May 20, 2024

Bhavana Tv

Its Your Channel

ನಿವೃತ್ತಿ ಹೊಂದಿದ ಗೀತಾ ನಾಯ್ಕ ರವರಿಗೆ ಆತ್ಮೀಯ ಬಿಳ್ಕೋಡುಗೆ

ಹೊನ್ನಾವರ:- ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಗೀತಾ ನಾಯ್ಕ ರವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಆಸ್ಪತ್ರೆಯ ಎಲ್ಲ ವೈದ್ಯರುಗಳು ಮತ್ತು ಸಿಬ್ಬಂದಿಗಳು ಆತ್ಮೀಯವಾಗಿ ಬಿಳ್ಕೋಡುವ ಕಾರ್ಯಕ್ರಮ ಜರುಗಿತು.
ಆಸ್ಪತ್ರೆಯ ಸ್ತಿçà ರೋಗ ತಜ್ಞರಾದ ಡಾ|| ಕೃಷ್ಣಾ ಜಿ ರವರು ಮಾತನಾಡುತ ಗೀತಾರವರು ಪ್ರಾಮಾಣಿಕ ಸೇವೆ ನೀಡಿದ್ದಾರೆ. ಆಡಳಿತಾತ್ಮಕ ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು.
ಶಸ್ತç ಚಿಕಿತ್ಸಕ ತಜ್ಞರಾದ ಡಾ|| ಮಂಜುನಾಥ ಶೆಟ್ಟಿರವರು ಮಾತನಾಡುತ್ತ “ ನಮ್ಮ ಸೇವೆಗೆ ಸಂಬAಧಿಸಿದ ದಾಖಲೆಗಳನ್ನು ಕಾಲ ಕಾಲಕ್ಕೆ ಸರಿಯಾಗಿ ದಾಖಲಿಸಿ ಯಾವುದೇ ತೊಂದರೆಯಾಗದAತೆ ನಿರ್ವಹಿಸಿದ್ದಾರೆ. ನಮಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವದರಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದಾರೆ. ವೃತ್ತಿ ಜೀವನದಲ್ಲಿ ನಿವೃತ್ತಿ ಅನಿವರ‍್ಯ. ಅವರ ಮುಂದಿನ ಜೀವನ ಉತ್ತಮವಾಗಿರಲಿ” ಎಂದು ಹೇಳಿದರು.
ಮಕ್ಕಳ ತಜ್ಞೆ ಡಾ|| ಸೋನಿಯಾ ಸೇರಿದಂತೆ ಹಲವರು ಗೀತಾರವರ ಜೊತೆಗಿನ ವೃತ್ತಿ ಒಡನಾಟದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಶಶಿಕಲಾ ನಾಯ್ಕ ಮಾತನಾಡುತ್ತ “ ಆಡಳಿತ ವಿಭಾಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೊಬ್ಬರು ಹೇಳುವ ಪೂರ್ವದಲ್ಲೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವುದು ಅವರ ವಿಶೇಷತೆ” ಎಂದು ಹೇಳಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತಾಧಿಕಾರಿ ಡಾ|| ರಾಜೇಶ ಕಿಣಿ ರವರು ಮಾತನಾಡುತ್ತ “ಗೀತಾ ರವರು ಆಡಳಿತ ಕಛೇರಿಯಲ್ಲಿ ಮಹತ್ತರವಾದ ಸಿಬ್ಬಂದಿಗಳ ಸೇವಾ ದಾಖಲೆಗಳ ನಿರ್ವಹಣೆ ವಿಭಾಗವನ್ನು ದಕ್ಷವಾಗಿ, ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ಅವರ ಕಾರ್ಯನಿರ್ವಹಣೆ ಬಗ್ಗೆ ಮಾತನಾಡಿದ್ದರು.
ಕ್ಷ ಕಿರಣ ತಂತ್ರಜ್ಞರಾದ ಚಂದ್ರಶೇಖರ ಕಳಸ ರವರು ಸ್ವಾಗತಿಸಿ ಶ್ರೀಮತಿ ಗೀತಾ ನಾಯ್ಕರವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು. ಸಿಬ್ಬಂಧಿಗಳಾದ ವೆಂಕಟೇಶ ಜೆ ರವರ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಶ್ರೀಮತಿ ಗೀತಾ ನಾಯ್ಕರವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಮಂಗಲಾರವರು ವಂದಿಸಿದರು. ಆಪ್ತಸಮಾಲೋಚಕರಾದ ವಿನಾಯಕ ಎಲ್ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಎಲ್ಲ ವೈದ್ಯರುಗಳು, ಪ್ರಶಾಂತ ರೋಕಡೆ, ನಿತ್ಯಾನಂದ ಮಾಪಾರಿ ಸೇರಿದಂತೆ ಎಲ್ಲ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಶ್ರೀಮತಿ ಗೀತಾ ನಾಯ್ಕರವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

error: