May 18, 2024

Bhavana Tv

Its Your Channel

ಸನಾತನ ಹಿಂದೂ ಧರ್ಮ ಪರಂಪರೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ: ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ

ಹೊನ್ನಾವರ ; ಅನಾದಿ ಕಾಲದಿಂದಲೂ ಬಂದ ಸನಾತನ ಹಿಂದೂ ಧರ್ಮದ ಪರಂಪರೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಟವಾದದ್ದು ಎಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ತಿಳಿಸಿದರು.
ಅವರು ಶೃಂಗೇರಿ ಗುರು ಭವನದಲ್ಲಿ ಕೊಂಕಣಿ ಖಾರ್ವಿ ಸಮಾಜದ ಗುರುದರ್ಶನ ಸಮಿತಿಯಿಂದ ಆಯೋಜಿಸಲಾದ ೨೨ನೇ ವರ್ಷದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮದಲ್ಲಿ ಶಿಷ್ಯ ವೃಂದದವರಿAದ ಪಾದಪೂಜೆ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.
ಹಿಂದೂ ಧರ್ಮದ ಮೂಲಗಳಾದ ವೇದ ಶಾಸ್ತ್ರ ಹಾಗೂ ಗ್ರಂಥಗಳಲ್ಲಿ ಹೇಳಿರುವ ಪ್ರತಿಯೊಂದು ವಿಷಯವು ಲೋಕ ಕಲ್ಯಾಣಾxð ಋಷಿ ಮುನಿಗಳಿಂದ ಬಂದ ಶ್ರೇಷ್ಠ ಸಂಗತಿಗಳಾಗಿವೆ. ಇವು ಪ್ರತಿ ಮನುಷ್ಯನಿಗೂ ಜೀವನ ನಿರ್ವಹಣೆಗೆ ಮಾರ್ಗದರ್ಶಕ. ಇವು ಸಮಸ್ತ ಲೋಕಕ್ಕೆ ವಿಶೇಷವಾದ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿದೆ. ಸರ್ವೆಜನ ಸುಖಿನೋ ಭವಂತು ಎಂದು ಸಾರುವ ಪುರಾತನ ಹಿಂದೂ ಧರ್ಮದಲ್ಲಿ ನಾವೆಲ್ಲರೂ ಹುಟ್ಟಿದ್ದು ನಮ್ಮ ಪುಣ್ಯ. ಇಂತಹ ಧರ್ಮದ ಬಗ್ಗೆ ತಿರಸ್ಕಾರ, ನಿಂದನೆ ಎಂದಿಗೂ ಸಲ್ಲದು. ಹಿಂದು ಧರ್ಮದವರಾದ ನಾವೆಲ್ಲರು ಧರ್ಮವನ್ನು ರಕ್ಷಿಸುವ ಕಾರ್ಯ ಮಾಡಬೇಕೆಂದರು. ಕೊಂಕಣಿ ಖಾರ್ವಿ ಸಮಾಜದವರು ಅನಾದಿ ಕಾಲದಿಂದಲೂ ಶೃಂಗೇರಿ ಪೀಠದ ಶಿಷ್ಯರಾಗಿದ್ದಾರೆ. ಪ್ರತಿ ವರ್ಷವು ಗುರುಗಳ ಪವಿತ್ರ ಚಾತುರ್ಮಾಸ್ಯದಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ಅನುಗ್ರಹ ಪಡೆಯುತ್ತಿರುವುದು ಸಂತೋಷದ ಸಂಗತಿ. ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯ, ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಯವರು ಎಲ್ಲರನ್ನು ಪರಿಪೂರ್ಣವಾಗಿ ಆಶೀರ್ವದಿಸಿದ್ದಾರೆ ಎಂದರು.
ಶೃAಗೇರಿ ಪೀಠದ ಕುಂದಾಪುರದ ಪ್ರಾಂತೀಯ ಧರ್ಮಾಧಿಕಾರಿ ವೇ. ಮೂ. ಬಿ. ಲೋಕೇಶ ಅಡಿಗರವರು ಪ್ರಸ್ತಾವಿಕವಾಗಿ ಮಾತನಾಡಿ, ಶೃಂಗೇರಿ ಕ್ಷೇತ್ರ ಋಷಿ ಮುನಿಗಳು ತಪಸ್ಸು ಮಾಡಿದ ಅತ್ಯಂತ ಪವಿತ್ರವಾದ ಪುಣ್ಯ ಭೂಮಿ. ಇಂತಹ ಸ್ಥಳದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜವರು ಅನಾದಿ ಕಾಲದಿಂದಲೂ ಗುರುಗಳ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಸಮಾಜ ಬಂಧುಗಳ ಕುಲ ಕಸಬು ಮೀನುಗಾರಿಕೆ ಉತ್ತಮವಾಗಿ ನಡೆದು ಅಭಿವೃದ್ಧಿ ಹೊಂದಬೇಕು. ಯುವ ಜನಾಂಗ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ವಿಯಾಗಲಿ ಎಂದು ಆರ್ಶೀದಿಸಬೇಕೆಂದು ಜಗದ್ಗುರುಗಳಲ್ಲಿ ಭಿನ್ನವಿಸಿಕೊಂಡರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಮೋಹನ ಬಾನಾವಳಿಕರ, ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಗುರುದರ್ಶನ ಸಮಿತಿ ಉಪಾಧ್ಯಕ್ಷ ಉಮೇಶ ಜಿ. ಮೇಸ್ತ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೇಸ್ತರವರನ್ನು ಶಾಲು ಹೊದಿಸಿ ಶೃಂಗೇರಿ ಮಠದ ಪರವಾಗಿ ಸನ್ಮಾನಿಸಲಾಯಿತು.
ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಜಿಲ್ಲೆ ಹಾಗೂ ಗೋವಾದಿಂದ ಸಾವಿರಾರು ಸಂಖ್ಯೆಯಲ್ಲಿ ಕೊಂಕಣಿ ಖಾರ್ವಿ ಸಮಾಜದವರು ಆಗಮಿಸಿ ಗುರುಗಳಿಂದ ಆರ್ಶಿವಾದ ಪಡೆದರು. ಗುರು ದರ್ಶನ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಪ್ರಧಾನ ಕಾರ್ಯದರ್ಶಿ ಕೃಷ್ಣ ತಾಂಡೇಲ್ ಕುಮಟಾ, ಗೋವಾ ಸಮಿತಿಯ ಉಪಾಧ್ಯಕ್ಷ ಅಶೋಕ ಪಾಲೇಕರ, ಮುಖಂಡರಾದ ಎಸ್ ಕೆ ಮೇಸ್ತ ಸಿದ್ದಾಪುರ, ಪರಮೇಶ್ವರ ಮೇಸ್ತ, ಕೇಶವ ತಾಂಡೇಲ್ ಕಾಸರಕೋಡ, ಎನ್ ಡಿ ಖಾರ್ವಿ ಭಟ್ಕಳ, ರಾಜೇಶ ತಾಂಡೇಲ ಟೊಂಕಾ, ಮಹೇಶ ಖಾರ್ವಿ ಸೊರಬಾ, ಪರಮೇಶ್ವರ ಆಚಾರ್ ಸಾಗರ, ಸತೀಶ ಮೇಸ್ತ ಕರ್ಕಿ, ಅಣ್ಣಪ್ಪ ಎಸ್. ಖಾರ್ವಿ, ಗಣಪತಿ ಬಾನಾವಳಿಕರ ಬೇಲೇಕೇರಿ, ಮಂಜುನಾಥ ಮೊತ್ಯಾ ಖಾರ್ವಿ, ಪ್ರಮೋದ ಬೇಲೇಕೇರಿ, ಶ್ರೀಧರ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

ವರದಿ ವೆಂಕಟೇಶ ಮೆಸ್ತ ಹೊನ್ನಾವರ

error: