May 6, 2024

Bhavana Tv

Its Your Channel

ಸರ್ ಎಂ ವಿಶ್ವೇಶ್ವರಯ್ಯ ರವರ ಆದರ್ಶಗಳನ್ನು ಪಾಲಿಸೋಣ- ನಾಗೇಶ ರಾಯ್ಕರ್

ಹೊನ್ನಾವರ :-ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಈ ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ ಅವರ ಆದರ್ಶ, ಉದಾತ್ತ ಧ್ಯೇಯಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಉಪಕಾರ್ಯದರ್ಶಿ (ಆಡಳಿತ) ಗಳಾದ ನಾಗೇಶ ರಾಯ್ಕರವರು ತಿಳಿಸಿದರು.

ಅವರು ದಿನಾಂಕ 15-09-2022 ರಂದು ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಆಯೋಜಿಸಿದ ಇಂಜಿನಿಯರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಕರ್ನಾಟಕ ನಿರ್ಮಾಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆಗಳು ಜೀವನದ ಸಾಧನೆಗಳನ್ನು ಸ್ಮರಿಸುತ್ತಾ ಮೈಸೂರು ಸಂಸ್ಥಾನದಲ್ಲಿ ಪ್ರಧಾನ ಇಂಜಿನಿಯರ್ ಮತ್ತು ದಿವಾನರಾಗಿ ಸಮಗ್ರ ಭಾರತವೇ ತಮ್ಮತ್ತ ನೋಡುವಂತಹ ಯೋಜನೆಗಳ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಹಾಗೂ ಅವರ ಅಪಾರ ಜ್ಞಾನ, ಸಮಯ ಪಾಲನೆ ಕೆಲಸದಲ್ಲಿ ಅಚ್ಚುಕಟ್ಟುತನ, ಪ್ರಾಮಾಣಿಕ ಕಾರ್ಯಗಳನ್ನು ಸ್ಮರಿಸಿದರು. ಹಾಗು ಅವರು ತೋರಿಸಿದ ಸನ್ಮಾರ್ಗದಲ್ಲಿ ಯುವ ಅಭಿಯಂತರರು ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥತಿತರಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ನಾಯ್ಕ ರವರು ಇಂಜಿನಿಯರ್ ದಿನಾಚರಣೆಯ ಮಹತ್ವ, ರಾಷ್ಟ್ರನಿರ್ಮಾಣದಲ್ಲಿ ಇಂಜಿನಿಯರ್ ಗಳ ಪಾತ್ರದ ಕುರಿತು ವಿವರಿಸಿದರು. ವೇದಿಕೆಯಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಕೃಷ್ಣಾನಂದ ಕೆ ರವರು ಉಪಸ್ಥಿತರಿದ್ದರು. ತಾಲೂಕ ಪಂಚಾಯತ ಅಭಿಯಂತರರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ತಾಲೂಕ ಪಂಚಾಯತ ಸಿಬ್ಬಂದಿ ಬಾಲಚಂದ್ರ ನಾಯ್ಕ ಸ್ವಾಗತಿಸಿ ವಂದಿಸಿದರು.

error: