May 17, 2024

Bhavana Tv

Its Your Channel

ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹೊನ್ನಾವರ: ಪ್ರತಿಯೊಂದು ವ್ಯಕ್ತಿಯ ಸಾಧನೆಯ ಹಿಂದೆ ಸಮಾಜದ ಪೊತ್ಸಾಹ ಇದೆ. ಅದರಲ್ಲಿ ಗಾಣಿಗ ಸಮಾಜ ಮುಂಚೂಣಿಯಲ್ಲಿದೆ ಎಂದು ಶಾಸಕ ದಿನಕರ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊನ್ನಾವರ ತಾಲೂಕಿನ ಶ್ರೀನಿಧಿ ಸೇವಾ ವಾಹಿನಿಯ ವತಿಯಿಂದ ಬಾಳೆಗದ್ದೆಯ ಶ್ರೀ ವೆಂಕ್ರಟಮಣ ದೇವಾಲಯದಲ್ಲಿ ಆಯೋಜಿಸಿದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಾನ್ಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಣಿಗ ಸಮುದಾಯ ಎಲ್ಲರೊಂದಿಗೆ ಹೊಂದಿಕೊAಡು ಹೊಗಿದೆ. ಎಲ್ಲ ಸಮಾಜದವರನ್ನು ಪ್ರೀತಿಸುದರಿಂದಲೇ ನಮ್ಮ ಸಮಾಜ ಇಂದು ಈ ಮಟ್ಟದ ಗೌರವವನ್ನು ಪಡೆದಿದೆ. ಕಳೆದ 24 ವರ್ಷದಿಂದ ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾರ್ಥಿಗಳನ್ನು ಪೊತ್ಸಾಹಿಸುವ ಕಾರ್ಯ ಪ್ರಸಂನಾರ್ಹ ಎಂದರು.
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ದಿಮೆದಾರರಾದ ರವಿಕುಮಾರ ಶೆಟ್ಟಿ ಮಾತನಾಡಿ ಸಣ್ಣ ಸಮಾಜಕ್ಕೆ ಶಿಕ್ಷಣ ದೊರೆತಾಗ ಮುಂದೆ ಬರಲಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಉದ್ದಿಮೆ ರಂಗದಲ್ಲಿ ಸಾಧನೆ ಮಾಡಿದ್ದರೂ, ಶೈಕ್ಷಣಿಕವಾಗಿ ನಿರೀಕ್ಷಿತ ಮಟ್ಟದ ಸಾಧನೆ ಸಾಧ್ಯವಾಗಿಲ್ಲ. ಐ.ಎ.ಎಸ್. ಕೆ.ಎ.ಎಸ್ ಅಧ್ಯಯನ ಮಾಡುವರಿಗೆ ಪೊತ್ಸಾಹಿಸಿ ಆ ರಂಗದಲ್ಲಿಯೂ ಸಾಧನೆ ಮಾಡಬೇಕಿದೆ ಎಂದರು. ಕಳೆದ 24 ವರ್ಷದಿಂದ ನೋಟಬುಕ್ ಹಾಗೂ ಪ್ರತಿಭಾ ಪುರಸ್ಕಾರದ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪೊತ್ಸಾಹಿಸುವ ಕಾರ್ಯ ಮುಂದುವರೆಸುವAತೆ ಸಲಹೆ ನೀಡಿದರು.
ಸಾಹಿತಿ ವೆಂಕಟೇಶ ಬೈಲೂರು ಮಾತನಾಡಿ ವಿದ್ಯುತ್ ಕಾಣದ ಸಮಯದಲ್ಲಿ ಬೆಳಕನ್ನು ಪಸರಿಸಿದ ಸಮಾಜ . ನಮ್ಮ ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಪೊತ್ಸಾಹಿಸಿದರೆ ಸಮಾಜದ ಆದರ್ಶವ್ಯಕ್ತಿ ಆಗುತ್ತಾರೆ. ಇದನ್ನು ತಾಲೂಕಿನ ಶ್ರೀನಿಧಿ ಸೇವಾ ವಾಹಿನಿ ಮಾಡುತ್ತಿದೆ ಎಂದು ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೇಶವ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ , ವಿದ್ಯುತ್ ಗುತ್ತಿಗೆದಾರ ಎಸ್.ಕೆ.ಶೆಟ್ಟಿ, ಎ.ಎಸ್.ಐ ಗಿರೀಶ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಸ್ವಾಗತಿಸಿ, ಮಂಜುನಾಥ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಮಹೇಶ ಶೆಟ್ಟಿ ಮತ್ತು ರವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

error: