May 19, 2024

Bhavana Tv

Its Your Channel

ಹೊನ್ನಾವರ ಪಿಎಲ್‌ಡಿ ಬ್ಯಾಂಕ್ ನಿoದ ತಾಲೂಕ ಆಸ್ಪತ್ರೆಗೆ ಸಹಾಯ ಹಸ್ತ

ಹೊನ್ನಾವರ :- “ಬ್ಯಾಂಕಿಗೆ ಬರುವ ಲಾಭಾಂಶದಲ್ಲಿ ಸರಕಾರಿ ಆಸ್ಪತ್ರೆಯ ಅಭಿವೃದ್ಧಿಯಲ್ಲಿಯೂ ವಿನಿಯೋಗಿಸಲಾಗುವುದು” ಎಂದು ಹೊನ್ನಾವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ(ಪಿ.ಎಲ್.ಡಿ)ನ ಅಧ್ಯಕ್ಷರಾದ ವಿ.ಎನ್.ಭಟ್ ಹೇಳಿದರು.
ಅವರು ತಾಲೂಕಾ ಆಸ್ಪತ್ರೆಯಲ್ಲಿ ಪಿ.ಎಲ್.ಡಿ ಬ್ಯಾಂಕ ವತಿಯಿಂದ ನಾಲ್ಕು ವೀಲ್ ಚೇರ್ ಮತ್ತು ನಾಲ್ಕು ಟ್ರಾಲಿಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಹೊನ್ನಾವರ ಸರಕಾರಿ ಆಸ್ಪತ್ರೆ ಬಡವರಿಗೆ ಸೇವೆ ನೀಡುವಲಿ ಮುಂಚುಣಿಯಲ್ಲಿದೆ. ಉತ್ತಮ ಚಿಕಿತ್ಸೆಯ ಕಾರಣದಿಂದ ಹೆಸರು ಪಡೆದುಕೊಂಡಿದೆ.
ಮುAದಿನ ದಿನಗಳಲ್ಲಿ ಆಸ್ಪತ್ರೆಯ ಕುಂದುಕೊರತೆಗಳಿಗೆ ಬ್ಯಾಂಕ ತನ್ನ ಇತಿಮಿತಿಯಲ್ಲಿ ಸ್ಪಂದಿಸಲಿದೆ. ಉತ್ತಮ ಗುಣಮಟ್ಟದ ನಾಲ್ಕು ವೀಲ್ ಚೇರ್ ಮತ್ತು ನಾಲ್ಕು ಟ್ರಾಲಿಯನ್ನು ಆಸ್ಪತ್ರೆಯ ಕೋರಿಕೆಯಂತೆ ನೀಡಿದ್ದೇವೆ. ರೋಗಿಗಳಿಗೆ ಇದರ ಉಪಯೋಗ ಆಗಲಿದೆ ಎಂದು ಹೇಳಿದರು. ಪ್ರಾಸ್ತವಿಕ ಮಾತುಗಳನಾಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ರಾಜೇಶ ಕಿಣಿರವರು “ನಮ್ಮ ಮನವಿಗೆ ತ್ವರಿತವಾಗಿ ಸ್ಪಂದಿಸಿ ಪಿಎಲ್‌ಡಿ ಬ್ಯಾಂಕಿನವರು ವೀಲ್ ಚೇರ್ ಮತ್ತು ಟ್ರಾಲಿಯನ್ನು ನೀಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಆಸ್ಪತ್ರೆಯ ವಿಚಾರವಾಗಿ ತ್ವರಿತವಾಗಿ ಸ್ಪಂದಿಸಿರುವುದು ನಿಜಕ್ಕೂ ಅಭಿನಂದನಾರ್ಹರು.ಅವರು ನೀಡಿರುವ ಈ ಕೊಡುಗೆ ಅಶಕ್ತ ರೋಗಿಗಳಿಗೆ ತುಂಬಾ ಅನೂಕೂಲವಾಗಲಿದೆ” ಎಂದು ಹೇಳಿದರು. ಬ್ಯಾಂಕಿನ ನಿರ್ದೇಶಕರವಾದ ಯೋಗೇಶ ರಾಯ್ಕರ ಸಹ ಮಾತನಾಡಿದ್ದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ರವಿ ಶೆಟ್ಟಿ,ಕೃಷ್ಣಾ ಗೌಡ, ರಾಜೇಂದ್ರ ನಾಯ್ಕ, ವಿ.ಕೆ.ವಿಶಾಲ, ರಾಜು ನಾಯ್ಕ, ರಾಘವೇಂದ್ರ ನಾಯ್ಕ ಗೋವಿಂದ ನಾಯ್ಕ, ಬ್ಯಾಂಕಿನ ವ್ಯವಸ್ಥಾಪಕಾರದ ಪಿ.ಎನ್ ಭಟ್ಟ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ಶಶಿಕಲಾ ನಾಯ್ಕ, ವೈದ್ಯಾಧಿಕಾರಿಗಳಾದ ಡಾ|| ಮಹೇಶ ಶೆಟ್ಟಿ,ಡಾ ಗುರುದತ್ತ ಕುಲಕರ್ಣಿ ಉಪಸ್ಥಿತರಿದ್ದರು.ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದ್ದರು.ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಸೇರಿ ವೀಲ್ ಚೇರ್ ಮತ್ತು ಟ್ರಾಲಿಯನ್ನು ಹಸ್ತಾಂತರಿಸಿದರು

error: