May 16, 2024

Bhavana Tv

Its Your Channel

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ 20ನೇ ಸಮಾಲೋಚನೆ ಸಭೆ

ಹೊನ್ನಾವರ: ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ 20.ನೆ ಸಮಾಲೋಚನೆ ನಿನ್ನೆ ಕೊಡಾಣಿ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಸಭೆಯ ಉದ್ಘಾಟಕರಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ ಸುಬ್ರಹ್ಮಣ್ಯ ಮಡಿವಾಳ ಆಗಮಿಸಿದರು.ಸಭೆಯ ಅಧ್ಯಕ್ಷತೆಯಲ್ಲಿ ಸಂಘಟನೆಯ ಅಧ್ಯಕ್ಷ ರಾದ ಜಿ ಎನ್ ಗೌಡರು ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘಟನೆಯ ಗೌರವ ಅಧ್ಯಕ್ಷರಾದ ಜೆ ಟಿ ಪೈ.ಗೌರವ ಉಪಸ್ಥಿತರಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶೋಭಾ ನಾಯ್ಕ ಜಯಂತ ಈಶ್ವರ ನಾಯ್ಕ, ವಿನಾಯಕ ನಾಯಕ್, ತಿಮ್ಮಪ್ಪ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜೇಶ್ ನಾಯ್ಕ, ಮಾಜಿ ಪಂಚಾಯತ್ ಸದಸ್ಯರಾದ ದಾಮಜ್ ಫೆರ್ನಾಂಡಿಸ್, ಉದ್ಯಮಿಗಳಾದ ಚಂದ್ರಹಾಸ ನಾಯ್ಕ, ಆರ್ ಎನ್ ಹೆಗಡೆ, ಯುವಕ ಸಂಘದ ಅಧ್ಯಕ್ಷರಾದ ಕೇಶವ ನಾಯ್ಕ, ಜಿ ಟಿ ನಾಯ್ಕ, ವೆಂಕಟೇಶ್ ನಾಯ್ಕ, ಗೋವಿಂದ ನಾಯ್ಕ, ಸಂಘಟನೆಯ ಪ್ರಮುಖರಾದ ಎಸ್ ಜಿ ಹೆಗಡೆ, ಕೃಷ್ಣಮೂರ್ತಿ ಹೇಬ್ಬಾರ, ಶ್ರೀಕಾಂತ ನಾಯ್ಕಉಪಸ್ಥೀತರಿದ್ದರು.

ಸಭೆಯ ಪ್ರಾಸ್ತಾವಿಕವಾಗಿ ಎಸ್ ಜಿ ಹೆಗಡೆ ಮಾತನಾಡಿ ಸಂಘಟನೆ ಉದ್ದೇಶ ಚಿಂತನೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಾವು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಾಲೋಚನೆ ಸಭೆ ನಡೆಸುವ ಉದ್ದೇಶ ಎಂದರು.

ಉದ್ಘಾಟನೆ ನೇರವೇರಿಸಿ ಮಾತನಾಡಿದ ಚೇತನಾ ಸುಬ್ರಹ್ಮಣ್ಯ ಮಡಿವಾಳ ಇವರು ಮಾತನಾಡಿ ಸಂಘಟನೆಗೆ ನಮ್ಮ ಊರಿನ ಹೋರಾಟದ ನಾಯಕರೇ ಈ ಸಂಘಟನೆಗೆ ಅಧ್ಯಕ್ಷರಾಗಿ ಇರುವುದರಿಂದ ನಾವು ಪ್ರತಿಯೊಬ್ಬರೂ ಅವರ ಬೇಂಬಲಕ್ಕೇ ಖಂಡಿತವಾಗಿಯೂ ಇರಬೇಕು ಎಂದರು.

ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ ಪ್ರತಿಯೊಬ್ಬರಲ್ಲೂ ಇನ್ನೋಬ್ಬರನ್ನಾ ಬೆಳೆಸುವ ಉದ್ದೇಶ ಇರಬೇಕು ಕೇವಲ ನಾವು ಮಾತ್ರ ಬೆಳೆಯಬೇಕು ಹಂಬಲ ಇರಬಾರದು ಆದರೆ ನಿಮ್ಮೂರಿನ ಅಧ್ಯಕ್ಷರಾದ ಜಿ ಎನ್ ಗೌಡರು ಎಲ್ಲರನ್ನೂ ಬೆಳೆಸುವ ಉದಾರ ಗುಣ ಹೊಂದಿದ್ದಾರೆ ಅದು ನಿಮ್ಮ ಊರಿಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ

ಜಯಂತ ನಾಯಕ್ ಮಾತನಾಡಿ ಈ ಸಂಘಟನೆ ಕಳೆದ 20 ವರ್ಷಗಳ ಹಿಂದೆ ರಚನೆ ಆಗಬೇಕಿತ್ತು ಸ್ವಲ್ಪ ತಡವಾಗಿ ಆದರು ರಚನೆಯಾಗಿದ್ದು ಖುಷಿಯ ವಿಚಾರ ಈ ಸಂಘಟನೆಗೆ ಯುವಕರು ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದರು.

ವಿನಾಯಕ ನಾಯ್ಕ ಮಾತನಾಡಿ ಅನ್ಯಾಯದ ವಿರುದ್ಧ ಹೋರಾಟ ಮಾಡಿದ ನಾಯಕರು ಜಿ ಎನ್ ಗೌಡರು ಅಂದರೆ ತಪ್ಪಾಗಲಾರದು ಅವರು ಯಾವತ್ತು ತಮ್ಮ ಸಂಪೂರ್ಣ ಜೀವನವನ್ನು ಹೋರಾಟದ ಮೂಲಕ ಗುರಿ ಸಾಧಿಸಲು ಪ್ರಯತ್ನ ಪಡುವುದು ಅವರ ಗುಣ ಎಂದರು

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎನ್ ಎ ಸಮಸ್ಯೆ ಬಗೆಹರಿಸಲು ನಾವೆಲ್ಲರು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಚAದ್ರಹಾಸ ನಾಯ್ಕ ಮಾತನಾಡಿ ಇದು ಪಕ್ಷಾತೀತವಾಗಿ ರಚನೆಯಾದ ವೇದಿಕೆ ಇಲ್ಲಿ ಯಾರಿಗೂ ವ್ಯಯಕ್ತಿಕ ಹಿತಾಶಕ್ತೀ ಇಲ್ಲಾ ಯಾಕೇಂದರೆ ಈ ಸಂಘಟನೆಯ ಪ್ರಮುಖರ ಸೇವಾ ಮನೋಭಾವನೆಯೆ ನಮಗೆ ಸಾಕ್ಷಿ ಎಂದರು. ಜಿ ಟಿ ನಾಯ್ಕ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಯಾವ ಸಂಘಟನೆಯು ಜನರಲ್ಲಿ ಜಾಗೃತಿ ಮೂಡಿಸಲು ಬಂದಿಲ್ಲ ಆದರೆ ಈ ಸಂಘಟನೆ ಮಾತ್ರ ಗ್ರಾಮೀಣ ಪ್ರದೇಶದ ಜನರಿಗೆ ಜಾಗೃತಿ ಜೊತೆಗೆ ಜನರ ಪ್ರೀತಿ ಪಾತ್ರಕ್ಕೂ ಕಾರಣವಾಗಿರುವುದು ತುಂಬಾ ಸಂತೋಷದ ವಿಚಾರ ಈ ಸಂಘಟನೆಯ ಜೊತೆ ನಾವು ಯಾವತ್ತೂ ಇರುತ್ತೇವೆ

ಜೆ ಟಿ ಪೈ ಮಾತನಾಡಿ ನಾವು ಕೂಡಿ ಬದುಕಬೇಕೆಂಬ ಆಸೆ ಇದ್ದಾಗ ಮಾತ್ರ ನಾವು ಕಂಡ ಹೊನ್ನಾವರ ಬದಲಾಗಲು ಸಾಧ್ಯ ಎಂದರು.

ಆರ್ ಎನ್ ಹೆಗಡೆ ಮಾತನಾಡಿ ಸಂಘಟನೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಇಚ್ಛಾಶಕ್ತಿ ಆ ಇಚ್ಛಾಶಕ್ತಿ ಪ್ರತಿಯೊಬ್ಬರಲ್ಲಿ ಇದ್ದಾಗ ಸ್ಥಳೀಯ ಸಮಸ್ಯೆಯು ಸಹ ನಾವು ಸಂಘಟನೆಯ ಮುಖಾಂತರ ಪರಿಹಾರ ಕಾಣಲು ಸಾಧ್ಯ.ಈ ವೇದಿಕೆ ಖಂಡಿತವಾಗಿಯೂ ಗ್ರಾಮೀಣ ಪ್ರದೇಶಗಳಲ್ಲಿ ರಚನೆಯಾಗುತ್ತದೆ ಎಂದು ಹೇಳಿದರು.

ದಾಮಜ್ ಫೆರ್ನಾಂಡಿಸ್ ಮಾತನಾಡಿ ಹೊನ್ನಾವರದ ಸಮಸ್ಯೆಗಳು ಬಗೆಹರಿದರೆ ಮಾತ್ರ ನಾವು ಕಂಡ ಹೂನ್ನಾವರ ಮಾದರಿ ಹೊನ್ನಾವರ ಆಗಲು ಸಾಧ್ಯ ಎಂದರು.

ಜಿ ಎನ್ ಗೌಡರು ಮಾತನಾಡಿ ಈ ಸಂಘಟನೆ ಯಾವ ಪಕ್ಷ ಬೇಳೆಸುವುದಾಗಲಿ ವ್ಯಕ್ತಿ ಬೇಳೆಸುವುದಕ್ಕಾಗಿ ರಚನೆಯಾದ ವೇದಿಕೆ ಅಲ್ಲಾ ಇದರ ಮೂಲ ಉದ್ದೇಶ ಸಮಗ್ರ ಹೊನ್ನಾವರ ಬೆಳವಣಿಗೆ ಮಾತ್ರ ಎಂದರು.

ಸಭೆಯಲ್ಲಿ ಊರಿನ ಮಹಿಳೆಯರು ನಾಗರಿಕರು ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಬಸ್ ಸಮಸ್ಯೆ ಹಾಗೂ ಬೇರಂಕಿ ಭಾಗದಲ್ಲಿ ಇಂಡೇನ್ ಗ್ಯಾಸ್ ಸರಬರಾಜು ವಾಹನ ಬರುವುದಿಲ್ಲ ಅದು ಕೇವಲ ಕೊಡಾಣಿ ಭಾಗಕ್ಕೆ ಬರುತ್ತದೆ ಅದಕ್ಕೇ ಬೇರಂಕಿ ಭಾಗದಲ್ಲಿ ವಾಹನ ಬರುವ ವ್ಯವಸ್ಥೆ ಆಗಬೇಕು ಅಂದರು.

ವೇದಿಕೆಯ ಮುಂಭಾಗದಲ್ಲಿ ನಮ್ಮ ಸಂಘಟನೆಯ ಪ್ರಮುಖ ರಾದ ಪ್ರಭಾಕರ ಪಟಗಾರ, ರಾಜೇಶ್ ಮೇಸ್ತ, ಧನಂಜಯ, ನರಸಿಂಹ ನಾಯ್ಕ, ಅರವಿಂದ್ ಭಂಡಾರಕರ, ಶ್ರವಣ, ಸ್ಥಳೀಯರಾದ ನಾಗೇಶ್ ನಾಯ್ಕ, ಗಂಗಾಧರ ನಾಯ್ಕ, ವಿ,ಎಸ್ ಎಸ್ ಮಾಜಿ ಉಪಾಧ್ಯಕ್ಷರಾದ ಮಂಜಿ ಗೌಡ, ಇತರರು ಹಾಜರಿದ್ದರು.ಸಮಾಲೋಚನೆ ಸಭೆಯನ್ನು ನಡೆಸಲು ಶ್ರೀ ಮಂಜುನಾಥ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಳದ ನೆರವು ನೀಡಿತು.

ಸಭೆ ಯಶಸ್ವಿಯಾಗಿ ನಡೆಸಲು ನರಸಿಂಹ ನಾಯ್ಕ, ಚಂದ್ರಹಾಸ ನಾಯ್ಕ, ಜಯಂತ ನಾಯಕ್ ಮುತುವರ್ಜಿ ವಹಿಸಿದರು.ಸಭೆಯ ಸ್ವಾಗತ ಹಾಗೂ ನಿರೂಪಣೆ ಯನ್ನು ಗಿರೀಶ್ ರಾಯ್ಕರ್ ಉಪ್ಪೋಣಿ ನೇರವೇರಿಸಿದರು

error: