May 17, 2024

Bhavana Tv

Its Your Channel

ಹೊನ್ನಾವರ ತಾಲೂಕ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಹೊನ್ನಾವರ ತಾಲೂಕ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆಯಿತು.

ಜಿಲ್ಲಾಡಳಿತ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕ ಪಂಚಾಯತಿ ಹಾಗೂ ತಾಲೂಕ ಯುವ ಒಕ್ಕೂಟದ ಆಶ್ರಯದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ತಾಲೂಕ ಮಟ್ಟದ ಕಬ್ಬಡ್ಡಿ ಹಾಗೂ ಖೋಖೋ ಸ್ಪರ್ಧೆಗೆ ತಹಶೀಲ್ದಾರ ನಾಗರಾಜ ನಾಯ್ಕಡ್ ಚಾಲನೆ ನೀಡಿದರು.
ನಂತರ ಮಾತನಾಡಿ ಕಬ್ಬಡ್ಡಿ ಗ್ರಾಮೀಣ ಕ್ರೀಡೆಯಾದರೂ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಹೊಂದಿದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಕ್ರೀಡಾಪಟುಗಳನ್ನು ಸದೃಡಗೊಳಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಕ್ರೀಡಾಪಟುಗಳಿದ್ದು, ಅಂತವರ ಪ್ರತಿಭೆ ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದೆ. ಸೋಲು ಗೆಲವುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಆಡುವಂತೆ ಸಲಹೆ ನೀಡಿದರು.
ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಮೂಡ್ಕಣಿ ಮಾತನಾಡಿ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶವಾಗಿದ್ದು ಗ್ರಾಮೀಣ ಭಾಗದ ಯುವಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಸುರೇಶ ನಾಯ್ಕ ಮಾತೃ ಭೂಮಿಗೆ ಕಬ್ಬಡ್ಡಿ ಆಟಗಾರರು ನೀಡುವಷ್ಟು ಗೌರವ ಮತ್ತೆ ಯಾವ ಕ್ರೀಡೆಯಲ್ಲಿಯೂ ಇಲ್ಲ. ಶಿಸ್ತ್ರು ಹಾಗೂ ಸಂಯಮದಿAದ ಕ್ರೀಡಾ ನಿಯಮದಿಂದ ಆಡುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರೌಡಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಅಶೊಸಿಯೇಶನ್ ಸೀತಾರಾಮ ನಾಯ್ಕ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ವಿ.ಎ.ಪಟಗಾರ, ರಾಧಾಕೃಷ್ಣ ನಾಯ್ಕ , ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು, ನಂತರ ಕಬ್ಬಡ್ಡಿ ಪಂದ್ಯಾವಳಿ ಜರುಗಿತು.

error: