May 18, 2024

Bhavana Tv

Its Your Channel

ಡಾ ಶ್ರೀಪಾದ ಶೆಟ್ಟಿಯವರ ಸುಮನಾ ಟ್ರಸ್ಟ್ ವತಿಯಿಂದ ಗುರುವಂದನೆ ಕಾರ್ಯಕ್ರಮ

ಹೊನ್ನಾವರ:” ಉತ್ತಮ ಗುರುವಿನ ಮಾರ್ಗದರ್ಶನ ಶಿಷ್ಯನಿಗೆ ದೊರೆತರೆ ಆತ ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿಯ ವಿಶ್ರಾಂತ ಜಂಟಿ ನಿರ್ದೇಶಕ ರಾಜೀವ ವಿ. ನಾಯಕ ತಿಳಿಸಿದರು.

ಅವರು ಡಾ ಶ್ರೀಪಾದ ಶೆಟ್ಟಿಯವರ ಸುಮನಾ ಟ್ರಸ್ಟ್ ಹೊನ್ನಾವರ ಇದರಿಂದ ಅರೇಅಂಗಡಿ ಎಸ್ ಕೆ. ಪಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಶಿಕ್ಷಕರು ತಮ್ಮ ಅಭೂತಪೂರ್ವ ಜ್ಞಾನದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ನೀಡುತ್ತಿದ್ದರು. ಆದರೆ ಇಂದು ಅಂತಹ ಸನ್ನಿವೇಶ ಅತ್ಯಂತ ವಿರಳ . ಡಾ ಶ್ರೀಪಾದ ಶೆಟ್ಟಿಯವರು ತಮಗೆ ಕಲಿಸಿದ ಗುರುಗಳನ್ನು ಗೌರವಿಸುವುದರ ಮೂಲಕ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ ಎಂದು ಅಭಿನಂದನೆ ವ್ಯಕ್ತಪಡಿಸಿದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಜಾನಪದ ವಿದ್ವಾಂಸ ಡಾ.ಎನ್ ಆರ್ ನಾಯಕರು ಮಾತನಾಡಿ ತಾನು ಕಲಿಸಿದ ವಿದ್ಯಾರ್ಥಿಗಳು ತನಗಿಂತ ಉತ್ತಮ ಸಾಧನೆ ಮಾಡಿರುವುದು ಸಂತೋಷದ ಸಂಗತಿ. ಅರೇಅಂಗಡಿಯಲ್ಲಿ ಅನೇಕ ಮೇಧಾವಿ ವಿದ್ಯಾರ್ಥಿಗಳಿದ್ದು ತನ್ನ ಜೀವನದ ಯಶಸ್ಸಿಗೆ ಕಾರಣರಾದ ಬಾಲ್ಯದ ಗೆಳೆಯ ದಿ. ಜಿ. ಎಸ್ ಹೆಗಡೆಯವರನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಎಸ್ ಜೆ ಖೈರನ್ ರವರು ಐದು ತಲೆಮಾರು ಉಪಸ್ಥಿತಿ ಇರುವ ಗುರುವಂದನಾ ಕಾರ್ಯಕ್ರಮ ಅಭೂತಪೂರ್ವವಾದದ್ದು. ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಹಾಗೂ ಗುರುಗಳನ್ನು ಸದಾ ಗೌರವಿಸಬೇಕಂದರು.

ವೇದಿಕೆಯಲ್ಲಿ ಖ್ಯಾತ ಚರ್ಮರೋಗ ತಜ್ಞ ಡಾ. ಶಿವಾನಂದ ಹೆಗಡೆ,ತಾಲ್ಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ ನಾಯ್ಕ, ಎಸ್ ಕೆ. ಪಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾರಾದ ವಿ.ಎನ್ ಭಟ್ಟ, ಹೈಸ್ಕೂಲಿನ ಮುಖ್ಯಾಧ್ಯಾಪಕರಾದ ಪ್ರಕಾಶ ನಾಯ್ಕ ಉಪಸ್ಥಿತರಿದ್ದರು.
ಶಿಕ್ಷಕರಾದ ಹನುಮಂತ ಗೋವಿಂದ ಭಟ್ ಹಳದೀಪುರ, ವಿ.ಎಸ್ ಹೆಗಡೆ ಮೂರುರು, ಎನ್ ಎಲ್ ಹೆಗಡೆ ಸಂತೆಗುಳಿ, ಕೆ.ಸ್ ಹೆಗಡೆ ಸಾಲಕೊಡ, ಎಸ್ ಜೆ ಹೆಗಡೆ ಗುಡ್ಡೆಬಾಳ ಇವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಸಂದೀಪ್ ಭಟ್ಟ, ಮಹೇಶ ಭಂಡಾರಿ ಅಭಿನಂದನಾ ಭಾಷಣ ಮಾಡಿದರು. ಎಸ್ ಕೆ. ಪಿ ಕಾಲೇಜಿನ ವಿದ್ಯಾರ್ಥಿಳು ಪಾರ್ಥನ ಗೀತೆ ಹಾಡಿದರು, ಸುಧೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

error: