May 18, 2024

Bhavana Tv

Its Your Channel

ಶ್ರೀ ಇಡಗುಂಜಿ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗಣಪತಿಯ ದರ್ಶನ ಪಡೆದ ಸಾವಿರಾರು ಭಕ್ತರು.

ಹೊನ್ನಾವರ: ಪುರಾಣ ಪ್ರಸಿದ್ಧ ಶ್ರೀ ಇಡಗುಂಜಿ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತರು ಗಣಪತಿ ಯ ದರ್ಶನ ಪಡೆದರು.

ಸಿದ್ದಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಪರಶುರಾಮ ಸೃಷ್ಟಿಯ ಇಡಗುಂಜಿ ಕ್ಷೇತ್ರದಲ್ಲಿ ಪ್ರತಿವರ್ಷವು ಕೂಡ ಗಣೇಶ ಚತುರ್ಥಿ ಹಾಗೂ ಮಹಾ ರಥೋತ್ಸವ ಅತ್ಯಂತ ವಿಜೃಂಭಣೆಯಿAದ ನಡೆಯುತ್ತದೆ. ಅದರೊಂದಿಗೆ ಮಂಗಳವಾರ ಅಂಗಾರಕ ಸಂಕಷ್ಟಿ ಕೂಡ ಅತ್ಯಂತ ವಿಶೇಷ. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲುತ್ತಾರೆ.

ಗಣೇಶ ಚತುರ್ಥಿಯ ನಿಮಿತ್ತ ಬುಧವಾರ ಮುಂಜಾನೆ ೫ ಗಂಟೆಯಿAದಲೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸಿ ತಮ್ಮ ಸೇವೆಗಳನ್ನು ಅರ್ಪಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ ಸುಪ್ರೀಂ ಕೋಟ್೯ ರೀಸಿವ್‌ರವರ ಮಾರ್ಗದರ್ಶನದಲ್ಲಿ ಪರಂಪರಾಗತ ಅರ್ಚಕ ಮನೆತವರಾದ ವಿದ್ವಾನ್ ಮಂಜುನಾಥ ಭಟ್ಟ ಹಾಗೂ ವಿದ್ವಾನ್ ವಿಷ್ಣು ಭಟ್ಟರವರ ಅರ್ಚಕತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸುಮಾರು ೭೦ ಕ್ವಿಂಟಲ್ ಕ್ಕಿಂತ ಹೆಚ್ಚು ಪಂಚಕಜ್ಜಾಯ ಸೇವೆ,೧೬೫ ಕ್ಕಿಂತ ಹೆಚ್ಚು ಅಷ್ಟದ್ರವ್ಯ ಗಣ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು.

ಈ ಸಂದರ್ಭದಲ್ಲಿ ಇಡಗುಂಜಿ ಗಣಪನ ದರ್ಶನಕ್ಕೆ ಆಗಮಿಸಿದ ಹಿರಿಯ ಪತ್ರಕರ್ತ ಟಿ.ಬಿ ಹರಿಕಾಂತರವರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: