May 17, 2024

Bhavana Tv

Its Your Channel

ನಿರ್ವಹಣೆ ಇಲ್ಲದೇ ಸೊರಗಿದ ಅರಣ್ಯ ಇಲಾಖೆಯ ಪ್ರಭಾತವನ ಉದ್ಯಾನವನ

ಹೊನ್ನಾವರ ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲೋನಿ ಮತ್ತು ಕೆ ಎಚ್ ಬಿ ಕಾಲೋನಿಯ ಮಧ್ಯದಲ್ಲಿರುವ ಅರಣ್ಯ ಇಲಾಖೆಯಿಂದ ನಿರ್ಮಿಸಿದ ಉದ್ಯಾನವನ ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ಸೂರಗುತ್ತಿದ್ದು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಇಲ್ಲಿಯ ನಿವಾಸಿಗಳ ಅಗ್ರಹವಾಗಿದೆ.


ಇಲ್ಲಿಯ ಪ್ರಭಾತನಗರ, ಫಾರೆಸ್ಟ್ ಕಾಲೋನಿ, ಕೆ ಎಚ್ ಬಿ ಕಾಲೋನಿ, ರಜತಗಿರಿ ಒಳಗೊಂಡ ಅತೀ ಹೆಚ್ಚಿನ ಜನಪ್ರದೇಶವಾದರೂ ಯಾವದೇ ಉದ್ಯಾನವನದ ಸೌಲಭ್ಯ ವಂಚಿತ ಪ್ರದೇಶ ಆಗಿರುವದನ್ನು ಮನಗಂಡು 2015 ರಲ್ಲಿ ಆಗಿನ ಅರಣ್ಯಧಿಕಾರಿಗಳಾದ ಎಸ್ ರಮೇಶ್ ರವರು ಉತ್ತಮ ಜಾತಿಯ ಗಿಡಗಳನ್ನು ಹಚ್ಚಿ ಮದ್ಯದಲ್ಲಿ ಪ್ಯಾರಗೋಲ್ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ನೀಡಲಾಯಿತು. ಆದರೆ ಅವರ ವರ್ಗಾವಣೆ ನಂತರ ನಿರ್ವಹಣೆ ಕೊರತೆಯಿಂದ ಉತ್ತಮ ಜಾತಿಯ ಗಿಡಗಳು ನಾಶವಾಗುತ್ತ ಹೋದವು.
ಪ್ರತಿವರ್ಷ ಉದ್ಯಾನವನದ ಗಿಡಗಂಟಿಗಳನ್ನು ತೆರವುಗೊಳಿಸುವದೇ ಕಷ್ಟದ ಕೆಲಸ ಆದರೂ ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿಯ ನಿವಾಸಿಗಳ ನೆರವು ಮತ್ತು ಪಟ್ಟಣ ಪಂಚಾಯತದ ಸಹಕಾರದಿಂದ ಸ್ವಚ್ಛಮಾಡಲಾಗುತ್ತಿದೆ. ಸುತ್ತಲಿನ ತಂತಿ ಬೇಲಿ ಜೀರ್ಣಾವಸ್ಥೆಗೆ ಬಂದಿದ್ದು ಹೊಸದಾಗಿ ನೆಟ್ಟ ಗಿಡಗಳು ಕೂಡ ದನಕರುಗಳ ಪಾಲಾಗುತ್ತಿದೆ.ಉದ್ಯಾನವನದ ವಾಕಿಂಗ್ ಪಾತ್ ಗೆ ಪಟ್ಟಣ ಪಂಚಾಯತ್ ನಮ್ಮ ಮನವಿಗೆ ಸ್ಪಂದಿಸಿ ಅರ್ಧ ಇಂಟರಲಾಕ್ ಅಳವಡಿಸಿದ್ದು ಪೂರ್ತಿ ಗೊಳಿಸುವ ಭರವಸೆ ನೀಡಿದೆ. ಮಳೆಗಾಲದಲ್ಲಿ ವಾಕಿಂಗ್ ಬರುವವರು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಉಂಟು. ದೀಪದ ವ್ಯವಸ್ಥೆ, ಮಕ್ಕಳ ಆಟಿಕೆ, ಹಿರಿಯ ನಾಗರಿಕರಿಗೆ ವ್ಯಾಯಾಮದ ಪರಿಕರ ಅವಶ್ಯಕತೆ ಇದೆ. ಇಲ್ಲಿಯ ಹಿರಿಯ ನಾಗರಿಕರು ವಾಕಿಂಗ್ ಮಾಡಲು ಸೂಕ್ತ ಸ್ಥಳ ಇಲ್ಲದೇ ಹೆದ್ದಾರಿಯಲ್ಲಿ ತಿರುಗಾಡಿ ಅಲ್ಲಿಯ ಬದಿಯ ಕಟ್ಟೆಯಲ್ಲಿ ಕೂಡ್ರುವದನ್ನು ಕಾಣಬಹುದು. ಇಲ್ಲಿ ನಿರ್ಮಿಸಿದ ಪ್ಯಾರಗೋಲ್ ದಲ್ಲಿ ಕಾಲೇಜು ವಿದ್ಯಾರ್ಥಿಗಳು ಬಂದು ಮೋಜು ಮಸ್ತಿ ಮಾಡಿ ತ್ಯಾಜ್ಯ ಅಲ್ಲೇ ಚೆಲ್ಲಿ ಹೋಗುತ್ತಿದ್ದು ಅದರ ಸ್ವಚ್ಛತೆಯೇ ಸವಾಲಿನ ಕೆಲಸ.
ಉದ್ಯಾನವನ ಅರಣ್ಯ ಇಲಾಖೆ ನಿರ್ಮಿಸಿರುವದರಿಂದ ಪಟ್ಟಣ ಪಂಚಾಯತ ಕೂಡ ಅದರ ಅಭಿವೃದ್ಧಿಗೆ ಹಿಂದು ಮುಂದು ನೋಡುತ್ತಿದೆ. ಕಾಲಕಾಲಕ್ಕೆ ಉದ್ಯಾನವನ ಸ್ವಚ್ಛಗೊಳಿಸಿ ಸುಂದರವಾಗಿ ಇರಿಸುವದು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯತದ ಜವಾಬ್ದಾರಿಯಾಗಿದೆ. ಇಲ್ಲಿಯ ನಿವಾಸಿಗಳು ಪಟ್ಟಣ ಪಂಚಾಯತಗೆ ಹೆಚ್ಚಿನ ತೆರಿಗೆ ತುಂಬುವುದರಿAದ ಅವರ ಆರೋಗ್ಯದ ಹಿತದೃಷ್ಟಿಯಿಂದ ಉದ್ಯಾನವನ ಅಭಿವೃದ್ಧಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವದು ಅವಶ್ಯಕತೆ ಇದೆ.6 ತಿಂಗಳ ಹಿಂದೆ ಹುಡುಗರ ಪುಂಡಾಟಕ್ಕೆ ಪಾರ್ಕ್ ನ ಅಮೂಲ್ಯ ಗಿಡಗಳು ಬೆಂಕಿಗೆ ಅಹುತಿಯಾದ ಘಟನೆ ಕೂಡ ನಡೆದಿದೆ. ಶಾಸಕರಿಗೆ, ಅರಣ್ಯಧಿಕಾರಿಗಳಿಗೆ, ಪಟ್ಟಣ ಪಂಚಾಯತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನೆ ಇಲ್ಲ.
ಇಲ್ಲೊಂದು ಪರಿಸರ ಪ್ರೇಮಿ ಕುಟುಂಬ ಪ್ರಚಾರ ಬಯಸದೆ ಅರಣ್ಯ ಇಲಾಖೆಯ ನರ್ಸರಿಯಿಂದ ಹಣ ಕೊಟ್ಟು ನೂರಕ್ಕೂ ಅಧಿಕ ಗಿಡಗಳನ್ನು ಸ್ವತಃ ಹೊಂಡ ತೆಗೆದು ಅರಣ್ಯ ಪ್ರದೇಶ, ಹೆದ್ದಾರಿ ಪಕ್ಕ, ಶಾಲೆ, ಕಾಲೇಜಿನ ಮೈದಾನ, ಪಾರ್ಕ್ ಗಳಲ್ಲಿ ಗಿಡ ನೆಟ್ಟು ಸಂತಸ ಪಡುವ ತಾಯಿ ಸುಮನಾ ಹೆಗ್ಡೆ ಮತ್ತು ಮಗಳು ಡಾ. ವಿದ್ಯಾ ಇವರ ಪರಿಸರ ಸೇವೆ ಇತರರಿಗೂ ಮಾದರಿ. ಇವರು ಪ್ರಭಾತವನ ಉದ್ಯಾನವನದಲ್ಲಿ ಕೂಡ ಗಿಡ ನೆಟ್ಟು ತಮ್ಮಕೊಡುಗೆ ನೀಡಿದ್ದಾರೆ.

error: