May 4, 2024

Bhavana Tv

Its Your Channel

ಹೊನ್ನಾವರದ ರೋಟರಿ ಭವನದಲ್ಲಿ ವಿಧ್ಯಾರ್ಥಿಗಳಿಗಾಗಿ ಇಂಟರಾಕ್ಟ ಕ್ಲಬ್ ಇನಸ್ಟಾಲೇಶನ್ ಮತ್ತು ವಿಧ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಹೊನ್ನಾವರ:- ಬುಧವಾರದಂದು ಹೊನ್ನಾವರದ ರೋಟರಿ ಭವನದಲ್ಲಿ ವಿಧ್ಯಾರ್ಥಿಗಳಿಗಾಗಿ ಇಂಟರಾಕ್ಟ ಕ್ಲಬ್ ಇನಸ್ಟಾಲೇಶನ್ ಮತ್ತು ವಿಧ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ರೋಟರಿ ಕ್ಲಬ್ ಹೊನ್ನಾವರದ ವತಿಯಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಇನಸ್ಟಾಲೇಶನ್ ಆಫಿಸರ ಅಗಿ ಆಗಮಿಸಿದ ರೋಟೆರಿಯನ್. ಕಿರಣ ಹಿರೆಮಠ (ಡಿ.ಸಿ.ಸಿ ಯುಥ್ ಅಂಡ್ ಪಾರ್ಟ್ನರ್ ಇನ ಸರ್ವಿಸ್, ಇಂಟರಾಕ್ಟ ಕರ್ನಾಟಕ) ಮುಖ್ಯ ಅತಿಥಿಇಗಳಾಗಿ ಜಿ.ಎಸ್.ನಾಯ್ಕ (ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊನ್ನಾವರ) ಅಥಿತಿಗಳಾಗಿ ಸುದೇಶ ನಾಯ್ಕ (ಯುವಜನಾ ಸೇವಾ ಮತ್ತು ಕ್ರೀಡಾಧಿಕಾರಿ)ರವರು ಭಾಗವಹಿಸಿದರು.

ಪ್ರಾಸ್ತಾವಿಕವಾಗಿ ಅತಿಥಿಇಗಳನ್ನು ಸ್ವಾಗತಿಸಿ   ಮಾತನಾಡಿದ ರೋಟರಿ ಹೊನ್ನಾವರದ ಅಧ್ಯಕ್ಷರಾದ ಮಹೇಶ ಕಲ್ಯಾಣಪುರರವರು ಪ್ರತಿಯೋಂದು ಶಾಲೆಗಳಲ್ಲಿ ಇಂದಿನಿAದ ಪ್ರಾರಂಭವಾಗುವ ಇಂಟರಾಕ್ಟ ಕ್ಲಬ್‌ಗಳಲ್ಲಿ  ಹೆಣ್ಣು ಮಕ್ಕಳ ಸಬಲಿಕರಣ, ಸಾಮಾಜಿಕ ಜಾಲತಾಣಗಳ ನಿರ್ವಹಣೆ, ವ್ಯಕ್ತಿತ್ವ ಅಭಿವೃದ್ಧಿ,  ಸಾರ್ವಜನಿಕ ಸೇವಾ ಯೋಜನೆಗಾಗಿ ವಿಭಾಗಗಳನ್ನು ಮಾಡಿ  ವಿಧ್ಯಾಭ್ಯಾಸದ ಜೊತೆಗೆ  ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಲಹೆಯನ್ನು ನಿಡಿದರು. ಪ್ರತಿ ವರ್ಷ 1 ನವೇಂಬರರಿAದ 7 ನವೇಂಬರವರೆಗೆ "ವಿಶ್ವ ಇಂಟರಾಕ್ಟ ವೀಕ್" ಎಂದು ಆಚರಿಸಲಾಗುತ್ತಿದೆ. ಹೊನ್ನಾವರದಲ್ಲಿರುವ 14 ಇಂಟರಾಕ್ಟ ಕ್ಲಬ್ ತಮ್ಮ  ಶಾಲೆಗಳಲ್ಲಿ ವಿಶ್ವ ಇಂಟರಾಕ್ಟ ವೀಕ್ ಆಚರಿಸಿ ತಾವು ತಯಾರಿಸಿದ ಯೋಜನಾಕಾರ್ಯಗಳ ವಿಡಿಯೋ ಚಿತ್ರಿಕರಣಗಳನ್ನು ಮಾಡಿ ನಮಗೆ ಕಳುಹಿಸಿದ್ದಲ್ಲಿ ಅದನ್ನು ರೋಟರಿ ಇಂಟರ್‌ನ್ಯಾಶನಲ್‌ನಲ್ಲಿ ಜರಗುವ ಸ್ಪರ್ದೆಗೆ ಕಳುಹಿಸಲಾಗುವುದು. ಸ್ಪರ್ದೆಯಲ್ಲಿ ವಿಜೇತರಿಗೆ ಪ್ರಶಸ್ತಿಯ ಜೋತೆಗೆ 1000 ಢಾಲರ ಬಹುಮಾನ ಗೆಲ್ಲುವ ಅವಕಾಶವಿದ್ದು ವಿಧ್ಯಾರ್ಥಿಗಳು ಸಕ್ರಿಯವಾಗಿ ಪಾಲಗೊಳ್ಳಬೇಕೆಂದು ಹುರಿದುಂಬಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ನಾಯ್ಕರವರು ಮಾತನಾಡಿ ವರ್ಷವಿಡಿ ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ. ಅದರಲ್ಲು ವಿಶೇಷವಾಗಿ ಕೇವಲ ರೋಟರಿ ಕ್ಲಬ್‌ವತಿಯಿಂದ ಶಾಲೆಗಳಿಗೆ ಬೇಕಾಗುವ ಸಾಮಗ್ರಿಗಳ ಪೋರೈಕೆ ಮಾಡುವುದರ ಜೋತೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ವಿಧ್ಯಾರ್ಥಿ ವೇತನ ನಿಡಿ ಪ್ರೋತ್ಸಾಹಿಸುವಂತಹ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.

ಇವೆಂಟ ಚರ‍್ಮೇನ್ ರೋಟೆರಿಯನ್ ಸತಿಶ ಭಟ್‌ರವರು ಮಾತನಾಡಿ ಕಾರ್ಯಕ್ರಮದ ಮುಖ್ಯ ಭಾಗವಾಗಿ ದಿ. ರೋಟೆರಿಯನ್ ಎಂ.ಎನ್ ಪ್ರಭುರವರ ಸ್ಮರಣಾರ್ಥ ಎಲ್ಲಾ ರೋಟರಿ ಪರಿವಾರದವರು ಸೇರಿ ತಮ್ಮ ವ್ಯಯಕ್ತಿಕ ಸಹಕಾರದಿಂದ ದೇಣಿಗೆಯನ್ನು ಸಂಗ್ರಹಿಸಿ ಪ್ರತಿ ವರ್ಷ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನಿಡುತ್ತಾ ಬಂದಿರುತ್ತೆವೆ. ಈ ವರ್ಷ ಎಸ.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ 24 ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರದ ಜೋತೆಗೆ ವಿಧ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಕೊರಿದರು.

ರೋಟೆರಿಯನ್ ದಿನೇಶ ಕಾಮತರವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ರೋ. ಡಾ ಗಾಯತ್ರಿ ಗುನಗಾರವರು ಒಂದನಾರ್ಪಣೆಯನ್ನು ನೇರವೇರಿಸಿದರು. ಸಭೆಯಲ್ಲಿ ರೋ. ಗಣೆಶ ಹೆಗಡೆ, ರೋ, ಸ್ಟಿಫನ್ ರೊಡ್ರಗೀಸ್, ರೋ, ಜಿ.ಪಿ. ಹೆಗಡೆ, ರೋ.ನಸ್ರುಲ್ಲಾ ಸಿಧ್ಧಿ, ರೋ. ಡಾ. ರಂಗನಾಥ ಪೂಜಾರಿ ರೋ.ಡಾ. ಕಿರಣ ಬಳ್ಕೂರ ಉಪಸ್ಥಿತರಿದ್ದರು

error: