಂಬುವುದರಿAದ ಬಾವಿ ಕಲುಷಿತಗೊಂಡು ಕುಡಿಯುವ ನೀರಿಗೂ ಬಹಳಷ್ಟು ದೂರ ಹೋಗಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ

ತೀವ್ರ ಮಳೆಯಿಂದಾಗಿ ಬಾವಿಗಳನ್ನು ಸ್ವಚ್ಛಗೊಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೊಲಸು ದುರ್ವಾಸನೆಗಳಿಂದ ಮನೆಗಳಲ್ಲಿ ವಾಸ್ತವ್ಯ ಕೂಡ ಮಾಡಲು ತುಂಬಾ ಕಷ್ಟವಾಗಿರುತ್ತದೆ. ತೋಟ - ಗದ್ದೆಗಳಿಗೆ ಹಾಕಿದ ಗೊಬ್ಬರ ಮಣ್ಣುಗಳು ಕೂಡ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸುತ್ತಿದೆ. 

ಮನೆಯ ಸುತ್ತಲೂ ನೀರು ತುಂಬುವುದರಿAದ ಮನೆ ಕೂಡ ಜೀರ್ಣಾವಸ್ಥೆ ತಲುಪುತ್ತಿದೆ. ಅಲ್ಲದೇ ಹಲವು ದಿನಗಳ ಕಾಲ ಮನೆ ತೇವಾಂಶಗೊAಡು ವಾಸಿಸಲು ಅನಾನುಕೂಲವಾಗುತ್ತಿದೆ. ಕುಡಿಯುವ ನೀರಿಲ್ಲದೇ ಉಳಿದ ಬಳಕೆಗೂ ನೀರು ಸಿಗದಂತಾಗಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳ ಕುಟುಂಬಗಳಿಗೆ ಜೀವನ ನಡೆಸುವುದು ತುಂಬ ಕಷ್ಟದಾಯಕವಾಗಿದೆ.
ಇದರಿಂದ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಕಂಇ275ಟಿಎನ್‌ಆರ್2022 : ಬೆಂಗಳೂರು. ದಿನಾಂಕ : 12-07-2022 ರಂತೆ ಮಾರ್ಗಸೂಚಿಯಲ್ಲಿ ನಿಗದಿ ಪಡಿಸಿದ ಕ್ರ.ಸಂ. 2ರ ಪ್ರವಾಹ, ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತುಗಳು, ಬಟ್ಟೆ ಬರೆ ಹಾನಿ ಇದಕ್ಕೆ ರೂ. 10,000=00 ಪರಿಹಾರ ನಿಗದಿ ಪಡಿಸಲಾಗಿದ್ದು ಇರುತ್ತದೆ.
ಈ ಎಲ್ಲಾ ಕಾರಣಗಳಿಂದ ಈ ಮಾರ್ಗಸೂಚಿಯನ್ನು ಬದಲಿಸಿ ಮಾನವೀಯ ನೆಲೆಯಲ್ಲಿ ಪ್ರವಾಹ ಸಂತ್ರಸ್ತ ತಗ್ಗು ಪ್ರದೇಶಗಳ ಎಲ್ಲಾ ಮನೆಗಳು / ಕುಟುಂಬಗಳಿಗೆ ಕನಿಷ್ಟ ರೂ. 20,000=00 ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇವೆಂದರು.
ನಿರAತರ ಮಳೆಯಿಂದ ಅಡಿಕೆ, ಭತ್ತ ಮುಂತಾದ ಬೆಳೆಗಳು ತೀವ್ರ ಹಾನಿಗೊಂಡಿದ್ದು ರೈತರಿಗೆ ಅಪಾರ ನಷ್ಟವಾಗುತ್ತಿದೆ. ತುರ್ತು ಸಮೀಕ್ಷೆ ನಡೆಸಿ ಬೆಳೆವಿಮೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರ ಮಧ್ಯ ಪ್ರವೇಶಿಸಿ ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇವೆ ಎಂದು ಕಿಸಾನ್ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಕಡತೋಕ ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

error: