May 17, 2024

Bhavana Tv

Its Your Channel

ಜನಪರ ವೇದಿಕೆಯಿಂದ ಹೊನ್ನಾವರ ಉಳಿಸಿ ಬೆಳಸಿ ಸಮಾಲೋಚನೆ ಸಭೆ

ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೊಷೀಯಲ್ ಕ್ಲಬ್ ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಿವರಾಜ್ ಮೇಸ್ತ ಆಗಮಿಸಿದರು.ಸಭೆಯ ಅಧ್ಯಕ್ಷತೆಯನ್ನು ಜಿ ಎನ್ ಗೌಡರು ವಹಿಸಿದ್ದರು.ಸಭೆಯಲ್ಲಿ ಉಪಸ್ಥಿತರಾಗಿ ಸಂಘಟನೆಯ ಗೌ. ಅಧ್ಯಕ್ಷರಾದ ಜೆ ಟಿ ಪೈ. ಸಲಹೆಗಾರರು ರೋಟರಿ ಕ್ಲಬ್ ಅಧ್ಯಕ್ಷರಾದ ಮಹೇಶ್ ಕಲ್ಯಾಣಪುರ.ಡಾ|| ಇಸ್ಮಾಯಿಲ್ ತಲಕಣಿ. ಕೃಷ್ಣಮೂರ್ತಿ ಹೆಬ್ಬಾರ. ಎಸ್ ಡಿ ಹೆಗಡೆ. ಕಾರ್ಯಾಧ್ಯಕ್ಷರಾದ ಎಸ್ ಜಿ ಹೆಗಡೆ ಉಪಸ್ಥಿತರಿದ್ದರು.ಸಭೆಯ ಸ್ವಾಗತವನ್ನು ಶಂಕರ ಗೌಡ ನೆರವೇರಿಸಿದರು.ಸಭೆಯ ಪ್ರಾಸ್ತಾವಿಕವಾಗಿ ಎಸ್ ಜಿ ಹೆಗಡೆ ಮಾತನಾಡಿದರು.ಸಭೆಯ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಶಿವರಾಜ್ ಮೇಸ್ತರವರು ಸಂಘಟನೆಯ ಉದ್ದೇಶ ಬೇಡಿಕೆಗಳು ಹೊನ್ನಾವರದ ಬೆಳವಣಿಗೆಗೆ ಪೂರಕವಾಗಿದೆ ಈ ಸಂಘಟನೆ ಕೇವಲ ಹೊನ್ನಾವರಕ್ಕೆ ಮಾತ್ರ ಸೀಮಿತವಾಗದೆ ಜಿಲ್ಲಾ ಮಟ್ಟದಲ್ಲೂ ಸಹ ಈ ಸಂಘಟನೆ ಬೆಳೆಯಲಿ ಎಂದು ಹಾರೈಸಿದರು. ಎನ್ ಆರ್ ನಾಯಕ ಇವರು ಮಾತನಾಡಿ ಹೊನ್ನಾವರದ ಸಮಸ್ಯೆಗಳು ಬಗೆಹರಿದರೆ ಹೊನ್ನಾವರಕ್ಕೆ ಸುವರ್ಣಯುಗ ಬರುವುದರಲ್ಲಿ ಯಾವುದೇ ಸಂದೇಹವಿಲ್ಲಾ ಈ ಸಂಘಟನೆ ರಾಜ್ಯ ವ್ಯಾಪ್ತಿಯಲ್ಲಿ ಬೆಳೆಯಲಿ ನಾನು ನಿಮ್ಮ ಜೊತೆಯಲ್ಲಿ ಸದಾ ಇರುತ್ತೇನೆ ಅಂದರು. ಶ್ರೀಪಾದ ಶೆಟ್ಟಿ ಮಾತನಾಡಿ ನಾವು ಕೂಡಿ ಬದುಕಬೇಕೆಂಬ ಆಸೆ ಇದ್ದರೆ ಮಾತ್ರ ಹೊನ್ನಾವರದ ಮೆರುಗನ್ನು ಹೆಚ್ಚಿಸಲು ಸಾಧ್ಯ ಎಂದರು. ಇಸ್ಮಾಯಿಲ್ ತಲಕಣಿ ಮಾತನಾಡಿ ಹೊನ್ನಾವರ ಬೆಳವಣಿಗೆ ಆರ್ಥಿಕ ಶಕ್ತಿ ಯ ಅವಶ್ಯಕತೆಯು ಬೇಕು ಎಂದರು. ಮಹೇಶ ಕಲ್ಯಾಣಪುರ ಮಾತನಾಡಿ ಸುಳ್ಳು ಭ್ರಮೆಯಲ್ಲಿ ಜೀವನ ಮಾಡುವ ಬದಲು ನಿಶ್ವಾರ್ಥ ಮನೋಭಾವನೆಯಿಂದ ಬದುಕುವ ಜ್ಞಾನ ಅವಶ್ಯಕತೆ ಇದೆ ಎಂದರು. ಜೆ ಟಿ ಪೈ ಮಾತನಾಡಿ ನಮ್ಮಲ್ಲಿ ಸಮಸ್ಯೆ ಇದೆ ಅಂತ ಅಲ್ಲಿಇಲ್ಲಿ ಮಾತನಾಡುವ ಬದಲು ಒಂದು ಜನಪರ ವೇದಿಕೆಯಿಂದ ಸಮಸ್ಯೆ ಬಗೆಹರಿಸಲು ಸಮಸ್ತರು ಒಂದಾದರೆ ಮಾತ್ರ ಸಾಧ್ಯ ಎಂದರು. ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಹೊನ್ನಾವರ ಚಿನ್ನ ಮಾಡಲು ನಾವು ಚಿನ್ನ ಕದಿಯುವ ಅವಶ್ಯಕತೆ ನಮಗೆ ಇಲ್ಲಾ ಚಿನ್ನದಂತಹ ಮನಸು ಇರುವವರು ನಮ್ಮ ಜೊತೆಯಲ್ಲಿ ಇದ್ದರೆ ಹೊನ್ನಾವರ ಖಂಡಿತ ಬೆಳವಣಿಗೆಗೆ ಹೊಂದಲು ಸಾಧ್ಯ ಎಂದರು. ಎಸ್ ಡಿ ಹೆಗಡೆ ಮಾತನಾಡಿ ನಾವು ಸ್ವತಂತ್ರ ರಾಗಿ ಬದುಕುವ ಬದಲು ಇನ್ನೊಬ್ಬರ ಸ್ವಾತಂತ್ರ‍್ಯದಲ್ಲಿ ಬದುಕುತ್ತಾ ಇದ್ದೇವೆ ಅಂತ ತಿಳಿಯಪಡಿಸಿದರು. ಮಂಜುನಾಥ ಗೌಡ ಮಾತನಾಡಿ ಸಂಘಟನೆಯಲ್ಲಿ ಸೇವಾ ಮನೋಭಾವನೆ ಮುಖ್ಯ ಅಂದರು. ಜಿ ಎನ್ ಗೌಡರು ಮಾತನಾಡಿ ಹೊನ್ನಾವರದ ಬೆಳವಣಿಗೆಗೆ ಜನರ ಕಾಳಜಿ ಮುಖ್ಯ ಆ ಕಾಳಜಿ ಸಮಸ್ತ ಹೊನ್ನಾವರದ ತಾಲೂಕಿನ ಜನತೆಯಲ್ಲಿ ಇದ್ದರೆ ಮಾತ್ರ ಹೊನ್ನಾವರ ಸಮಗ್ರ ಅಭಿವೃದ್ಧಿ ಆಗುತ್ತದೆ ಎಂದರು.ಸಭೆಯಲ್ಲಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ನಾಗರಾಜ ನಾಯ್ಕ. ಪ್ರಭಾಕರ ಪಟಗಾರ. ಜಗದೀಶ್ ನಾಯ್ಕ. ಎಂ ಆರ್ ಹೆಗಡೆ. ರಾಘವೇಂದ್ರ ನಾಯ್ಕ. ಕಾಶಿನಾಥ್ ಭಾಗ್ವತ್.ಕರ್ಕಿ ಪಂಚಾಯತ್ ಸದಸ್ಯ ರಾದ ಹರಿಶ್ಚಂದ್ರ ನಾಯ್ಕ.ಗುತ್ತೀಗೆದಾರರಾದ ಎಸ್ ಕೆ ನಾಯ್ಕ. ರಾಮಪ್ಪ ನಾಯ್ಕ. ಉದಯ ಗೌಡ. ಸಂತೋಷ ಶಾನಭಾಗ. ಅಣ್ಣಪ್ಪ ನಾಯ್ಕ ಮಂಕಿ. ರಾಮಾ ಮೇಸ್ತ. ಶ್ರವಣ.ಮುಂತಾದವರು ಹಾಜರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಗಿರೀಶ ರಾಯ್ಕರ್ ಉಪ್ಪೋಣಿ ನೇರವೇರಿಸಿದರು.

error: