May 18, 2024

Bhavana Tv

Its Your Channel

ಹೊನ್ನಾವರ ಕಡತೋಕ , ಚಿತ್ತಾರಕ್ಕೆ ಕೇಂದ್ರ ಜಲ ಶಕ್ತಿ ತಂಡ ಭೇಟಿ

ಹೊನ್ನಾವರ :- ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿಗಳು ಜಲ ಶಕ್ತಿ ಅಭಿಯಾನ ಶ್ರೀ ಅಂಕಿತ್ ಮಿಶ್ರಾ (ಭಾ.ಆ.ಸೇ) ನೇತೃತ್ವದ ತಂಡಹೊನ್ನಾವರ ತಾಲೂಕಿನ ಕಡತೋಕಾ ಮತ್ತು ಚಿತ್ತಾರ ಗ್ರಾಮ ಪಂಚಾಯಿತಕ್ಕೆ ಭೇಟಿ ನೀಡಿ ಕೇಂದ್ರ ಪುರಸ್ಕೃತ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕಡತೋಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಕ್ಕಾರದಲ್ಲಿ ನಿರ್ಮಿಸಿದ ಕೃಷಿ ಹೊಂಡ  ಹಾಗೂ ಎಂಜಿ ನರೇಗಾ ಯೋಜನೆಯಡಿ ಕೈಗೊಂಡ ಡ್ರ‍್ಯಾಗನ್ ಫ್ರೂಟ್ಸ್ ತೋಟ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ/ಸ್ಥಳೀಯರಿAದ ಮಾಹಿತಿ ಪಡೆದುಕೊಂಡರು.
   ನಂತರ ತಂಡವು ಚಿತ್ತಾರ ಗ್ರಾಮ ಪಂಚಾಯತ್ ಅಡಿಕಲ್ ಗ್ರಾಮಕ್ಕೆ ಭೇಟಿ ನೀಡಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ನಿರ್ಮಿಸಿದ ಚೆಕ್ ಡ್ಯಾಮ್ ಕಾಮಗಾರಿಯನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಡಿ ಎಂ ಜಕ್ಕಪ್ಪಗೋಳ , ಉಪ ಕಾರ್ಯದರ್ಶಿ (ಅಭಿವೃದ್ಧಿ) ಜಿ ಪಂ ಕಾರವಾರ, ಸುರೇಶ್ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ್ ಪಂಚಾಯತ್ ಹೊನ್ನಾವರ, ಪ್ರಮೋದ್ ಸಾವಂತ್ ಇಓ ಅಂಕೋಲಾ, ಕೃಷ್ಣಾನಂದ ಕೆ. ಸಹಾಯಕ ನಿರ್ದೇಶಕರು (ಗ್ರಾ.ಉ) ತಾ.ಪಂ. ಹೊನ್ನಾವರ, ಸೂರ್ಯಕಾಂತ್ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಪ್ರದೀಪ ಆಚಾರಿ, ಂಇಇ ಪಂ.ರಾ.ಇA. ಉಪವಿಭಾಗ ಹೊನ್ನಾವರ, ಕಡತೋಕ ಗ್ರಾಪಂ ಅಧ್ಯಕ್ಷರಾದ ಕೃಷ್ಣ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಾಲಕೃಷ್ಣ ನಾಯ್ಕ, ಕಿರಣ್ ಕುಮಾರ್ ಎಂಜಿ, ರಾಧಾಕೃಷ್ಣ ನಾಯ್ಕ, ಫಲಾನುಭವಿಗಳಾದ ನಳಿನಿ ಗೌಡ, ನಾಗಪ್ಪ ಕುಪ್ಪಯ್ಯಗೌಡ ಹಾಜರಿದ್ದರು. ಸ್ಥಳೀಯ ನಿವಾಸಿ ಯಂಕು ಭಟ್ ಸಹಕರಿಸಿದರು.
error: