May 5, 2024

Bhavana Tv

Its Your Channel

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಹೊನ್ನಾವರ ಶಾಖೆಯಲ್ಲಿ ಜೀವನ ಮೌಲ್ಯ ಯೋಜನೆ ಪರಿಹಾರ ವಿತರಣೆ

ಹೊನ್ನಾವರ:- ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಹೊನ್ನಾವರ ಶಾಖೆಯಲ್ಲಿ ಜೀವನ ಮೌಲ್ಯ ಯೋಜನೆಗೆ ಒಳಪಟ್ಟ ಮೃತರಾದ ನಾಲ್ಕು ಸದಸ್ಯರುಗಳ ವಾರಸುದಾರರಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರಿಯ ಅಧ್ಯಕ್ಷರಾದ ಜಿ .ಜಿ.ಶಂಕರ್ ರವರು ಈ ಸೌಲಭ್ಯವನ್ನು ಪಡೆಯಲು ಯಾವ ಕುಟುಂಬವು ಒಳಪಡಬಾರದು ಎಂಬುದು ನನ್ನ ಆಶಯವಾಗಿದೆ .ಇದು ಸಂತೋಷ ಪಡುವಂತಹ ಯೋಜನೆ ಅಲ್ಲ ಆದರೆ ಕಷ್ಟದಲ್ಲಿದ್ದವರಿಗೆ ನೆರವಾಗುವಂತಹ ಯೋಜನೆ . ಈ ಯೋಜನೆಗೆ ಯಾರು ಫಲಾನುಭವಿಗಳೇ ಆಗದಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ .ಆದರೆ ಫಲಾನುಭವಿಗಳಾದವರಿಗೆ ನೂರು ಪ್ರತಿಶತ ನೆರವಾಗಲಿ ಎಂದು ದೇವರಲ್ಲಿ ವಿನಂತಿಸುತ್ತೇನೆ ಎಂದರು .ಎಲ್ಲರೂ ಸುರಕ್ಷತೆಯಿಂದ ಸುಭಿಕ್ಷತೆಯಿಂದ ಇರಬೇಕು ಎಂದು ಭಾವಿಸುತ್ತೇನೆ .ಹುಟ್ಟಿದ ಮನುಷ್ಯ ಒಂದು ದಿನ ತಾನು ಬಂದ ನಡೆಗೆ ಸೇರಲೇಬೇಕು .ಅದರ ಮಧ್ಯೆ ಇಂತಹ ಬ್ಯಾಂಕಿAಗ್ ಕ್ಷೇತ್ರದಲ್ಲಿ ಆರ್ಥಿಕ ವ್ಯವಹಾರ ಮಾಡಿದಾಗ ಅವರ ಮೇಲೆ ಋಣ ಭಾರ ಇರುವಾಗ ,ಆ ಋಣವನ್ನು ಮುಂದಿನ ವಾರಿಸುದಾರರಿಗೆ ಬಿಟ್ಟು ಹೋಗವಾಗ ಅವರು ನೋವಿನಲ್ಲಿ ಇರಬಾರದು, ದುಃಖದಲ್ಲಿ ಇರಬಾರದು ಎನ್ನುವ ಉದ್ದೇಶದಿಂದ ,ಅಂತಹ ಭಾರಗಳನ್ನು ತಗ್ಗಿಸುವ ಉದ್ದೇಶದಿಂದ ಇಂತಹ ಜೀವನ ಮೌಲ್ಯ ಯೋಜನೆಯನ್ನು ಸಹಕಾರಿಯು ಹೊಂದಿದೆ .ಇದರಿಂದ ಸಾಲಗಾರರ ವಾರಿಸುದಾರರು , ಜಾಮೀನುದಾರರು ಸಾಲದ ಹೊರೆಯಿಂದ ಸುರಕ್ಷಿತರಾಗುತ್ತಾರೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಹಕಾರಿಯ ಜನರಲ್ ಮ್ಯಾನೇಜರ್ ಮಹೇಶ್ ಶೆಟ್ಟಿ ಅವರು ಮಾತನಾಡಿ ಬೇರೆ ವಿಮಾಸಂಸ್ಥೆಗಳಿAದ ಮೃತ ಕುಟುಂಬದವರಿಗೆ ಪರಿಹಾರ ಪಡೆಯಲು ತುಂಬಾ ವಿಳಂಬ ಹಾಗೂ ಅನೇಕ ಅಡೆತಡೆಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯು ಜೀವನ್ ಮೌಲ್ಯ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದ ಮೃತರ ವಾರಿಸುದಾರರು ಸುಲಭವಾಗಿ ಯಾವುದೇ ಖರ್ಚಿಲ್ಲದೆ ಪರಿಹಾರವನ್ನು ಪಡೆಯುವಂತಾಗಿದೆ .ವ್ಯಕ್ತಿಯು ನಮ್ಮಿಂದ ದೂರವಾದಾಗ ಗುಣಗಾನ ಮಾಡುವ ಬದಲು ಜೀವಂತ ಇರುವಾಗ ಪ್ರಶಂಸೆ ,ಸಹಾಯ ಮಾಡುವ ಬದಲಾವಣೆ ಸಮಾಜದಲ್ಲಾಗಬೇಕು ಎಂದರು .ಸ್ವಸಹಾಯ ಸಂಘದ ಮೂರು ಸದಸ್ಯರುಗಳಿಗೆ ಹಾಗೂ ಸಾಲಗಾರರಲ್ಲದ ಒಂದು ಸದಸ್ಯರಿಗೆ ಜೀವನ ಮೌಲ್ಯ ಯೋಜನೆಯ ಪರಿಹಾರವನ್ನು ವಿತರಿಸಲಾಯಿತು .ಸಂಘದ ಸದಸ್ಯರುಗಳಾದ ಶಿವಿ ಜಟ್ಟಿ ಮುಕ್ರಿ ಮಠದಕೇರಿ ಹೊನ್ನಾವರ ಇವರ ವಾರಸುದಾರರಾದ ಜಟ್ಟಿ ದೇವು ಮುಕ್ರಿ,
ಲತಾ ಉಮೇಶ್ ಆಚಾರಿ ಬಾದಳ್ಳಿ ನವಿಲಗೋಣ,ಇವರ ವಾರಿಸುದಾರರಾದ ಉಮೇಶ್ ತಿಮ್ಮಪ್ಪ ಆಚಾರಿ ,
ನಿಂಗಮ್ಮ ರಾಮಯ್ಯ ಹರಿಕಾಂತ್ ಸಾಲಿಕೆರಿ ಹಳದಿಪುರ ಇವರ ವಾಸುದಾರರಾದ ರಾಮಯ್ಯ ಜಟ್ಟಿ ಹರಿಕಾಂತ್ ,
ಫ್ರಾನ್ಸಿಸ್ ಡಯಾಸ್ ಮೂರ್ ಕಟ್ಟೆ ಹೊನ್ನಾವರ ಇವರ ವಾಸುದಾರರಾದ ಮುಂತಿ ಡಯಾಸ್ ಇವರಿಗೆ ತಲಾ ರೂ.50,000/-ದಂತೆ ಒಟ್ಟು ಎರಡು ಲಕ್ಷ ರೂಪಾಯಿಯ ಪರಿಹಾರವನ್ನು ಅಧ್ಯಕ್ಷರು ವಿತರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹಕಾರಿಯ ನಿರ್ದೇಶಕರಾದ ಲಿಫರ್ಡ್ ರಾಡ್ರಿಗಸ್,ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಡ್ವಿನ್ ರೆಬೆಲೋ, ಚೀಫ್ ಮ್ಯಾನೇಜರ್ ವಸಂತ ನಾಯಕ್, ಐಟಿ ಮ್ಯಾನೇಜರ್ ವಿಘ್ನೇಶ್ವರ ಹೆಗಡೆ ,ಡೆವಲಪ್ಮೆಂಟ್ ಆಫೀಸರ್ ರವಿಚಂದ್ರ ,ಆಂತರಿಕ ಲೆಕ್ಕ ಪರಿಶೋಧಕ ನರೇಂದ್ರಪ್ರಭು ,ಜೀವನ ಮೌಲ್ಯಯೋಜನೆಯ ವಿಭಾಗದ ಮಧುಕರ್ ಗೌಡ , ಪ್ರಧಾನ ಕಚೇರಿ ಮತ್ತು ಶಾಖೆಯ ಎಲ್ಲಾ ಸಿಬ್ಬಂದಿಗಳು , ಕೋ ಆರ್ಡಿನೇಟರ್ ಗಳು, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಹೊನ್ನಾವರ ಶಾಖೆಯ ಸೀನಿಯರ್ ಮ್ಯಾನೇಜರ್ ಕೇಶವ್ ತಾಂಡೇಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: