April 30, 2024

Bhavana Tv

Its Your Channel

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 19 ನೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆ

ಹೊನ್ನಾವರ :- ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 19 ನೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆಯನ್ನು ರವಿವಾರ ಕುದ್ರಿಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಆಗಮಿಸಿದರು.. ಸಭೆಯ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು ಈ ಸಂಘಟನೆ ಕಳೆದ 20 ವರ್ಷಗಳ ಹಿಂದೆ ರಚನೆ ಆಗಬೇಕು ಹಂಬಲ ಇತ್ತು. ನಮ್ಮ ಈ ಇಚ್ಛೆ ಉತ್ಸಾಹಿ ಹೋರಾಟಗಾರರಿಂದ ರಚನೆಯಾಗಿರುವುದು ಸಂಘಟನೆಯ ಸೇವಾ ಮನೋಭಾವನೆ ಎತ್ತಿ ತೋರಿಸುತ್ತದೆ ಎಂದರು
ಸಭೆಯ ಅಧ್ಯಕ್ಷತೆಯನ್ನು ಜಿ ಎನ್ ಗೌಡರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣ ಮೂರ್ತಿ ಹೆಬ್ಬಾರ್ ಮಾತನಾಡಿ ಸಂಘಟನೆಯ ಉದ್ದೇಶ ಚಿಂತನೆ ಆಯಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಆಗಬೇಕು ಅಂದರು.ಶ್ರೀ ಅಬ್ದುಲ್ ರೆಹಮಾನ್ ಮಾತನಾಡಿ ಸಂಘಟನೆ ಬೆಳವಣಿಗೆಗೆ ಯಾವ ರಾಜಕೀಯ ಅವಶ್ಯಕತೆ ಇಲ್ಲಾ ನಮ್ಮಲ್ಲಿ ಇಚ್ಛಾಶಕ್ತಿ ಪ್ರೀತಿಯ ಗುಣಗಳು ಬೇಕು ಅಂತ ತಿಳಿಯಪಡಿಸಿದರು. ಫೈಸಲ್ ಮಸ್ತಾನ್ ಮಾತನಾಡಿ ಈ ಜನಪರ ವೇದಿಕೆ ಸಮಗ್ರ ಹೊನ್ನಾವರ ದ ಬೆಳವಣಿಗೆ ಪೂರಕವಾಗಿದೆ ಈ ವೇದಿಕೆಯಲ್ಲಿ ಎಲ್ಲರು ಸಮಾನರು ಎಂಬುದನ್ನು ನಾವು ಗಮನಿಸಬೇಕು ಎಂದರು. ಯೋಗೆಶ್ ರಾಯ್ಕರ್ ಮಾತನಾಡಿ ನಮ್ಮಲ್ಲಿ ಸಮಸ್ಯೆ ಇದೆ ಅಂತ ನಾವು ಸುಮ್ಮನೆ ಕೂರಲು ಸಾಧ್ಯನಾ ಅದನ್ನಾ ಒಂದು ಸಂಘಟನೆಯ ಹೋರಾಟದ ಮೂಲಕ ಪಡೇದುಕೊಳ್ಳಲು ನಾವು ಜಾಗ್ರತೆ ವಹಿಸಬೇಕು ಎಂದರು. ಮಹೇಶ್ ಕಲ್ಯಾಣಪುರ ಮಾತನಾಡಿ ನಮ್ಮ ಹೊನ್ನಾವರದ ಸಮಸ್ಯೆಗಳನ್ನು ನಾವು ಅನುಭವಿಸಿದ್ದು ಸಾಕು ಮುಂದಿನ ಪೀಳಿಗೆಗೆ ಆದರು ನಾವೇಲ್ಲರು ನಮ್ಮ ಹೊನ್ನಾವರ ಬೇಡಿಕೆಯನ್ನು ಈಡೇರಿಸಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು . ಎಸ್ ಡಿ ಹೆಗಡೆ ಮಾತನಾಡಿ ನಮಗೆ ರಾಜಕೀಯ ಸ್ವಾತಂತ್ರ‍್ಯ ಮುಖ್ಯ ವಲ್ಲಾ ನಮ್ಮ ಬೇಡಿಕೆ ಈಡೇರಿಕೆಗಾಗಿ ನಾವು ಸ್ವಾತಂತ್ರ‍್ಯ ಪಡೆಯುವ ಇಚ್ಛಾಶಕ್ತಿ ಎಲ್ಲರಲ್ಲಿ ಈಗಲಾದರೂ ಬರಬೇಕು ಎಂದರು.
ಪ್ರಭಾಕರ ಪಟಗಾರ ಮಾತನಾಡಿ ಸಂಘಟನೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಹೋರಾಟದ ಮನೋಭಾವನೆ ಎಂದರು. ಜಿ ಎನ್ ಗೌಡರು ಮಾತನಾಡಿ ಈ ಸಂಘಟನೆಯಲ್ಲಿ ಯಾರ ನಾಯಕತ್ವ ಮುಖ್ಯವಲ್ಲ ಸಂಘಟನೆಯ ಕಾರ್ಯ ಉದ್ದೇಶ ಈಡೇರಿಸಲು ಇರುವ ಒಂದು ಜನಪರ ವೇದಿಕೆ ಇದಕ್ಕೇ ಜನರ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಊರಿನ ಕಾಂತು ನಾಯ್ಕ ಯ್ಯಾಯ ಇವರು ಮಾತನಾಡಿ ನಮ್ಮ ಸಹಕಾರ ಈ ಸಂಘಟನೆಗೆ ಯಾವತ್ತು ಇರುತ್ತೆ ಅಂದರು . ಊರಿನ ಸಮಸ್ತರು ಈ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಮ್ಮ ಹೊನ್ನಾವರ ಕ್ಕೆ ಅವಶ್ಯಕತೆ ಇರುವ ಪ್ರತ್ಯೇಕ ವಿಧಾನಸಭಾ ಕ್ಷೇತ್ರ.ಹೊನ್ನಾವರಕ್ಕೆ ಬ್ಲಡ್ ಬ್ಯಾಂಕ್ ಇತರ ಅವಶ್ಯಕತೆ ಇರುವ ಬಗ್ಗೆ ಸಾರ್ವಜನಿಕರು ಹಕ್ಕೋತ್ತಾಯಕ್ಕೆ ಬೇಂಬಲ ವ್ಯಕ್ತಪಡಿಸಿದರು.

error: