October 3, 2022

Bhavana Tv

Its Your Channel

ಹೊನ್ನಾವರ ತಾಲೂಕಾ ಆಸ್ಪತ್ರೆಯ ಮೂವರು ಸಿಬ್ಬಂಧಿಗಳಿಗೆ ಸನ್ಮಾನ

ಹೊನ್ನಾವರ:- ಅಮೃತ ಮಹೋತ್ಸವದ ಸ್ವಾತಂತ್ರö್ಯ ದಿನಾಚರಣೆಯಂದು ವಿವಿಧ ಕ್ಷೇತ್ರದಲ್ಲಿ ವಿಭಿನ್ನ ಸಾಧನೆಗೈದ ಸಿಬ್ಬಂಧಿಗಳನ್ನು ಸನ್ಮಾನಿಸಲಾಯಿತು. ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಹೆಚ್ಚಿನ ಪಲಾನುಭವಿಗಳಿಗೆ ಸೇವೆ ನೀಡಿದ್ದಕ್ಕಾಗಿ ರಾಜ್ಯ ಮಟ್ಟದಲ್ಲಿ ದಂತ ವೈದ್ಯ ವಿಭಾಗದಲ್ಲಿ ಗುರುತಿಸಲ್ಪಟ್ಟ ಡಾ|| ಅನುರಾಧ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬರವಣಿಗೆ ಮತ್ತು ವರದಿಗಾರಿಕೆಯಲ್ಲಿ ಗುರುತಿಸಲ್ಪಟ್ಟಿರುವ, ಮತ್ತು ಉತ್ತಮ ಸಾರ್ವಜನಿಕ ಸೇವೆಗಾಗಿ ಐ.ಸಿ.ಟಿ.ಸಿ ಆಪ್ತಸಮಾಲೋಚಕರಾದ ವಿನಾಯಕ ಪಟಗಾರವರನ್ನು ಈ ಸಂಧರ್ಬದಲ್ಲಿ ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
ಆಸ್ಪತ್ರೆಯ ಐ.ಸಿ.ಟಿ.ಸಿ ವಿಭಾಗದಲ್ಲಿ ಪ್ರಯೋಗಶಾಲಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಉಮೇಶ ಕೆ ರವರನ್ನು ಹೊನ್ನಾವರ ತಾಲೂಕ ಆಡಳಿತದಿಂದ ಉತ್ತಮ ಸಾರ್ವಜನಿಕ ಸೇವೆಗಾಗಿ ಸನ್ಮಾನಿಸಿದ್ದಾರೆ.

About Post Author

error: