April 27, 2024

Bhavana Tv

Its Your Channel

ಅನಂತವಾಡಿ ಗ್ರಾಮಪಂಚಾಯತನ ಕೋಟ, ತುಂಬೆಬೀಳು, ಅನಂತವಾಡಿ, ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ ರಚನೆ,

ಹೊನ್ನಾವರ ; ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡು ಕೊಳ್ಳಲು ತುಂಬೆಬೀಳು ಹಾಗೂ ಕೋಟ ಗ್ರಾಮದ ಸಾರ್ವಜನಿಕರು ಸೇರಿ ದಿನಾಂಕ ೦೪-೧೨-೨೦೨೨ ರಂದು ಕಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಸಭೆ ಸೇರಿ ಎಲ್ಲರು ಒಮ್ಮತದಿಂದ ರೈಲ್ವೆ ಗೇಟ್ ಮೇಲ್ಸೇತುವೆ ಗಾಗಿ ಒಂದು ಸಮಿತಿ ರಚಿಸಿ ಆ ಸಮಿತಿಗೆ ತುಂಬೆಬೀಳು, ಕೋಟ, ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ ಎಂದು ಹೆಸರಿಸಿದ್ದು, ಈ ಸಮಿತಿ ಮುಂದಿನ ದಿನಗಲ್ಲಿ ರೈಲ್ವೆ ಗೇಟ್ ಮೇಲ್ಸೇತುವೆ ಆಗುವವರೆಗೂ ಚಾಲ್ತಿಯಲ್ಲಿರುತ್ತದೆ ಎಂದು ಸಮಿತಿಯವರು ಮಾದ್ಯಮದವರಿಗೆ ತಿಳಿಸಿದ್ದಾರೆ.

ಸಮಿತಿಗೆ ಅಧ್ಯಕ್ಷರನ್ನಾಗಿ ಗಜಾನನ ಡಿ. ನಾಯ್ಕ್ ತುಂಬೆಬೀಳು, ಉಪಾಧ್ಯಕ್ಷರನ್ನಾಗಿ ಪಾಂಡು ಶಂಕರ ಗೌಡ ಕೋಟ, ಕಾರ್ಯದರ್ಶಿ ಯಾಗಿ ರಾಮಕೃಷ್ಣ ಈರಪ್ಪ ನಾಯ್ಕ್ ತುಂಬೆಬೀಳು, ಖಜಾಂಚಿ ಯಾಗಿ ಗಣಪತಿ ನಾಯ್ಕ್ ಕೋಟ, ಸದಸ್ಯರಾಗಿ ಪ್ರಶಾಂತ್ ಅನಂತ ನಾಯ್ಕ್ ತುಂಬೆಬೀಳು, ಶಂಕರ ಗೋವಿಂದ ಗೌಡ ಕೋಟ, ಶ್ರೀಮತಿ ಪಾರ್ವತಿ ಧರ್ಮ ನಾಯ್ಕ್ ತುಂಬೆಬೀಳು ಗಣಪತಿ ಮಾದೇವ ನಾಯ್ಕ್ ಕೋಟ ಲಂಬೋದರ್ ಬಿಳಿಯ ಗೌಡ ಕೋಟ ಪ್ರಶಾಂತ್ ಮಂಜುನಾಥ್ ನಾಯ್ಕ್ ತುಂಬೆಬೀಳು ಹಾಗೂ ಹರೀಶ್ ಮಂಜು ಗೌಡ ಕೋಟ, ಇವರುಗಳನ್ನು ಸದಸ್ಯರುಗಳನ್ನಾಗಿ ನೇಮಿಸಲಾಯಿತು.
ಊರಿನ ಹಿರಿಯ ಸಲಹೆಗರಾರನ್ನಾಗಿ ಮಾದೇವ ಕುಪ್ಪ ನಾಯ್ಕ್ ತುಂಬೆಬೀಳು, ಅಮಕುಸ್ ಗೌಡ ಕೋಟ ಇವರುಗಳನ್ನು ನೇಮಿಸಲಾಯಿತು. ಸಮಿತಿಯ ಮಾರ್ಗದರ್ಶನ ದೊಂದಿಗೆ ಹಾಗೂ ಊರಿನ ಪ್ರತಿಯೊಬ್ಬರ ಸಹಾಯ ಸಹಕಾರದೊಂದಿಗೆ ಮುಂದಿನ ಹೋರಾಟದ ಬಗ್ಗೆ ಮುಂದಿನ ಸಭೆ ಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

error: