May 19, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ ನಿಂದ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ. ಸಿ.ಟ್ರಸ್ಟ್ (ರಿ)ಹೊನ್ನಾವರ /ಭಟ್ಕಳ ಇವರ ಮಾರ್ಗದರ್ಶನದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಉಷಾ ವೈರ್ ಸೇಪ್ಟಿ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಹೊನ್ನಾವರದ ಒಕ್ಕಲಿಗರ ಸಭಾ ಭವನದಲ್ಲಿ ನಡೆಯಿತು.

  ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ  ತಿಮ್ಮಪ್ಪ ಗೋವಿಂದ ಗೌಡ ಇವರು ಉದ್ಘಾಟಿಸಿ ಧರ್ಮಸ್ಥಳದ ಶೌರ್ಯ  ವಿಪತ್ತು ನಿರ್ವಹಣಾ ಕಾರ್ಯಕ್ರಮ ಕರಾವಳಿ ಭಾಗದ ಜನರಿಗೆ ಮಳೆಗಾಲ ಹಾಗೂ ಇನ್ನಿತರ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಆಪತ್ಕಾಲದಲ್ಲಿ  ಉತ್ತಮ ಸೇವೆ ನೀಡುತ್ತಿದ್ದು  ಅಭಿನಂದನೀಯ ವಿಷಯ ಎಂದರು.
  ಕಾರ್ಯಕ್ರಮದಲ್ಲಿ ಕರಾವಳಿ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ರವರು ಪ್ರಾಯೋಗಿಕ ತರಬೇತಿ ಸಮಯ ಉಪಸ್ಥಿತರಿದ್ದು ಅನುಸರಿಸಬೇಕಾದ ರಕ್ಷಣಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸ್ವಯಂ ಸೇವಕರಲ್ಲಿ ಜಾಗ್ರತಿ ಮೂಡಿಸಿ ಶುಭಕೋರಿದರು. 
   ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉತ್ತರಕನ್ನಡ ಜಿಲ್ಲಾ ನಿರ್ದೇಶಕರಾದ  ಮಹೇಶ್ ಎಂ ಡಿ ರವರು ಈ ಕಾರ್ಯಕ್ರಮದ ಉದ್ದೇಶ ,ನಡೆದು ಬಂದ ದಾರಿ,ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ  ಮಾಹಿತಿ ನೀಡಿ ಸ್ವಯಂ ಸೇವಕರು ಸಾರ್ಥಕತೆಯ ಸೇವೆ ನೀಡಿದಾಗ ಭಗವಂತನ ಪ್ರತಿರೂಪವಾಗಿ ತಮ್ಮನ್ನು ಸಮಾಜ ಗುರುತ್ತಿಸುತ್ತಿದೆ. ಮುಂದಕ್ಕೆ ಇನ್ನಷ್ಟು ಸಮಾಜಮುಖೀ ಸೇವೆಗಳು ನಿಮ್ಮಿಂದ ನಡೆಯಲಿ ಎಂದು ಮಾರ್ಗದರ್ಶನ ನೀಡಿದರು.
  ಜನಜಾಗ್ರತಿ ವೇದಿಕೆಯ ವಿಪತ್ತು ನಿರ್ವಹಣಾ ವಿಭಾಗದ  ಯೋಜನಾಧಿಕಾರಿಗಳಾದ  ಜೈವಂತ ಪಟಗಾರ ಇವರು ಕಾರ್ಯಕ್ರಮದ ರೂಪುರೇಶೆಗಳ ಕುರಿತಾಗಿ ಆಶಯ ಭಾಷಣ ವ್ಯಕ್ತಪಡಿಸಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಪಾಲ್ಗೊಂಡ ಕೆಳಗಿನೂರು ಗ್ರಾ.ಪಂ ಅಧ್ಯಕ್ಷರಾದ ಗಂಗಾಧರ ಗೌಡ ರವರು, ಪೂಜ್ಯ ವೀರೇಂದ್ರ  ಹೆಗ್ಗಡೆಯವರು ಸಮಾಜಮುಖೀ ಕಾರ್ಯಕ್ರಮಗಳನ್ನು ಸಂಘಟಿಸಿ ಈ ನಾಡಿಗೆ ನೀಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ ಮನುಕುಲದ ಉದ್ದರಕ್ಕಾಗಿ ಶ್ರಮಿಸುತ್ತಿದ್ದು ನಾವೆಲ್ಲರೂ ಈ ಕಾರ್ಯಕ್ರಮಕ್ಕೆ ಕೈ ಜೋಡಿಸೋಣ ಎಂದರು.
 ತರಬೇತಿಯ ಆಯೋಜಕರಾಗಿ ಆಗಮಿಸಿದ  ಕೆ ಜಗದೀಶ ಅಡಪ ಇವರು ಹೊನ್ನಾವರ ಭಟ್ಕಳ ತಾಲೂಕಿನ 200 ಸ್ವಯಂ ಸೇವಕರಿಗೆ ಅಗ್ನಿ ಅವಘಡ,ನೆರೆಹಾವಳಿ,ರಸ್ತೆ ಅಪಘಾತ,ಪ್ರಾಕ್ರತಿಕ ವಿಕೋಪ ಮುಂತಾದ ಕ್ಲಿಷ್ಟಕರ ಸಂದರ್ಭದಲ್ಲಿ  ಸ್ವಯಂ  ಸೇವಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಮಾಡಬಹುದಾದ ರಕ್ಷಣಾ ಕಾರ್ಯಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಸ್ವಯಂ ಸೇವಕರನ್ನು ಹುರಿದುಂಬಿಸಿ ಸೇವೆಗೆ ಸನ್ನದ್ಧರಾಗುವಂತೆ ಅಣಿ ಮಾಡಿದರು.
 ಕಾರ್ಯಕ್ರಮದಲ್ಲಿ ಘಟಕದ ಸ್ವಯಂ ಸೇವಕರಿಗೆ ಸಮವಸ್ತ್ರ ಹಾಗೂ ರಕ್ಷಣಾ ಪರಿಕರಗಳನ್ನು ವಿತರಿಸಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರೂ,ಜನ ಜಾಗ್ರತಿ  ವೇದಿಕೆಯ ಸದಸ್ಯರೂ ಆಗಿರುವ  ಶಿವರಾಜ್ ಮೇಸ್ತರವರು ವಹಿಸಿ ಮಾತನಾಡುತ್ತಾ ಶ್ರೀ ಕ್ಷೇತ್ರದ ಮೂಲಕ ರೂಪಿತಗೊಂಡ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ  ಅನುಷ್ಠಾನಗೊಳ್ಳುತ್ತಿದ್ದು  ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಈ ಭಾಗದಲ್ಲಿ ತುಂಬಾ ಉತ್ಸಾಹದಿಂದ ಸೇವೆ ನೀಡುತ್ತಿದ್ದು ನೆರೆಹಾವಳಿ ಸಂದರ್ಭದಲ್ಲಿ ತಾವು ಮಾಡಿದ ಸಹಾಯ ಸೇವೆಗಳು ಅಭಿಂದನೀಯವಾಗಿದ್ದು ಮುಂದಕ್ಕೂ ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
 ಕಾರ್ಯಕ್ರಮದಲ್ಲಿ ಜನಜಾಗ್ರತಿ ವೇದಿಕೆಯ ಯೋಜನಾಧಿಕಾರಿಗಳಾದ  ತಿಮ್ಮಯ್ಯ ನಾಯ್ಕ ,ಹೊನ್ನಾವರ ಭಟ್ಕಳ ತಾಲೂಕಿನ ಕ್ಷೇತ್ರ  ಯೋಜನಾಧಿಕಾರಿಗಳು, ಮೇಲ್ಲಿಚಾರಕ ಶ್ರೇಣಿ ಸಿಬ್ಬಂದಿಗಳು, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶೌರ್ಯ  ವಿಪತ್ತು ನಿರ್ವಹಣಾ ಘಟಕದ ಸ್ವಯಂ  ಸೇವಕರು ಪಾಲ್ಗೊಂಡಿದ್ದರು.
 ಭಟ್ಕಳ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ  ಗಣೇಶ ನಾಯ್ಕ ಸ್ವಾಗತಿಸಿದರು.

ಹೊನ್ನಾವರ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಮತಿ ವಾಸಂತಿ ಅಮಿನ್ ಸ್ವಾಗತಿಸಿದರು.
ಹೊನ್ನಾವರ ವಲಯ ಮೇಲ್ವಿಚಾರಕ ನಾಗರಾಜ್.ಕೆ ಕಾರ್ಯಕ್ರಮ ನಿರೂಪಿಸದರು.

error: