May 18, 2024

Bhavana Tv

Its Your Channel

ಶ್ರಿ ಶ್ರಿ ಶ್ರಿ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ

ಹೊನ್ನಾವರ :– ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ ಹೊನ್ನಾವರ, ಎಸ್. ಡಿ.ಎಂ ಮಹಾವಿದ್ಯಾಲಯ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಶ್ರಿ ಶ್ರಿ ಶ್ರಿ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉಷಾ ಪವಸ್ಕರ್ ಗ್ರೇಡ್ 2 ತಹಶೀಲ್ದಾರರು ಶ್ರಿ ಶ್ರಿ ಶ್ರಿ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಯನ್ನು ಸಲ್ಲಿಸಿ ಪುಷ್ಪ ನಮನಗಳ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ನಮ್ಮ ಸಮಾಜದಲ್ಲಿ ಹಲವಾರು ಪ್ರತಿಭಾವಂತ ಯುವಕರು ವಿವಿಧ ವ್ಯಸನಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಕತ್ತಲೆಯಲ್ಲಿ ದೂಡುತ್ತಿದ್ದಾರೆ. ಸಜ್ಜನರ ಸಂಗ ಸದ್ಗುಣಗಳನ್ನು ಕಲಿಸುತ್ತದೆ ಮತ್ತು ದುರ್ಜನರ ಸಂಗ ದುರ್ಗುಣಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಕೆಟ್ಟ ವ್ಯಸನ ಇರುವವರಿಂದ ದೂರವಾಗಿ ಅಥವಾ ಅವರ ವ್ಯಸನಗಳು ಬಿಡಿಸುವಲ್ಲಿ ಸಹಾಯ ಮಾಡಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಂತೆ ಕರೆ ನೀಡಿದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ವಿಶಾಲ್ ರವರು ಮಾತನಾಡಿ ತಂಬಾಕಿನಿAದ ದೇಶದಲ್ಲಿ 100 ಜನರಿಗೆ ಕ್ಯಾನ್ಸರ್ ಬಂದಿದೆ ಎಂದರೆ ಅವರಲ್ಲಿ 30% ತಂಬಾಕು ಕಾರಣವಾಗಿರುತ್ತದೆ. ಇನ್ನು ಸಿಗರೇಟ್ ಸೇವನೆಯಿಂದ ಹೃದಯ ಸಂಬAಧಿ ಕಾಯಿಲೆ, ಕೂದಲು ಉದುರುವಿಕೆಗೆ, ಬಾಯಿ ರುಚಿಯನ್ನು ಕಳೆದುಕೊಳ್ಳುವುದು ಮತ್ತು ಅವರ ಜೀವನ ಅವಧಿಯು 10 ವರ್ಷ ಕಡಿಮೆಯಾಗುತ್ತದೆ. ಇನ್ನು ತಂಬಾಕು ತ್ಯಜಿಸಲು ಮೊದಲು ಮನಸ್ಸನ್ನು ದೃಢ ಸಂಕಲ್ಪ ಮಾಡಬೇಕು. ನಂತರ ವೈದ್ಯರ ಮತ್ತು ಹಿರಿಯರ ಸಲಹೆ ಪಡೆಯಬೇಕು. ಮದ್ಯಪಾನ ಮಾಡುವವರಲ್ಲಿ ಮಾನಸಿಕ ಕಾಯಿಲೆ, ನಿದ್ರಾಹೀನತೆ, ಡಿಪ್ರೆಶನ್, ನೆನಪಿನ ಶಕ್ತಿ ಕುಂದುವಿಕೆ, ಎಂಕ್ಸೈಟಿ ಕಂಡುಬರುತ್ತದೆ. ಇನ್ನು ಹಲವರಲ್ಲಿ ದೊಡ್ಡ ತಪ್ಪು ಕಲ್ಪನೆ ಎಂದರೆ ಕಿಡ್ನಿಯಲ್ಲಿ ಕಲ್ಲು ಇದ್ದರೆ ಬಿಯರ್ ಕುಡಿದರೆ ಕಡಿಮೆಯಾಗುತ್ತದೆ ಎಂದು. ಇಂತಹ ತಪ್ಪು ಕಲ್ಪನೆಗೆ ಒಳಗಾಗಿ ಮದ್ಯವ್ಯಶನಕ್ಕೆ ದಾಸರಾಗದಿರಿ ಇದರ ಬದಲಿಗೆ ನೀರನ್ನು ಹೆಚ್ಚಾಗಿ ಕುಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ..

ರೋಟರಿ ಹೊನ್ನಾವರದ ಅಧ್ಯಕ್ಷರಾದ ಮಹೇಶ್ ಕಲ್ಯಾಣಪೂರ್ ಮಾತನಾಡಿ ನಮ್ಮ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷ ಡ್ರಗ್ಸ್ ವಿರುದ್ಧ ಹೊರಡಲು ಡ್ರಗ್ಸ್ ಡಿ ಅಡಿಕ್ಷನ್ ಕ್ಯಾಂಪ್ ಕಾರ್ಯಕ್ರಮ ಆಯೋಜಿಸುತ್ತಿದೆ.. ಈ ವರ್ಷ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ದಿನದಂದು ತಾಲೂಕಾ ಆಡಳಿತದೊಂದಿಗೆ ಕೈಜೋಡಿಸಿ ಈ ಕಾರ್ಯಕ್ರಮವನ್ನು ನಡೆಸಲು ಸಂತಸವಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ವ್ಯಸನಗಳಿಂದ ದೂರವಿದ್ದು ದೇಶದ ಶ್ರೇಷ್ಠ ನಾಗರಿಕರಾಗಿ ಎಂದು ಸಲಹೆ ನೀಡಿದರು. ನಿಮ್ಮ ಒಬ್ಬ ಸ್ನೇಹಿತನನ್ನು ವ್ಯಸನ ಮುಕ್ತರಾಗಿ ಮಾಡಿದ್ದಲ್ಲಿ ಅದೇ ದೊಡ್ಡ ದೇಶ ಸೇವೆ ಎಂದು ಸಂದೇಶ ನೀಡಿದರು.

ತಾಲೂಕಾ ಆಡಳಿತದ ವತಿಯಿಂದ ಹೈ ಸ್ಕೂಲ್ ಮಕ್ಕಳಿಗಾಗಿ ವ್ಯಸನ ಮುಕ್ತ ಸಮಾಜ ಈ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ವಿಜಯಲಕ್ಷ್ಮಿ ಭಟ್ ಪ್ರಾಚಾರ್ಯರು, ಪ್ರಾಚಾರ್ಯರು ಪ್ರೊ ಎಂ ಎಚ್ ಭಟ್ , ಪ್ರೊ ವಿಧ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ವಿನಾಯಕ ಭಟ್ , ಡಾ. ಮಹೇಶ್ ಭಟ್ ಎನ್.ಎಸ್ ಎಸ್ ಆಫೀಸರ್ , ಶ್ರಿ ವಿದ್ಯಾಧರ ಕಡತೋಕಾ ಎನ್.ಎಸ್ ಎಸ್ ಅಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದೇಶ್ ನಾಯ್ಕರವರು ವಂದನಾರ್ಪಣೆಯನ್ನು ಮಾಡಿದರೂ ಮತ್ತು ಪ್ರಶಾಂತ್ ಹೆಗ್ಡೆಯವರು ಕಾರ್ಯಕ್ರಮವನ್ನು ನಿರ್ವಹಿಸಿದರು

error: