May 20, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಎದುರಿಗೆ ಇಲಾಖೆಯ ಸಿಬ್ಬಂದಿಗಳಿoದಲೇ ನಡೆದ ಯಕ್ಷಗಾನ ಪ್ರದರ್ಶನ

ಹೊನ್ನಾವರ ತಾಲೂಕಿನ ಅರಣ್ಯ ಇಲಾಖೆಯಲ್ಲಿ ಪ್ರತಿಷ್ಠಾಪಿಸಿದ ಚೌತಿ ಗಣೇಶನ ಎದುರಿಗೆ, ವಿನೂತನ ಪ್ರಯತ್ನವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿAದಲೇ ನಡೆದ ಯಕ್ಷಗಾನ ಪ್ರದರ್ಶನ ಜನಮನವನ್ನು ರಂಜಿಸಿತು.

ಹೊನ್ನಾವರ ಅರಣ್ಯ ಇಲಾಖೆಯವರು ಆಚರಿಸಿದ ಸಾರ್ವಜನಿಕ ಗಣೇಶೋತ್ಸವದಲ್ಲಿ “ಯಕ್ಷ ಸಂಭ್ರಮ” ವೆಂಬ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ವಿಶೇಷವೆಂದರೆ ಮುಮ್ಮೇಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ವೇಷ ಮಾಡಿ ಅಭಿನಯಿಸುವ ಮೂಲಕ “ಸುಧನ್ವಾರ್ಜುನ ಕಾಳಗ” ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಯಶಸ್ವಿಗೊಳಿಸಿ ಜನಮೆಚ್ಚುಗೆಗೆ ಸಾಕ್ಷಿಯಾದರು.

ಈ ಪ್ರಸಂಗದಲ್ಲಿ ಬರುವ ಪ್ರಮುಖ ಪಾತ್ರಗಳಾದ ಸುಧನ್ವನಾಗಿ ಸೀತಾರಾಮ ನಾಯ್ಕ, ಪ್ರಭಾವತಿಯಾಗಿ ಶಂಕರ ನಾಯ್ಕ, ಅರ್ಜುನನಾಗಿ ಗಣೇಶ ನಾಯ್ಕ, ಕೃಷ್ಣನಾಗಿ ವಿನೋದ ಗೌಡ, ಹಂಸದ್ವಜನಾಗಿ ಅಜಿತ್ ಕೆ.ಆರ್, ಮಂತ್ರಿಯಾಗಿ ವಾಮನ ನಾಯ್ಕ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಪ್ರಾಮಾಣಿಕ ನ್ಯಾಯ ಒದಗಿಸಿದರು.

ಇವರಿಗೆ ಪೂರಕವಾಗಿ ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ನಾಯ್ಕ ಕೂಜಳ್ಳಿ, ಮೃಂದAಗದಲ್ಲಿ ಸೀತಾರಾಮ ನಾಯ್ಕ ಬಾಡ, ಚಂಡೆಯಲ್ಲಿ ರಾಮನ್ ಹೆಗಡೆ ಊರಕೇರಿ, ಉತ್ತಮವಾಗಿ ಸಹಕಾರ ನೀಡಿದರು.

“ಹೊನ್ನಾವರ ವಲಯ ಕಚೇರಿಯ ಶ್ರೀಧರ ನಾಯ್ಕರ ‘ಸಿಂಹ ನೃತ್ಯ’ ವಂತೂ ಅರಣ್ಯದಲ್ಲಿರುವ ಸಿಂಹವನ್ನೇ ನಾಚಿಸುವಂತೆ ಆಕರ್ಷಕವಾಗಿತ್ತು”. ಎಂಬ ಉದ್ಗಾರ ಕಲಾಭಿಮಾನಿಗಳ ಬಾಯಿಂದ ಕೇಳಿಬಂತು.

ಯಕ್ಷಗಾನ ಕುಣಿತದ ಕುರಿತಾಗಿ ಹೆಚ್ಚಿನ ಜ್ಞಾನವಿಲ್ಲದ ಸಿಬ್ಬಂದಿಗಳಿಗೆ, ಗಜಾನನ ಭಾಗವತರು ಹಾಗೂ ಮಾರ್ಷಲ್ ಪರ್ನಾಂಡಿಸ್ ತಂಡದವರು ಯಕ್ಷಗಾನದ ಅರ್ಥಗಾರಿಕೆ ಹಾಗೂ ನೃತ್ಯವನ್ನು ಕಲಿಸಿದ್ದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಗೌಡ ಮಾತನಾಡಿ “ಯಕ್ಷಗಾನದ ಬಗ್ಗೆ ಜ್ಞಾನವಿಲ್ಲದೇ ಪಾತ್ರವನ್ನು ನಿರ್ವಹಿಸಿದಾಗ, ಕರಾವಳಿಯ ಹೆಮ್ಮೆಯ ಗಂಡು ಕಲೆಯನ್ನು ಅಣುಕಿಸಿದಂತಾಗಬಹುದು; ಎಂಬ ಉದ್ದೇಶದಿಂದ ನಮ್ಮ ಸಿಬ್ಬಂದಿಗಳು ಕಠಿಣವಾದ ಯಕ್ಷ ನೃತ್ಯವನ್ನು ಅಲ್ಪ ಸಮಯದಲ್ಲಿಯೇ ಶ್ರದ್ಧೆಯಿಂದ ಕಲಿತು ಮನೋಜ್ಞವಾಗಿ ಅಭಿನಯಿಸಿದ್ದಾರೆ” ಎಂದರು.

ವರದಿ:ನರಸಿoಹ ನಾಯ್ಕ್ ಹರಡಸೆ

error: