May 5, 2024

Bhavana Tv

Its Your Channel

ಲಿಂಗನಮಕ್ಕಿ ಜಲಾಶಯ ದಿಂದ ಏಕಾಏಕೀ ತಗ್ಗು ಪ್ರದೇಶಕ್ಕೆ ಹೆಚ್ಚುವರಿ ನೀರನ್ನು ಹರಿಬಿಡುವ ಕ್ರಮ ಸರಿಯಲ್ಲ-ಚಂದ್ರಕಾoತ ಕೊಚರೇಕರ್

ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿ ಆಗಲು ಕೇವಲ ಕೆಲವೇ ಅಡಿಗಳು ಮಾತ್ರ ಬಾಕಿ ಇದ್ದು.
ಜಲಾಶಯದ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು ಲಿಂಗನಮಕ್ಕಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗುವವರೆಗೂ ಕಾದು ಅದು ಪೂರ್ಣ ಭರ್ತಿಯಾದ ನಂತರವಷ್ಟೇ ಏಕಾಏಕೀ ತಗ್ಗು ಪ್ರದೇಶಕ್ಕೆ ಹೆಚ್ಚುವರಿ ನೀರನ್ನು ಹರಿಬಿಡುವ ಕ್ರಮ ಸರಿಯಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ತಪ್ಪುಗಳು ನಡೆದು ತಗ್ಗು ಪ್ರದೇಶದ ಜನ, ಜಾನುವಾರುಗಳ ಮತ್ತು ಸಾರ್ವಜನಿಕರ ಬೆಳೆ, ಚರಸ್ಥಿರ ಸ್ವತ್ತುಗಳ ನಷ್ಠ ಉಂಟಾಗಿತ್ತು. ಸಾರ್ವಜನಿಕ ಹಿತದೃಷ್ಠಿಯಿಂದ ಇಂತಹ ನಡೆ ನ್ಯಾಯವಾದುದಲ್ಲ ಮತ್ತು ಸುರಕ್ಷಿತ ಕ್ರಮವಲ್ಲ.

ಈಗಾಗಲೇ ಶರಾವತಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಹಲವು ಕಡೆ ನದಿಯ ನೀರು ಹಳ್ಳಕೊಳ್ಳಗಳ ಮೂಲಕ ಎಡ ಬಲ ದಂಡೆ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು ರೈತರ ನೂರಾರು ಎಕರೆ ಅಡಿಕೆ ತೋಟ ಮತ್ತು ಭತ್ತದ ಬೆಳೆ ನೀರಿನಲ್ಲಿ ಮುಳುಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ನದಿ ಮತ್ತು ಹಳ್ಳಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಆಗಾಗ್ಗೆ ಕ್ರಮ ಕೈಗೊಳ್ಳದೇ ಇರುವದು ಮತ್ತು ನದಿಕೊರೆತ ತಡೆಗಟ್ಟಲು ಅಗತ್ಯ ಪ್ರಮಾಣದ ಕಾಮಗಾರಿ ನಡೆಸದೇ ಇರುವದು ಸಹ ಮಳೆಗಾಲದಲ್ಲಿ ಈ ಭಾಗದ ಅನೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಠಿಯಾಗುತ್ತಿದ್ದು, ಬೆಳೆಹಾನಿಗೂ ಕಾರಣವಾಗುತ್ತಿದೆ. ಈ ನಡುವೆ ನದಿ ಪಾತ್ರದಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ೧೮೧೫ ಅಡಿಗಿಂತ ಹೆಚ್ಚು ನೀರು ತುಂಬಿದ ಬಗ್ಗೆ ಮಾಹಿತಿ ಇದ್ದು ತಗ್ಗು ಪ್ರದೇಶವಾದ ಶರಾವತಿ ನದಿ ಪಾತ್ರದ ಜನರ ಸುರಕ್ಷತೆಯ ಹಿತದೃಷ್ಠಿಯಿಂದ ಜಲಾಶಯ ಪೂರ್ತಿ ಭರ್ತಿಯಾಗುವ ವರೆಗೆ ಕಾಯದೇ ಈಗಿನಿಂದಲೇ ಸ್ವಲ್ಪ ಸ್ವಲ್ಪ ನೀರನ್ನು ಹರಿಬಿಟ್ಟು ನೀರಿನ ಮಟ್ಟದಲ್ಲಿ ಹೆಚ್ಚಳವಾಗದಂತೆ ಮತ್ತು ತಗ್ಗು ಪ್ರದೇಶದಲ್ಲಿ ಪ್ರವಾಹ ಸೃಷ್ಠಿಯಾಗದಂತ ಮುಂಜಾಗರೂಕತೆ ವಹಿಸುವ ಅಗತ್ಯವಿದೆ ಮತ್ತುಈ ಸಂಬAಧ ಈ ಹಿಂದೆ ನಾವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ದಾವೆಯಲ್ಲಿ ಕೆಪಿಸಿ ಮತ್ತು ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೀಡಿರುವ ನಿರ್ದೇಶಗಳನ್ನು ಮತ್ತುಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಅಗಬೇಕಾಗಿ ಶರಾವತಿ ನೆರೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಚಂದ್ರಕಾAತ ಕೊಚರೇಕರ್ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬAಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ

error: