April 29, 2024

Bhavana Tv

Its Your Channel

ದಿನಕರ ದೇಸಾಯಿಯವರು ಜನತೆಯ ಕವಿ, ಜನರಿಗಾಗಿ ಬರೆದ ಕವಿಯಾಗಿದ್ದರು – ಡಾ.ಶ್ರೀಪಾದ ಶೆಟ್ಟಿ

ಹೊನ್ನಾವರ: ದಿನಕರ ದೇಸಾಯಿ ಅವರ ಕವನಗಳಲ್ಲಿ ಕಂಡುಬರುವ ವರ್ತಮಾನದ ಎಚ್ಚರ ನಿಜಕ್ಕೂ ಬೆರಗುಗೊಳಿಸುವಂಥದ್ದು. ಜನತೆಯ ಕವಿ, ಜನರಿಗಾಗಿ ಬರೆದ ಕವಿಯಾಗಿದ್ದರು ಎಂದು ಡಾ. ಶ್ರೀಪಾದ ಶೆಟ್ಟಿ ಹೇಳಿದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜನತಾ ವಿದ್ಯಾಲಯ ಕಾಸರಕೋಡು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಿನಕರ ದೇಸಾಯಿಯವರ ಜನ್ಮ ದಿನಾಚರಣೆಯ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ದೇಸಾಯಿಯವರ ಬದುಕು ಬರಹದ ಕುರಿತು ಮಾತನಾಡಿದರು.

ಪ್ರಗತಿಶೀಲ ಕಾಲಾವಧಿಯ ಮುಖ್ಯ ಬರಹಗಾರ ಇಂದೆನ್ನದೆ, ಎಂದೆAದಿಗೂ ಸಲ್ಲುವ ಸಮಾಜವಾದಿ ಕವಿ ಕನ್ನಡಕ್ಕೆ ಸಲ್ಲಿಸಿದ ಕಾಣಿಕೆ ಅನನ್ಯವಾದದ್ದು. ಸಾಮಾನ್ಯ ಜನರಂತಿರುವ ದಾಸಾಳ ದೇಸಾಯಿಯವರ ಕಾವ್ಯ ಜೀವನದ ರೀತಿ ನೀತಿಗಳಿಗೆ ಸಾಕ್ಷಿಯಾಗಿದೆ. ಬಡವರ, ಶೋಷಿತರ ಬದುಕು ಹಸನಾಗಲು ಈ ಕವಿಯ ಕಾವ್ಯ ಆತ್ಮವಿಶ್ವಾಸ ಬಡಿದೆಬ್ಬಿಸುತ್ತದೆ. ಅವರ ಕಾವ್ಯ ಶಕ್ತಿಯನ್ನು ಅರ್ಥೈಸಿಕೊಂಡರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲದು ಎಂದರು. ಅವರ ಬಹುತೇಕ ಕೃತಿಗಳಲ್ಲಿ ಶ್ರಮ ಸಂಸ್ಕೃತಿಯ ಕುರಿತ ಕಾಳಜಿ, ಸಮಾನತೆಯ ಕುರಿತ ಎಚ್ಚರ, ಸರ್ವರಿಗೂ ಸಮ ಬಾಳು ಇರಲೆಂಬ ಆಶಯಗಳನ್ನೇ ಕಾಣಬಹುದು ಎಂದರು.

ದಿನಕರ ದೇಸಾಯಿ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ ಸ್ಪರ್ಧಾ ವಿಜೇತರಿಗೆ ಪುಸ್ತಕ ವಿತರಿಸಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಬಹುಮುಖ ವ್ಯಕ್ತಿತ್ವದ ಅಪರೂಪದ ಕವಿ ದಿನಕರ ದೇಸಾಯಿ ಅವರು ಜನಪರ ಹೋರಾಟದ ಮೂಲಕ ಬದುಕನ್ನು ಕಟ್ಟಿಕೊಂಡು, ಜಿಲ್ಲೆಯ ಕುಗ್ರಾಮದ ಅಕ್ಷರ ವಂಚಿತರ ಬಾಳಿನಲ್ಲಿ ಅಕ್ಷರದ ಬೆಳಕನ್ನು ಹಂಚಿದವರು. ಕೆನರಾ ವೆಲ್ಫೇರ್ ಸಂಸ್ಥೆಯ ಸ್ಥಾಪಕರಾಗಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಕಾರಣಿಕರ್ತರಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಘಟಕಾಧ್ಯಕ್ಷ ಎಸ್. ಎಚ್. ಗೌಡ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ದೇಸಾಯಿಯವರ ಆದರ್ಶ ಬದುಕು ಮಾದರಿಯಾದದ್ದು. ಅವರ ಕೃತಿಗಳನ್ನು ಓದುವುದರ ಮೂಲಕ ಅವರ ಬದುಕಿನ ರೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕರವೇ ಘಟಕದ ಅಧ್ಯಕ್ಷ ಮಂಜುನಾಥ ಗೌಡ, ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಜಿ.ಎಸ್. ಭಟ್ ಮಾತನಾಡಿದರು.

ವಿದ್ಯಾರ್ಥಿಗಳಿಗಾಗಿ ನಡೆಸಿದ ಸ್ಪರ್ಧೆಯಲ್ಲಿ ಕಾವ್ಯ ನಾಯ್ಕ, ಸಂಕೇತ ಗೌಡ ,ಫಾತಿಮಾಮುಸಿ9ದ, ಸಂತೋಷಿ ಪ್ರಭು, ಸಿಂಚನ ಗೌಡ,ಸಹನಾ ಅಂಬಿಗ ವಿಜೇತರಾಗಿ ಪುಸ್ತಕ ಬಹುಮಾನ ಪಡೆದರು.

ಪ್ರಾರಂಭದಲ್ಲಿ ಮುಖ್ಯಾಧ್ಯಾಪಕ ಎಸ್. ಎಸ್. ಶಾಸ್ತ್ರಿ ಸ್ವಾಗತಿಸಿದರೆ, ಶಿಕ್ಷಕ ಅಶೋಕ ಜೋಸೆಫ್ ವಂದಿಸಿದರು. ಸಿಂಚನ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ವಿನಾಯಕ ಶೆಟ್ಟಿ ನಿರೂಪಿಸಿದರು.

error: