May 17, 2024

Bhavana Tv

Its Your Channel

ಕೆ.ಎಸ್.ಶಾಂತಯ್ಯ ಅನಾರೋಗ್ಯದಿಂದ ನಿಧನ

ಹೊನ್ನಾವರ:-ತಮ್ಮ ಸಹಿ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿದ್ದ ಹೊನ್ನಾವರದ ಉಪನೋಂದಣಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ಕೆ.ಎಸ್.ಶಾಂತಯ್ಯ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಭಾಗದ ಶಿವಗಂಗೆಯವರಾಗಿದ್ದ ಶಾಂತಯ್ಯ, ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರಾಗಿದ್ದರು. ಅನಾವಶ್ಯಕವಾಗಿ ಹೆಚ್ಚು ಮಾತನಾಡುತ್ತಲೂ ಇರಲಿಲ್ಲ. ಹಲವು ಹುದ್ದೆಗಳಲ್ಲಿ ಹಂಗಾಮಿ ನೌಕರರಾಗಿ ಕೆಲಸ ಮಾಡಿ 1994ರಲ್ಲಿ ನೋಂದಣಿ ಅಧಿಕಾರಿಯಾಗಿ ನೇಮಕಗೊಂಡು, ಯಾರೂ ನಕಲು ಮಾಡದ ದೀರ್ಘವಾದ ಹಲವು ಸುಳಿಗಳನ್ನೊಳಗೊಂಡು ತಮ್ಮ ಸಹಿ ಮಾಡುತ್ತಿದ್ದರು. ಇವರ ಮೂಲ ಹೆಸರು ಕಂಬಾಳು ಸೋಮಪುರ ಶಾಂತಯ್ಯ. ಇದನ್ನೇ ಅವರು ಕೆ.ಎಸ್. ಶಾಂತಯ್ಯ ಅಂತಾ ತಮ್ಮ ಸಹಿ ಮೂಲಕ ಅಚ್ಚ ಕನ್ನಡದಲ್ಲಿ ಬರೆಯುತ್ತಿದ್ದರು. ನೂಲು ಹಿಡಿದು ಲೆಕ್ಕಹಾಕಿದರೆ ಇವರ ಸಹಿ 2.6 ಅಡಿ ಉದ್ದ ಇರುತ್ತಿತ್ತು. ಹೀಗಾಗಿ ಇವರನ್ನು ಸಿಗ್ನೇಚರ್ ಶಾಂತಯ್ಯ ಅಂತಲೇ ಕರೆಯಲಾಗುತ್ತಿತ್ತು. ಕೆ.ಎಸ್.ಶಾಂತಯ್ಯ ಅವರು 2017 ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಉಪನೋಂದಣಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ವರ್ಷಗಳ ಹಿಂದಷ್ಟೇ ನಿವೃತ್ತಿಯಾಗಿದ್ದರು. ಅನಾರೋಗ್ಯದ ಕಾರಣ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ 61 ವಯಸ್ಸಿನಲ್ಲೇ ಕೊನೆಯುಸಿರೆಳೆದಿದ್ದಾರೆ.
ವೀರಶೈವ ಲಿಂಗಾಯತ ಸಂಪ್ರದಾಯದAತೆ ಅವರ ಅಂತ್ಯಕ್ರಿಯೆ ನಡೆದಿದ್ದು, ನಿಧನದ ಬಳಿಕ ಅವರ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ವರದಿ:ನರಸಿಂಹ ನಾಯ್ಕ್ ಹರಡಸೆ

error: