February 28, 2024

Bhavana Tv

Its Your Channel

ಬಿ.ಎಸ್ಸಿ. ಯಲ್ಲಿ ಎಸ್.ಡಿ.ಎಂ. ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ:- ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಎಸ್ಸಿ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿ.ಎಸ್ಸಿ. 6 ನೇ ಸಮಿಸ್ಟರ್‌ನ 74 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ 94.12 ಫಲಿತಾಂಶ ದಾಖಲಾಗಿದೆ.
ಆಶ್ರಿತಾ ಹೆಗಡೆ 93.89%, ಓಫಿಯಾ ಸಾಬ್ 93.78% ಹಾಗೂ ನಿಧಿ ಬಲಿಮನೆ 92.67% ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

error: